ಚಿಕ್ಕಮಗಳೂರು– ರಾಜ್ಯಸರ್ಕಾರ ಜನಗಣತಿಗೆ ಮುಂದಾಗಿ ವೀರಶೈವ ಮತ್ತು ಲಿಂಗಾಯಿತರ ಮಧ್ಯೆ ಬಿರುಕು ಮೂಡಿಸಿ ಬೇರ್ಪಡಿಸುತ್ತಿರುವುದು ಖಂಡನೀಯ ಎಂದು ಅಖಿಲ ಭಾರತ ವೀರ ಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್ ಹೇಳಿದ್ದಾರೆ.
ಜನಗಣತಿಗೆ ವೀರಶೈವ ಲಿಂಗಾಯತರಿಂದ ಧಿಕ್ಕಾರವಿದೆ. ವೀರಶೈವ ಮತ್ತು ಲಿಂಗಾಯಿತರಲ್ಲಿ ಎಲ್ಲಾ ರೀತಿಯ ಕಾಯಕ ಮಾಡುವವರಿದ್ದಾರೆ. ಹೀಗಾಗಿ ಸಮುದಾಯವನ್ನು ಬೇರ್ಪಡಿಸಿ ಬೇಕಾದ ರೀತಿ ಮಾ ರ್ಪಾಡಿಸುತ್ತಿರುವುದಕ್ಕೆ ತೀವ್ರ ವಿರೋಧವಿದೆ ಎಂದಿದ್ದಾರೆ.
ಕೂಡಲೇ ಜನಗಣತಿ ಕೈಬಿಟ್ಟು ಹೊಸದಾಗಿ ಜನಗಣತಿ ಆಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾ ಗುತ್ತದೆ. ಈ ಹೋರಾಟದಿಂದ ಅಹಿತಕರ ಘಟನೆ ಸಂಭವಿಸಿದರೆ ರಾಜ್ಯಸರ್ಕಾರವೇ ನೇರ ಹೊಣೆಹೊರಬೇ ಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
– ಸುರೇಶ್ ಎನ್.