ಚಿಕ್ಕಮಗಳೂರು:- ಇತ್ತೀಚೆಗೆ ಬಿಹಾರ ಹಾಗೂ ಉತ್ತರಖಂಡ್ ರಾಜ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಗೌಡನಹಳ್ಳಿ ಗ್ರಾಮದ ಜಿ.ಕೆ. ಅನುಷಾ ಹಾಗೂ ಟೌನ್ ಕೋ ಆಪರೇಟಿವ್ ಸೊಸೈಟಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಯೋಗೀ ಶ್ ಅವರಿಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ|| ಡಿ.ಎಲ್.ವಿಜಯ್‌ಕುಮಾರ್, ರೇಖಾ ಹುಲಿಯಪ್ಪಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರುಗಳಾದ ಬಿ. ಹೆಚ್.ಹರೀಶ್, ಉಪ್ಪಳ್ಳಿ ಕೆ.ಭರತ್, ಹೆಚ್.ಪಿ.ಮಂಜೇಗೌಡ, ಬಿ.ಎಂ.ಸಂದೀಪ್, ಮಲ್ಲೇಶಸ್ವಾಮಿ, ಕುಸುಮ ಭರತ್, ತನೋಜ್‌ನಾಯ್ಡು ಮತ್ತಿತರರು ಹಾಜರಿದ್ದರು.
– ಸುರೇಶ್ ಎನ್.