
ಚಿಕ್ಕಮಗಳೂರು-ಕಳೆದ ಮಂಗಳವಾರ ಜಿಲ್ಲೆಯ ಬಯಲಿನ ತುದಿ ಶಿವನಿಯಲ್ಲಿ ನಡೆದ ಪಂಚ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ತೆರಳಿದ್ದೆ. ಮಾರ್ಗದ ಮಧ್ಯೆ ನನ್ನ ದಶಕಗಳ ಮಿತ್ರ 6ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಬುಕ್ಕಾಂಬುಧಿ ಗುರುಮೂರ್ತಿ ಅವರ ಕರೆಯ ಮೇರೆಗೆ ಪಂಚಾಯತಿ ಕಚೇರಿಗೆ ಭೇಟಿ ಕೊಟ್ಟೆ.
ಅಚ್ಚುಕಟ್ಟಾದ ಕಟ್ಟಡ ನಗುಮುಖದಿಂದ ಸ್ವಾಗತಿಸಿದ ಅಧ್ಯಕ್ಷರು, ಸದಸ್ಯರು ಹಾಗೂ ನೌಕರರ ವಿವರಣೆಯಿoದಾಗಿ, ಸ್ವಲ್ಪ ಹೊತ್ತು ಕೂತು ಪಂಚಾಯಿತಿ ಬಗ್ಗೆ ತಿಳಿಯುವ ಆಸೆ ಆಯಿತು.
ನನ್ನ ತಾಲೂಕಿನ ಈ ಪಂಚಾಯಿತಿ ಹಲವು ವಿಷಯಗಳಲ್ಲಿ ಇತರೆ ಪಂಚಾಯಿತಿಗಳಿಗೆ ಮಾದರಿ ಅನ್ನಿಸಿತು ಹೀಗಾಗಿ ಇದನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಕೆನಿಸಿತು ಅದಕ್ಕಾಗಿ ಈ ಪುಟ್ಟ ಲೇಖನ.
ಬುಕ್ಕಾಂಬುದಿ ಶ್ರೀ ಸಿದ್ದಲಿಂಗೇಶ್ವರರ ತಪೋಭೂಮಿ. ಅಲ್ಲಿನ ಬಹುದೊಡ್ಡ ಕೆರೆ ಸಾವಿರಾರು ಎಕರೆ ಭೂಮಿಗೆ ನೀರು ಉಣಿಸುತ್ತದೆ. ಹೀಗಾಗಿ ಈ ಭಾಗ ಸದಾ ಅಡಿಕೆ, ತೆಂಗು ಹಾಗೂ ಬಾಳೆಗಳಿಂದ ಕಂಗೊಳಿಸುತ್ತದೆ.ಇoತಹ ಶ್ರೀಮಂತಿಕೆಯೊoದಿಗೆ ಇಲ್ಲಿ ಹೃದಯವಂತ ಜನರು ಬಹುತೇಕರಿದ್ದಾರೆ. 8 ಗ್ರಾಮಗಳನ್ನು ಹೊಂದಿರುವ 17 ಸದಸ್ಯರ ಎ ಗ್ರೇಡ್ ಪಂಚಾಯಿತಿ ಇದಾಗಿರುತ್ತದೆ. ಚಿತ್ರದುರ್ಗಕ್ಕೆ ಸಾಗುವ ಮುಖ್ಯರಸ್ತೆಯಲ್ಲಿ ಉತ್ತಮ ಮತ್ತು ವಿಶಾಲವಾದ ನೂತನ ಕಟ್ಟಡ ಈ ಊರಿಗೊಂದು ಶೋಭೆ ತಂದಿದೆ.

ಪಂಚಾಯಿತಿ ಆವರಣದೊಳಗೆ ಪ್ರವೇಶಿಸಿದ್ದಂತೆ ಎತ್ತರದ ಧ್ವಜಕಟ್ಟೆ ,ನೆಲಮಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ,ಕಾರ್ಯದರ್ಶಿಗಳಿಗೆ ಅಲ್ಲದೆ ಕಂಪ್ಯೂಟರ್ ಮತ್ತು ಇತರೆ ವಿಭಾಗಗಳಿಗೆ ಕೊಠಡಿಗಳಿವೆ .ಸಾರ್ವಜನಿಕರು ಕೂರಲು ವಿಶಾಲವಾದ ಹಜಾರ ಸರ್ಕಾರದ ವಿವಿಧ ಯೋಜನೆಗಳನ್ನು ಸದಾ ಬಿತ್ತರಿಸುವ ಟಿವಿ ಪರದೆ ಕಚೇರಿಗೆ ಕಳೆ ತಂದಿದೆ. ಮೊದಲ ಅಂತಸ್ತಿನಲ್ಲಿ ನೂರಕ್ಕೂ ಹೆಚ್ಚು ಜನರು ಕೂರಬಹುದಾದ ವಿಶಾಲವಾದ ಸಭಾ ಕೊಠಡಿ ಕಾರ್ಪೊರೇಟ್ ಕಚೇರಿಗೆ ಸಾಟಿ ಎನ್ನುವ ಕುರ್ಚಿ ಮೇಜುಗಳು, ಏನಿಲ್ಲಾ ಇಲ್ಲಿ ಎಲ್ಲವೂ ಅಚ್ಚುಕಟ್ಟಾಗಿದೆ.
ನಾಚಿಕೊಳ್ಳುತ್ತಲೇ ಕುರ್ಚಿಗೆ ಕೂರಲು ಹಿಂದೇಟು ಹಾಕಿದ ಅಧ್ಯಕ್ಷೆ ಶ್ರೀಮತಿ ಕವಿತಾ ರವರಿಗೆ, ಹೇಳಿದೆ ಪ್ರಜಾಪ್ರಭುತ್ವದ ಭಾಗ್ಯ ಇದು. ಈ ಕುರ್ಚಿ ನಿಮ್ಮದು ಮುಜುಗರವಿಲ್ಲದೆ ಕುಳಿತುಕೊಳ್ಳಿ, ನಿಮ್ಮ ಸಂಕೋಚವನ್ನು ದುರ್ಬಲಗೊಳಿಸಿಕೊಂಡಾರು ಎಂದೆ. ಆಗ ಬಹುತೇಕ ಮಹಿಳಾ ಸದಸ್ಯರು ಇಲ್ಲ ಸರ್ ಹಾಗೆ ಆಗೋಕೆ ಬಿಡಲ್ಲ,ನಾವೆಲ್ಲ ಒಗ್ಗಟ್ಟಾಗಿದ್ದೇವೆ ಹಿರಿಯರಾದ ಗುರುಮೂರ್ತಣ್ಣ ನಮ್ಮನ್ನೆಲ್ಲ ಅಕ್ಕ ತಂಗಿಯರoತೆ ನೋಡ್ತಾರೆ ಎಂಬ ಒಗ್ಗಟ್ಟಿನ ಮಂತ್ರ ಕೇಳಿ ಇನ್ನಷ್ಟು ಸಂತೋಷವಾಯಿತು.
ಇನ್ನು ಪಂಚಾಯಿತಿ ಯುವ ಪಿಡಿಓ ಪಂಚಾಯಿತಿಯ ಅಭಿವೃದ್ಧಿ ಮತ್ತು ತಾಂತ್ರಿಕ ವಿವರಗಳನ್ನು ನೀಡಲು ಮುಂದಾದರು. ಸರ್ ನಾವು ಕಳೆದ ವರ್ಷ ಜಿಲ್ಲಾ ಪಂಚಾಯಿತಿ ಕರೆಯ ಮೇರೆಗೆ ಗುರಿ ಮೀರಿದ ಕಂದಾಯ ವಸೂಲಿ ಮಾಡಿದ್ದೇವೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 98 ಲಕ್ಷಗಳನ್ನು ಸಂಗ್ರಹಿಸಿದ್ದೇವೆ. ದಶಕಗಳಿಂದ ವಾಸವಾಗಿದ್ದ ಮನೆ , ಖಾಲಿ ನಿವೇಶನಗಳು ಕಂದಾಯ ಕಟ್ಟುತ್ತಿರಲಿಲ್ಲ ಮತ್ತು ಅವುಗಳಿಗೆ ದಾಖಲೆ ಇರಲಿಲ್ಲ. ಇಂತಹ 386 ಆಸ್ತಿಗಳನ್ನು ದಾಖಲೆಗೊಳಿಸಿ ಕಂದಾಯ ಸಂಗ್ರಹಿಸಿದ್ದೇವೆ. ಇದರಿಂದ ಪಂಚಾಯಿತಿಗೂ ಹಣ ಬಂತು ಆಸ್ತಿಯ ಮಾಲೀಕರಿಗೂ ಕಾನೂನಾತ್ಮಕ ದಾಖಲೆಯಾಗಿದೆ. ಇದಕ್ಕೆಲ್ಲ ನಮ್ಮ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ಎಸ್ ಕೀರ್ತನ ಅವರ ಪ್ರೋತ್ಸಾಹ ಬಹಳವಾಗಿತ್ತು ಅನ್ನುವುದನ್ನು ಮರೆಯಲಿಲ್ಲ.
ಜಿಲ್ಲಾ ಪಂಚಾಯತಿ ಮತ್ತು ರಾಜ್ಯ ಸರ್ಕಾರದ ಕರೆಯಂತೆ ಪ್ರತಿ ತಿಂಗಳು ಎರಡನೆಯ ಸೋಮವಾರ ಪಂಚಾಯತಿ ಕಟ್ಟೆಯನ್ನು ಯಾವುದಾದರೂ ಒಂದು ಗ್ರಾಮದಲ್ಲಿ ನಡೆಸುತ್ತೇವೆ. ಇದಕ್ಕೆ ನೋಡಲ್ ಅಧಿಕಾರಿಯಾಗಿ ನಮ್ಮ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ವಿಜಯಕುಮಾರ್ ಅವರು ನಮ್ಮ ಬೆನ್ನ ಹಿಂದೆ ಇದ್ದಾರೆ ಯಶಸ್ವಿಯಾಗಿ ನಡೆಸುತ್ತಿದ್ದೇವೆ ಅನ್ನುತ್ತಾರೆ.
ಕಸ ಸಂಗ್ರಹಣೆಗಾಗಿ ವಾಹನಗಳನ್ನು ಇಟ್ಟಿದ್ದೇವೆ.ಪಂಚಾಯಿತಿಯಲ್ಲಿ ಹತ್ತು ನೌಕರರು ಐದು ಕಾರ್ಮಿಕರು ಕೆಲಸ ಮಾಡುತ್ತಾರೆ, ಇವರೆಲ್ಲರಿಗೂ ಪ್ರತಿ ತಿಂಗಳು ಒಂದನೇ ತಾರೀಕು ವೇತನ ಕೊಡುವ ಪರಿಪಾಠ ಇಟ್ಟುಕೊಂಡಿದ್ದೇವೆ.ಪ್ಲಾಸ್ಟಿಕ್ ವೇಸ್ಟೇಜ್ ಕ್ಲಿಯರೆನ್ಸ್ ಘಟಕ ಜಿಲ್ಲಾ ಪಂಚಾಯತಿಯಿoದ ಮುಂಜೂರಾಗಿದೆ ಎಂದರು.
ಮುoದುವರೆದು ಪಂಚಾಯತಿ ಹಿರಿಯ ಸದಸ್ಯ ಗುರುಮೂರ್ತಿಯವರು ಮಾತನಾಡುತ್ತಾ ತರಿಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್. ಶ್ರೀನಿವಾಸ್ ರವರು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಿದ್ದಾರೆ, ಇತ್ತೀಚಿಗೆ ಒಂದು ಕೋಟಿಗೂ ಅಧಿಕ ವೆಚ್ಚದ ಹಲವು ಕಾಮಗಾರಿಗಳನ್ನು ಈ ಪಂಚಾಯತಿ ವ್ಯಾಪ್ತಿಗೆ ನೀಡಿದ್ದಾರೆ,ಶಾಲೆಯ ದಾಸೋಹ ಭವನ ಹೀಗೆ ಹಲವು ಕಾಮಗಾರಿಗಳನ್ನು ವಿವರಿಸುತ್ತಾ ಶಾಸಕರಿಗೆ ಧನ್ಯವಾದ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ವರ್ಷ 226 ಪಂಚಾಯತಿಗಳಿoದ ಶೇಕಡ ನೂರಕ್ಕೂ ಹೆಚ್ಚು ಅಂದರೆ 33 ಕೋಟಿ ರೂಪಾಯಿ ಕಂದಾಯ ಸಂಗ್ರಹಿಸಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ. ಅದರಲ್ಲಿ ಬುಕ್ಕಾಂಬುದಿ ಪಂಚಾಯಿತಿ ಮೊದಲ ಸ್ಥಾನ ಎಂಬುದು ಹೆಮ್ಮೆಯ ವಿಷಯ. ಹೀಗಾಗಿ ಜಿಲ್ಲೆಗೆ ಮಾದರಿ ಪಂಚಾಯಿತಿ ಅನ್ನಬಹುದಲ್ಲವೇ.
ಲೇಖನ,
ಎಂ.ಸಿ ಶಿವಾನಂದ ಸ್ವಾಮಿ
ಅಧ್ಯಕ್ಷರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಚಿಕ್ಕಮಗಳೂರು.