ತುಮಕೂರು: ನಗರದ ಎಸ್. ಐ. ಟಿ. ಮುಖ್ಯ ರಸ್ತೆಯಲ್ಲಿರುವ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿ ದ್ವಿತೀಯ ಪಿ. ಯು. ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದು ಕೊಟ್ಟ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆ ಯ ಕಾರ್ಯದರ್ಶಿಗಳಾದ ಜಿ. ಕೃಷ್ಣ ಮೂರ್ತಿ ಮಾತನಾಡಿ, ಕಾಲೇಜಿಗೆ ಕೀರ್ತಿ ತಂದು ಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದರು. ನಮ್ಮ ಕಾಲೇಜಿನ ಹಿರಿಯ ಉಪನ್ಯಾಸಕರ ಮಾರ್ಗದರ್ಶನ ಪಡೆದು ಕೊಂಡು ಈಗಾಗಲೇ ವೈದ್ಯರು, ಇಂಜಿನಿಯರ್, ಡಾಕ್ಟರ್, ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ,ಅವರಂತೆ ನೀವು ಉನ್ನತ ಸ್ಥಾನ ಪಡೆಯಲು ನಮ್ಮ ಕಾಲೇಜಿನ ವಿಷಯ ಸಂಪನ್ಮೂಲ ಉಪನ್ಯಾಸಕರ ಸಹಕಾರ ಸದಾ ಇರುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕರಾದ ಗೋವಿಂದರಾಜ ಗುಪ್ತ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು.

ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಆರಾಧ್ಯ ಎಚ್. ವಿ.ಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿ, ಪ್ರಥಮ ಮಧ್ಯವಾರ್ಷಿಕ ಎರಡನೆ ಕಿರುಪರೀಕ್ಷೆ ಅಭ್ಯಾಸ ಪರೀಕ್ಷೆಗಳು ಸಿ. ಇ. ಟಿ. ತರಗತಿಗಳು ನಮ್ಮ ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ಚೆನ್ನಾಗಿ ನಡೆದವು,ವಿದ್ಯಾರ್ಥಿಗಳ ಪರಿಶ್ರಮ ಇಂದಿನ ಫಲಿತಾಂಶ ಸಂಸ್ಥೆಗೆ ಕಾಲೇಜಿಗೆ ಇಲಾಖೆಗೆ ಮತ್ತು ಪೋಷಕರಿಗೆ ಗೌರವ ತಂದು ಕೊಟ್ಟಿದೆ . ಇಲ್ಲಿಯ ಗ್ರಂಥಾಲಯ ಆಟದ ಮೈದಾನ ವಿಶಾಲವಾದ ಪ್ರಯೋಗಾಲಯ ಗಳು ನಿಮಗೆ ಪ್ರೇರಣೆ ಯನ್ನು ನೀಡಿದೆ ನೀವು 2025-26 ನೇ ಸಾಲಿಗೆ ಪ್ರಥಮ ಪಿಯುಸಿ ಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು ಎಂದು ಸನ್ಮಾನಿತ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಜಿ. ಹನುಮಂತಯ್ಯ, ಬೆಂಕಿ ವಸಂತಕುಮಾರ್, ಬಿ. ಎಂ. ಶಿವಣ್ಣ, ನರೇಂದ್ರ ಬಾಬು, ಸಂಧ್ಯಾ. ಜೆ. ವಿನೋದ್, ಗೋವಿಂದರಾಜು, ದೀಪಶ್ರೀ, ಪ್ರತಿಭಾ, ಮೋಹನ್ ಕುಮಾರ್, ಶಿವಾನಂದ, ನಟರಾಜು ಹಾಗೂ ಪೋಷಕರು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.