
ಚಿಕ್ಕಮಗಳೂರು-ನಗರ ಸಮೀಪದ ಶಾಂತಿನಗರ ನಿವಾಸಿ ನಾಗೇಂದ್ರ ಕೆ.ವಿ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಶಾಂತಿನಗರದ ವಾಸಪ್ಪ ನಾಯಕ ಮತ್ತು ಲಲಿತಮ್ಮ ದಂಪತಿಗಳ ಪುತ್ರರಾದ ನಾಗೇಂದ್ರ ಕೆ.ವಿ ಅವರು ಸನ್ ರೈಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಬ್ರಜ್ ಮೋಹನ್ ಮೋರ್ಯಾ ಅವರ ಮಾರ್ಗದರ್ಶನದಲ್ಲಿ “AN ANALYSIS OF ROLE OF FREEDOM MOVEMENT IN NORTH KARNATAKA FROM 1800 TO 1947”ಎಂಬ ವಿಷಯದ ಮೇಲೆ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದ್ದರು.