ಅರಕಲಗೂಡು- ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ಏ.30 ರಂದು ಬುಧವಾರ ಬೆಳಗ್ಗೆ ನಡೆಯುವ ರಾಮೇಶ್ವರಸ್ವಾಮಿ ದಿವ್ಯ ರಥೋತ್ಸವದ, ಹಿನ್ನಲೆಯಲ್ಲಿ ರಥೋತ್ಸವದ ಬರುವ ಭಕ್ತರುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಹೇಳಿದರು.
ತಾಲೂಕು ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ರಥೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ. ಮಂಜು ಮಾತನಾಡಿದರು.
ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ ನಡೆಯವ ಮುನ್ನ ದೇವಾಲಯದ ರಸ್ತೆಗೆ ತಳಿರುತೋರಣ, ವಿದ್ಯುತ್ ಅಲಂಕಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಾಹನ ನಿಲುಗಡೆ, ಬಸ್ ಸೌಲಭ್ಯ, ಮಂಗಳವಾದ್ಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ನಾಡಕಚೇರಿ, ಗ್ರಾಮ ಪಂಚಾಯಿತಿ ಹಾಗೂ ದೇವಾಲಯದವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಸೌಮ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರು ಪವನಕುಮಾರಿಕುಮಾರ್, ಮಾಜಿ ಅಧ್ಯಕ್ಷರು ಅರ್.ಎಸ್. ನರಸಿಂಹಮೂರ್ತಿ, ಉಪಾಧ್ಯಕ್ಷರು ಮಾದೇಶ್, ಸದಸ್ಯರಾದ ಪುಪ್ಪ, ಮೀನಮ್ಮ ಮೋಹನ್, ಸುನೀಲ್, ಸಿದ್ದಯ್ಯ, ಉಪತಹಸೀಲ್ದಾರ್ ರವಿ, ಪಿಎಸ್.ಐ. ಗಿರೀಶ್, ಅರೋಗ್ಯ ಇಲಾಖೆ, ಜಿ.ಪಿ. ಲೋಕೇಶ್,ದೇವಾಲಯದ ಮುಖ್ಯ ಅರ್ಚಕರು ಶ್ರೀನಿವಾಸಯ್ಯ, ರಘು, ಮುಂತಾದವರು ಭಾಗವಹಿಸಿದ್ದರು.
- ಶಶಿಕುಮಾರ