ಕೆ.ಆರ್.ಪೇಟೆ: ತಾಲ್ಲೂಕನ ಚೌಡೇನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಡಿ.ಎಂ.ಧನಲಕ್ಷ್ಮೀ ಶಂಭುಲಿಂಗೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಗ್ರಾ.ಪಂ.ಅಧ್ಯಕ್ಷೆ ರಾಧಾಮಣಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಧನಲಕ್ಷ್ಮೀ ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮ, ಸಹ ಚುನಾವಣಾಧಿಕಾರಿಯಾಗಿ ಪಿಡಿಓ ನಟರಾಜ್ ಮೂರ್ತಿ, ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ಧನಲಕ್ಷ್ಮೀ ಶಂಭುಲಿಂಗೇಗೌಡ ಅವರನ್ನು ಉಪಾಧ್ಯಕ್ಷರಾದ ಕೆ.ಎನ್.ವಿನೋಧ, ಸದಸ್ಯರಾದ ಪಿ.ಚೈತ್ರ, ಹೆಚ್.ಡಿ.ಹೇಮಾವತಿ, ಜಯಲಕ್ಷ್ಮಮ್ಮ, ದೇವರಾಜ್, ದ್ರಾಕ್ಷಾಯಿಣಿ ರಾಜೇಶ್, ಅಂಜುಜಮ್ಮ, ಟಿ.ರಮೇಶ್, ರಘು, ನಂಜಾಮಣಿ, ಸಿ.ಆರ್.ಶ್ರೀಶೈಲ, ಎಸ್.ದೇವರಾಜು, ಎಸ್.ಜೆ.ಸೋಮಶೇಖರ್, ಆರ್.ಕೆ.ರವಿಕುಮಾರ್, ಶಿಲ್ಪ, ಜಿ.ಕೆ.ಪ್ರದೀಪ್, ಕಾರ್ಯದರ್ಶಿ ವಿಷಕಂಠ ಆರಾಧ್ಯ, ಕೃಷ್ಣಾಪುರ ಗಿರೀಶ್, ಭದ್ರಿ, ನಾರಾಯಣಸ್ವಾಮಿ ಮತ್ತಿತರರು ಅಭಿನಂದಿಸಿದರು.

ನೂತನ ಅಧ್ಯಕ್ಷೆ ಧನಲಕ್ಷ್ಮೀ ಅಧಿಕಾರ ಸ್ವೀಕರಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರ ಸಹಕಾರದೊಂದಿಗೆ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಉದ್ಯೋಗಖಾತ್ರಿ ಯೋಜನೆಯು ವರದಾನವಾದ ಯೋಜನೆಯಾಗಿದೆ. ಪ್ರಮುಖವಾಗಿ ಕೃಷಿ ಹೊಂಡಗಳ ನಿರ್ಮಾಣ, ಜಾನುವಾರು ತೊಟ್ಡಿಗಳು ಕೊಟ್ಟಿಗೆಗಳ ನಿರ್ಮಾಣ ಮಾಡುವುದು, ಜಮೀನು ಅಭಿವೃದ್ದಿ, ಕೆರೆ, ಕಟ್ಟೆಗಳ ಹೂಳೆತ್ತುವುದು, ಅಂತರ್ಜಲ ವೃದ್ದಿಗೆ ಚೆಕ್ ಡ್ಯಾಮ್ ಗಳ ನಿರ್ಮಾಣ, ಇಂಗುಗುಂಡಿಗಳ ನಿರ್ಮಾಣ, ಮಳೆನೀರು ಸಂಗ್ರಹಿಸುವುದು, ಸಸಿಗಳನ್ನು ನೆಟ್ಟು ತೋಪುಗಳನ್ನು ನಿರ್ಮಿಸುವುದು ಸೇರಿದಂತೆ ಹತ್ತಾರು ಕಾಮಗಾರಿಗಳನ್ನು ಮಾಡಿ ಗ್ರಾಮಗಳ ಸಮಗ್ರ ಅಭಿವೃದ್ಧಿ ಕೈಜೋಡಿಸುವುದಾಗಿ ಧನಲಕ್ಷ್ಮೀ ಭರವಸೆ ನೀಡಿದರು.
– ಶ್ರೀನಿವಾಸ್ ಆರ್.