ಕೊರಟಗೆರೆ :-ಗಾಳಿ ಹಾಗೂ ಮಳೆಗೆ ವಿದ್ಯುತ್ ಲೈನ್ ಹರಿದುಬಿದ್ದು ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ಯೋಗೇಶ್ ವಿದ್ಯುತ್ ತಂತಿ ಹರಿದು ಬಿದ್ದು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಸವಿಗೀಡಾದ ಯುವಕನ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ 5 ಲಕ್ಷ ಚೆಕ್ ವಿತರಿಸಿ ಅವರ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು.
ಬೆಸ್ಕಾಂ ಎಇಇ ಪ್ರಸನ್ ಕುಮಾರ್ ಬೆಸ್ಕಾಂನಿಂದ ನಡೆದ ಅವಘಡಕ್ಕೆ ಇಲಾಖಾ ವತಿಯಿಂದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೂಲಕ ಮೃತ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಿಸಿದ್ದರು, ಚಿಕಿತ್ಸೆ ಪಡುತ್ತಿರುವ ನರಸಿಂಹ ರಾಜು ಅವರಿಗೆ ಚಿಕಿತ್ಸಾ ವೆಚ್ಚ ಬರಿಸುವದರ ಜೊತೆಗೆ ಇಲಾಖೆ ವತಿಯಿಂದ ಸಹಕರಿಸಲಾಗುವುದು ಎನ್ನಲಾಗಿದೆ.

ಘಟನೆ ವಿವರ:-
ಕೊರಟಗೆರೆ ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ಅಪಾರ ನಷ್ಟವಾಗಿದ್ದು, ಮಧ್ಯರಾತ್ರಿ ದ್ವಿಚಕ್ರವಾಹನದಲ್ಲಿ ಊರಿಗೆ ತೆರಳುತ್ತಿದ್ದ ಯುವಕರ ಮೇಲೆ ವಿದ್ಯುತ್ ತಂತಿ ಬಿದ್ದು ವಿದ್ಯುತ್ ತಂತಿ ಸ್ಪರ್ಶವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ ಮತ್ತೋರ್ವ ತೀವ್ರ ಗಾಯವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದಿರುವ ಘಟನೆ ಜರುಗಿದೆ.
ಕೊರಟಗೆರೆ ತಾಲೂಕಿನ ವಡ್ಡಗೆರೆ ಹಾಗೂ ಚೀಲಗಾನಹಳ್ಳಿ ಮಧ್ಯ ಅಡಿಕೆ ಹಾಗೂ ಬಾಳೇ ತೋಟದ ಸಮೀಪ ಈ ದುರ್ಘಟನೆ ಜರುಗಿದ್ದು, ಚಿಲಗಾನಹಳ್ಳಿ ವಾಸಿ ಯೋಗೇಶ್ 33 ವರ್ಷ ಸಾವಿಗೀಡಾದ ದುರ್ದೈವಿಯಾಗಿದ್ದಾನೆ, ಇದೇ ಗ್ರಾಮದ ನರಸಿಂಹಯ್ಯನ ಮಗ ನರಸಿಂಹರಾಜು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಸಾವಿಗೀಡಾದ ದುರ್ದೈವಿ ಯೋಗೇಶ್
ಈ ಯುವಕರು ದ್ವಿಚಕ್ರವಾಹನದಲ್ಲಿ ರಾತ್ರಿ ಮಳೆಯ ವೇಳೆ ಕೊರಟಗೆರೆಯಿಂದ ಸ್ವಗ್ರಾಮ ಚೀಲಗಾನಹಳ್ಳಿಗೆ ಬರುತ್ತಿರುವಾಗ ಮಾರ್ಗ ಮದ್ಯೆ ವಡ್ಡಗೆರೆ ಹಾಗೂ ಚೀಲಗಾನಹಳ್ಳಿಯ ಮಧ್ಯ ತೋಟದ ಸಮೀಪ ಗಾಳಿ ಮಳೆಗೆ ಏಕಾಏಕಿ ಯುವಕರ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಯುವಕರಿಗೆ ವಿದ್ಯುತ್ ಸ್ಪರ್ಶವಾಗಿ ಒಬ್ಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ವಿದ್ಯುತ್ ಸ್ಪರ್ಶದಿಂದ ಪಕ್ಕದ ಜಮೀನಿನಲ್ಲಿ ಬಿದ್ದು ಪ್ರಜ್ಞಹೀನರಾಗಿದ್ದು , ದಾರಿಹೋಕರು ಕಂಡು ನರಸಿಂಹರಾಜು ಎಂಬವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಗಾಳಿ ಮಳೆಗೆ ರೈತರ ಅಪಾರ ಅಡಿಕೆ ಬಾಳೆ ತೋಟಗಳು ನೆಲಕುರಳಿದ್ದು ಅಪಾರ ನಷ್ಟ ಉಂಟಾಗಿದೆ, ಜೊತೆಗೆ ಮಧ್ಯರಾತ್ರಿ ಸಂದರ್ಭದಲ್ಲಿ ಯುವಕರು ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸಂತೆ ಹರಿದು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಗಿದ್ದಾರೆ ಎನ್ನಲಾಗಿದೆ.

ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರಸಿಂಹರಾಜು
ಈ ಸಂಬಂಧ ತಹಸೀಲ್ದಾರ್ ಮಂಜುನಾಥ್, ಬೆಸ್ಕಾಂ ಎಇಇ ಪ್ರಸನ್ ಕುಮಾರ್ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
- ಶ್ರೀನಿವಾಸ್ , ಕೊರಟಗೆರೆ