ಕೆ.ಆರ್. ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದಲ್ಲಿ ಶ್ರೀ ಕೋಡಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ಏ. 29 ಮಂಗಳವಾರದಿಂದ ಮೇ 2 ಗುರುವಾರದವರೆಗೆ ಮೂರು ದಿನಗಳು ನೆಡೆಯುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾಜ್ಯ ಮಟ್ಟದ ರಂಗಕುಣಿತ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ತಿಳಿಸಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.29 ನೇ ಮಂಗಳವಾರ ಅಮ್ಮನವರನ್ನು ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ಬಳಿ ಹರಿಯುವ ಹೇಮಾವತಿ ನದಿಯಲ್ಲಿ ದೇವರಿಗೆ ಪುಣ್ಯ ಸ್ಙಾನ ಮಾಡಿಸಿ, ಹೋಮ ಹವನದೊಂದಿಗೆ ಗ್ರಾಮಕ್ಕೆ ಕರೆ ತರುವುದು. ನಂತರ ದೇವಿಯ ವಿಗ್ರಹವನ್ನು ರಂಗ ಸ್ಥಳದಲ್ಲಿರಿಸಿ ಈಶ್ವರ ದೇವಾಲಯದಿಂದ ರಂಗಸ್ಥಳದಲ್ಲಿ ಕಳಸ ಪ್ರತಿಷ್ಠಾಪನೆ ರಾತ್ರಿ 8 ಘಂಟೆಯಿಂದ ವಿವಿಧ ಗ್ರಾಮಗಳಿಂದ ಆಗಮಿಸುವ. ಕಲಾ ತಂಡಗಳಿಂದ ರಂಗ ಕುಣಿಯುವ ಸ್ಪರ್ಧೆ ಏರ್ಪಡಿಸಲಾಗಿದೆ.

ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 10ಸಾವಿರ ರೂ ಬಹುಮಾನ, ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ 6000 ರೂ ಬಹುಮಾನ ತೃತೀಯ ಬಹುಮಾನ 4000ಸಾವಿರ, ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ 3000 ರೂ, ಐದನೇ ಸ್ಥಾನಗಳಿಸಿದ ತಂಡಕ್ಕೆ 2000 ಸಾವಿರ ರೂ ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡವು ತಲಾ 1000 ರೂಗಳನ್ನು ನೀಡಿ ತಂಡದ ಹೆಸರು ನೊಂದಾಯಿಸಿಕೊಳ್ಳಬೇಕು. ರಂಗ ಕುಣಿತ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಹೆಸರನ್ನು ನೊಂದಾಯಿಸಬೇಕು ಮೊದಲು ನೊಂದಾಯಿಸಿದವರಿಗೆ ಮೊದಲು ರಂಗ ಕುಣಿಯುವ ಅವಕಾಶ ನೀಡಲಾಗುವುದು.

ಏ. 30 ಬುಧವಾರ ಹುಣಸೂರು ಗುಡ್ಡರಿಂದ ದೇವಿಯನ್ನು ಓಲೈಸುವುದು ಮಡೆ,ಸಿಡಿಮದ್ದು ಪ್ರದರ್ಶನ, ,ಬಾಯಿಬೀಗ,ಕನ್ನಾಂಕಾಡಿ ಉತ್ಸವ ,ಮೇ 1 ಗುರುವಾರದಂದು ಓಕಳಿ,ಜಾತ್ರಾ ಮಹೋತ್ಸವ ಹಾಗೂ ದೇವರುಗಳನ್ನು ಗ್ರಾಮದ ರಾಜಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು.

ರಂಗ ಕುಣಿತ ಸ್ಪರ್ಧೆ ಗೆ ಭಾಗವಹಿಸುವವರು ಕೆಳಕಂಡ ಆಯೋಜಕರನ್ನು ಸಂಪರ್ಕಿಸಿ ನೊಂದಾಯಿಸುವುದು:-
ಎಸ್‌ಡಿ ಸತೀಶ್ 9901242619, ಶೇಖರ್ 9353221744, ರಮೇಶ್ 9481302851, ರಮೇಶ್ ಎನ್ ಗ್ರಾ,ಪಂ ಸದಸ್ಯರು 9743998733, ಈಶ 97438 74505, ಮನು ಸೋಸೈಟಿ ನಿರ್ದೇಶಕ 77607 74246, ಕೃಷ್ಣ ಟ್ರಾವೆಲ್ ಗಿರೀಶ್ 8971 667219, ರಂಗ ಕುಣಿತ ಸ್ಪರ್ಧೆಯ ಹೆಚ್ಚಿನ ಮಾಹಿತಿಗೆ ಗೋವಿಂದರಾಜು ಶ್ಯಾರಹಳ್ಳಿ ಪತ್ರಕರ್ತರು 9980464754.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಈಶ, ಎನ್.ಡಿ.ಸತೀಶ್, ಶೇಖರ್, ರಮೇಶ್, ಮನು, ಗಿರೀಶ್, ಪಾಪೇಗೌಡ, ನಾಗರಾಜು, ಕೃಷ್ಣೇಗೌಡ, ಕಮಲಮ್ಮ ಮತ್ತಿತರರು ಉಪಸ್ಥಿತರಿದ್ದರು.