ಎಚ್ ಡಿ ಕೋಟೆ: ಅಂಬೇಡ್ಕರ್ ಒಂದೇ ಜಾತಿಗೆ ಅಥವಾ ವರ್ಗಕ್ಕೆ ಸೀಮಿತವಾದವರಲ್ಲ ಬದಲಾಗಿ ಎಲ್ಲ ಜಾತಿ ಜನಾಂಗಕ್ಕೂ ಸೀಮಿತವಾದವರು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಚಿಕ್ಕಕೆರೆಯೂರು ಗ್ರಾಮದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಈ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಸರ್ಕಾರಿ ಇಲಾಖೆಗಳಲ್ಲಿ ಅತಿ ಹೆಚ್ಚು ಭಾವಚಿತ್ರವಿರುವ ವ್ಯಕ್ತಿ ಅಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ. ಅಂಬೇಡ್ಕರ್ ಬರೆದ ಸಂವಿಧಾನದಿಂದ ನಾನು ತಾಲೂಕಿನಲ್ಲಿ ಎರಡು ಬಾರಿ ಶಾಸಕನಾಗಲು ಅವಕಾಶ ಸಿಕ್ಕಿತು ಎಂದು ಹೇಳಿದರು.

ಮಹಿಳೆರು ವಿಶೇಷವಾಗಿ ಅಂಬೇಡ್ಕರ್ ಅವರನ್ನು ಗೌರವಿಸಬೇಕು ಏಕೆಂದರೆ ಮತದಾನದ ಹಕ್ಕು ನೀಡಿದ್ದು, ವಿಚ್ಛೇದನ, ಪುನರ್ ವಿವಾಹ ವಾಗುವ ಅವಕಾಶ, ತಂದೆಯ ಆಸ್ತಿಯಲ್ಲಿ ಸಮಪಾಲು ಕೊಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್. ಹಾಗಾಗಿ ಅಂಬೇಡ್ಕರ್ ಕಹಿಯನ್ನು ಅನುಭವಿಸಿ ಸಿಹಿಯನ್ನು ನಮಗೆ ಹಂಚಿದ್ದಾರೆ ಎಂದು ತಿಳಿಸಿದ ಅವರು, ಗ್ರಾಮದ ಪ್ರಮುಖ ಬೇಡಿಕೆಗಳಾದ ಗ್ರಂಥಾಲಯ, ರಸ್ತೆ, ವಿದ್ಯುತ್ ಸ್ಟೇಷನ್, ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿಕೊಡುತ್ತೇನೆ ಎಂದು ಹೇಳಿದರು.

ಡಾ.ಮರಿದೇವಯ್ಯ ಮಾತನಾಡಿ, ಈ ದೇಶದಲ್ಲಿ ಮತದಾನ ಹಕ್ಕಿಗಾಗಿ ಹೋರಾಟ ಮಾಡಿದ ನಾಯಕ ಅಂಬೇಡ್ಕರ್. ಸ್ವಾತಂತ್ರ್ಯ ಪೂರ್ವದ 1921 ರಲ್ಲಿ ಸುಮಾರು 4016 ಜನಕ್ಕೆ ಮಾತ್ರ ಮತದಾನ ಮಾಡುವ ಅದರಲ್ಲೂ ರಾಜರು, ಶ್ರೀಮಂತರು, ಭೂ ಒಡೆತನ ಹೊಂದಿರುವವರಿಗೆ ಮಾತ್ರ ಅವಕಾಶ ಇತ್ತು ಅಂಬೇಡ್ಕರ್ ಸಂವಿಧಾನದ ಮೂಲಕ ಈ ದೇಶದಲ್ಲಿ ವಯಸ್ಕ ಮತದಾನ ಪದ್ಧತಿ ಜಾರಿ ಮಾಡಿ ಈ ದೇಶದಲ್ಲಿ ಪ್ರತಿಯೋಬ್ಬರಿಗೂ ಮತದಾನ ಮಾಡುವ ಹಕ್ಕನ್ನು ಜಾರಿಗೆ ತಂದರು. ಈ ದೇಶದಲ್ಲಿ ಇರುವ ಪ್ರತಿಯೊಂದು ಸಮುದಾಯವು ಶಿಕ್ಷಣದ ಮೂಲಕ ಐಎಎಸ್ ಐಪಿಎಸ್ ಕೆಎಎಸ್ ಅಂತಹ ಅಧಿಕಾರಿಗಳಾಗಬಹುದು ಇದಕ್ಕೆ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಕಾರಣ ಎಂದು ಅಂಬೇಡ್ಕರ್ ಅವರ ಕೊಡುಗೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮ ಕುರಿತು ಮೈಮುಲ್ ನಿರ್ದೇಶಕ ಈರೇಗೌಡ, ಪಿ.ನಾಗರಾಜು, ಕೆಂಡಗಣ್ಣೇಗೌಡ, ಎಂ.ಡಿ.ಮಂಚಯ್ಯ, ಹೈರಿಗೆ ಶಿವರಾಜ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮತ್ತು ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂದರ್ಭದಲ್ಲಿ ಸಾರನಾಥ ಬುದ್ಧ ವಿಹಾರ ಅಂತರಸಂತೆ ಗೌತಮಿ ಭಂತೇಜಿ, ಮೈಮೂಲ್ ನಿರ್ದೇಶಕ ಈರೇಗೌಡ, ಎಚ್.ಸಿ. ನರಸಿಂಹಮೂರ್ತಿ, ಪರಶಿವಮೂರ್ತಿ, ಕೆಂಡಗಣ್ಣೇಗೌಡ, ಡಾ. ಮರಿದೇವಯ್ಯ, ಪಿ. ನಾಗರಾಜು, ಎಂ.ಡಿ. ಮಂಚಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ಹೈರಿಗೆ ಶಿವರಾಜ್, ಬಾಲಚಂದ್ರ, ರಾಮಕೃಷ್ಣ, ಮಹೇಶ್, ರವಿ, ಶಶಿ ಪಾಟೀಲ್, ನೆನಪು ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚೆಲುವರಾಜು, ಮಲ್ಲೇಶ್, ಮಾಲತಿ, ಸಣ್ಣಸ್ವಾಮಿನಾಯಕ, ಭಾಗ್ಯಮ್ಮ, ವಸಂತ ನಾಗರಾಜ್, ರಮೇಶ್, ಮಹೇಶ್ ಸಿ.ಟಿ, ಸಿಂಧು, ರವಿ ಸಿ.ಕೆ, ಭಾಗ್ಯಮ್ಮ, ಲಕ್ಷ್ಮಮ್ಮ, ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಹಾಜರಿದ್ದರು.
- ಶಿವ ಕುಮಾರ ಕೋಟೆ