ಮಂಡ್ಯ : ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕೊಡಮಾಡುವ 2022 ನೇ ಯ ಸಾಲಿನ ಪ್ರತಿಷ್ಠಿತ ‘ಡಾ.ಜಿ.ಪಿ. ರಾಜರತ್ನಂ ಸಾಂಸ್ಕೃತಿಕ ಪರಿಚಾರಿಕ ಪ್ರಶಸ್ತಿ‘ಯು ನಾಡಿನ ಕ್ರಿಯಾಶೀಲ ದೈತ್ಯ ಸಂಘಟಕರೂ ರಂಗಕರ್ಮಿಗಳೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕರೂ ಲೇಖಕರೂ ಪ್ರಕಾಶಕರೂ ಹೋರಾಟಗಾರರೂ ಹಾಗೂ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರೂ ಆದ ಪ್ರೊ.ಬಿ. ಜಯಪ್ರಕಾಶ್ ಗೌಡರಿಗೆ ದೊರೆತಿದೆ.

ಈ ಪ್ರಶಸ್ತಿಗೆ ಪ್ರೊ. ಜೆಪಿ ಅವರು ಸಕಲ ರೀತಿಯಲ್ಲೂ ಅರ್ಹರು. 76 ರ ವಯೋಮಾನದಲ್ಲಿಯೂ ಅವರ ಕನ್ನಡ ಕಟ್ಟುವ ಕಾಯಕ ನನ್ನಂತಹ ಯುವ ಸಂಘಟಕರಿಗೆ ನಿಜಕ್ಕೂ ಪ್ರೇರಣಾದಾಯಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ, ರಂಗಭೂಮಿ, ಶಿಕ್ಷಣ, ಪ್ರಕಾಶನ, ಸಂಶೋಧನೆ ಇವೆ ಮೊದಲಾದ ಕ್ಷೇತ್ರಗಳಲ್ಲಿ ಬಹುಮುಖ್ಯವಾಗಿ ರಚನಾತ್ಮಕ ಮತ್ತು ಕ್ರಿಯಾತ್ಮಕ ನೆಲೆಯಲ್ಲಿ ‘ಕನ್ನಡತನ’ದ ಸ್ತರಗಳನ್ನು ವಿಸ್ತರಿಸುತ್ತಿರುವ ಪ್ರೊ.ಬಿ. ಜಯಪ್ರಕಾಶಗೌಡ ಅವರನ್ನು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಸತೀಶ್ ಜವರೇಗೌಡ ಅವರು ಅಭಿನಂದಿಸಿದ್ದಾರೆ.
- ಶ್ರೀನಿವಾಸ್ ಆರ್.