ವಿಠಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ಡಿ.ಹರೀಶ್, ಉಪಾಧ್ಯಕ್ಷರಾಗಿ ದೊದ್ದನಕಟ್ಟೆ ಸುರೇಶ್ ಅವಿರೋಧ ಆಯ್ಕೆ


ಕೆ.ಆರ್.ಪೇಟೆ: ತಾಲ್ಲೂಕಿನ ವಿಠಲಾಪುರ ವಿಠಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಡಿ.ಹರೀಶ್ ಮತ್ತು ನೂತನ ಉಪಾಧ್ಯಕ್ಷರಾಗಿ ದೊದ್ದನಕಟ್ಟೆ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಬಯಸಿ ಡಿ.ಸಿ.ಸಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ವಿ.ಡಿ.ಹರೀಶ್, ಮತ್ತು ಉಪಾಧ್ಯಕ್ಷ ಸ್ಥಾನ ಬಯಸಿ ಯುವ ಮುಖಂಡ ಸುರೇಶ್ ಅವರನ್ನು ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಎಂ.ಆರ್.ಪ್ರಶಾಂತ್ ಕಾರ್ಯನಿರ್ವಹಣೆ ಮಾಡಿದರು.

ನೂತನ ಅಧ್ಯಕ್ಷರಾದ ವಿ.ಡಿ.ಹರೀಶ್ ಮತ್ತು ಉಪಾಧ್ಯಕ್ಷರಾದ ದೊಡ್ಡನಕಟ್ಟೆ ಸುರೇಶ್ ಅವರನ್ನು ಸಂಘದ ನಿರ್ದೇಶಕರಾದ ವಿ.ಸಿ.ಪುಟ್ಟಸ್ವಾಮೀಗೌಡ, ವಿ.ಎಸ್.ಯೋಗೇಶ್, ಉಮೇಶ್, ಮಹದೇಶ್, ಬಿ.ಆರ್.ಸುರೇಶ್, ಇಂದ್ರಮ್ಮಸಣ್ಣತಮ್ಮೇಗೌಡ, ಸುಧಾಯೋಗೇಶ್, ಚೆಲುವರಾಜು, ವಿ.ಆರ್.ಪುಟ್ಟರಾಜು ಮುಖಂಡರಾದ ಶೈಲೇಂದ್ರ, ಪಟೇಲ್ ಶಂಕರ್, ವಿ.ಸಿ.ವೆಂಕಟೇಶ್, ರಾಜಶೇಖರ್, ಹೋರಿ ದೇವೇಗೌಡ, ಸೋಮಶೇಖರಯ್ಯ, ನಂದರಾಜಯ್ಯ, ವೀರಭದ್ರಯ್ಯ, ವಿ.ಡಿ.ಮೋಹನ್, ನಾರಾಯಣ್, ಚೇತನ್‌ಕುಮಾರ್, ವೆಂಕಟೇಶ್, ಶಾನುಬೋಗ್ ರಾಮು, ಶಿವಶಂಕರೇಗೌಡ, ಗೋವಿಂದೇಗೌಡ, ಐಟಿ.ಸೋಮು, ನಾಗಣ್ಣ, ಶ್ರೀಕಂಠೇಗೌಡ, ಎ.ಎಂ.ಕುಮಾರ್, ಕೂಡಲಕುಪ್ಪೆ ಲೋಕೇಶ್, ಶಂಕರ್, ದೊಡ್ಡಣ್ಣನ ಶಂಕರ್, ಕಾಮನಹಳ್ಳಿ ನಾಗೇಶ್, ಪಾಪೇಗೌಡ ಸೇರಿದಂತೆ ಸಂಘದ ವ್ಯಾಪ್ತಿಯ ನೂರಾರು ಮುಖಂಡರು ಅಭಿನಂದಿಸಿದರು.

ನೂತನ ಅಧ್ಯಕ್ಷ ವಿ.ಡಿ.ಹರೀಶ್ ಅವರು ಮಾತನಾಡಿ ನಾನು ಮೂರು ಭಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ, ಒಮ್ಮೆ ಸುಮಾರು 3ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ನಮ್ಮ ವಿಠಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕನಾಗಿ ಆಯ್ಕೆಯಾಗಿದ್ದು ಪ್ರಮುಖ ಕಾರಣವಾಗಿತ್ತು. ಹಾಗಾಗಿ ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ವಿಠಲಾಪುರ ಸೊಸೈಟಿಯನ್ನು ಮರೆಯುವುದಿಲ್ಲ. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ವೇಳೆ ಡಿಸಿಸಿ ಬ್ಯಾಂಕ್ ವತಿಯಿಂದ ಸುಮಾರು 60ಕೋಟಿ ಸಾಲ ಸೌಲಭ್ಯವನ್ನು ನೀಡಿ ಸೊಸೈಟಿಗಳ ಮೂಲಕ ರೈತರಿಗೆ ಲಕ್ಷ ರೂಗಳ ವರೆಗೆ ಸಾಲ ನೀಡುವ ಮೂಲಕ ಅನುಕೂಲ ಮಾಡಿಕೊಡಲಾಗಿತ್ತು. ಜೊತೆಗೆ ನಮ್ಮ ವಿಠಲಾಪುರ ಗ್ರಾಮಕ್ಕೆ ಡಿಸಿಸಿ ಬ್ಯಾಂಕ್ ಶಾಖೆಯನ್ನು ತಂದು ಕೊಟ್ಟಿದ್ದೇನೆ.

ವಿಠಲಾಪುರ ಗ್ರಾಮದಲ್ಲಿ ನಮ್ಮ ತಾಲ್ಲೂಕಿನ ಇದರಿಂದ ಈ ಭಾಗದ ಸುಮಾರು 20ಹಳ್ಳಿಯ ಜನರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುತ್ತಿದೆ. ನಮ್ಮ ರೈತರು ಸುಮಾರು 10ಕೋಟಿ ರೂ ಉಳಿತಾಯ ಮಾಡಿದ್ದಾರೆ. ಬ್ಯಾಂಕಿನಿಂದ ರೈತರಿಗೆ ಸುಮಾರು 8ಕೋಟಿಯಷ್ಟು ಸಾಲವನ್ನು ನೀಡಲಾಗಿದೆ. ವಿಠಲಾಪುರದಿಂದ ಬ್ಯಾಂಕಿ ಸೌಲಭ್ಯಕ್ಕೆ 15ಕಿ.ಮೀ ದೂರದ ಕೆ.ಆರ್.ಪೇಟೆ ಅಥವಾ ಬೂಕನಕೆರೆ ಗ್ರಾಮಕ್ಕೆ ಹೋಗಬೇಕಾಗಿತ್ತು. ಇಲ್ಲಿ ಡಿ.ಸಿ.ಸಿ ಬ್ಯಾಂಕ್ ಶಾಖೆಯ ಆರಂಭದಿಂದ ಈ ಭಾಗದ ಸಾವಿರಾರು ರೈತರಿಗೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ.

ಇದೇ ರೀತಿ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೇರುದಾರರಾಗಿರುವ ಎಲ್ಲಾ ರೈತರಿಗೆ ಬಡ್ಡಿ ಇಲ್ಲದ ಸಾಲವನ್ನು ನೀಡಲು ಸೂಕ್ತ ಕ್ರಮ ವಹಿಸುತ್ತೇನೆ. ಮಹಿಳಾ ಸಂಘಗಳಿಗೂ ಸಾಲ ಸೌಲಭ್ಯ ನೀಡುವ ಮೂಲಕ ಸಂಘದ ವ್ಯಾಪ್ತಿಯ ಎಲ್ಲಾ ರೈತರ ಬಾಂಧವರು, ಜನ ಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ವಿ.ಡಿ.ಹರೀಶ್ ತಿಳಿಸಿದರು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?