ಕೊರಟಗೆರೆ :- ತಾಲೂಕಿನ ಕೋಳಾಲ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಭೆಯನ್ನು ನೂತನ ಪಿ.ಎಸ್.ಐ. ಅಭಿಷೇಕ್ ರವರ ನೇತತ್ವದಲ್ಲಿ ನಡೆಯಿತು.
ನೂತನ ಪಿ.ಎಸ್.ಐ. ಅಭಿಷೇಕ್ ಮಾತನಾಡಿ, ಕೋಳಾಲ ಪೊಲೀಸ್ ಠಾಣೆಯ 144 ಹಳ್ಳಿಗಳಿದ್ದು, ಈ ಠಾಣೆಗೆ ನಾನು 15 ದಿನಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ಸ್ವಲ್ಪ ಮಾಹಿತಿ ಕೊರತೆ ಇದ್ದು. ನಿಮ್ಮ ನಿಮ್ಮ ಹಳ್ಳಿಯಲ್ಲಿರುವ ಯಾವುದೇ ರೀತಿಯಲ್ಲಿ ತೊಂದರೆ ಆದರೆ ನನಗೆ ಅಥವಾ ನಮ್ಮ ಪೊಲೀಸ್ ಠಾಣೆಗೆ ನೇರವಾಗಿ ಬರಬಹುದು, ಫೋನ್ ಮಾಡಬಹುದು. ನಿಮ್ಮಗಳಿಗೆ ಯಾವುದೇ ರೀತಿಯ ತೊಂದರೆ ತಕ್ಷಣ ಸ್ಪಂದಿಸಲು,112 ಗೆ ಕರೆ ಮಾಡಬಹುದು.

ಇತ್ತೀಚೆಗೆ ಸೈಬರ್ ಕ್ರೈಂ ಗಳು ಹೆಚ್ಚಾಗುತ್ತಿದ್ದು. ನಿಮ್ಮಗಳಿಗೆ ಯಾವುದೇ ರೀತಿಯ ಫೋನ್ ಮಾಡಿ ನಾವು ಪೊಲೀಸ್ ಅಥವಾ ಕಂಪನಿಯವರು ಎಂದು ಹೇಳುತ್ತಾರೆ. ನಿಮ್ಮಗಳಿಗೆ ಬೇರೊಂದು ವಿಚಾರದಲ್ಲಿ ಮತ್ತು ಬ್ಯಾಂಕ್ ನವರು ಎಂದು ನಿಮ್ಮಗಳಿಗೆ ಆಸೆ ಹುಟ್ಟಿಸಿ. ನಿಮ್ಮ ಆಧಾರ್ ನಂಬರ್ ಹೇಳಿ, ನಿಮಗೆ ಕೂಪನ್ ಬಂದಿದೆ ಅಂತ ಹೇಳಿ ಅಲ್ಪ ಸ್ವಲ್ಪ ಹಣವನ್ನು ಹಾಕಿಸಿಕೊಳ್ಳುತ್ತಾರೆ ಮತ್ತು ಮೋಸ ಮಾಡುತ್ತಾರೆ. ಅದಕ್ಕೆ ಯಾವುದೇ ರೀತಿಯಾಗಿ ಕಿವಿ ಕೊಡಬಾರದು.

ಬ್ಯಾಂಕ್ ಹತ್ತಿರ ಬಂದು ಅನುಮಾನಸ್ಪದವಾಗಿ ತಿರುಗಾಡುವಂತವರ ಮೇಲೆ ತಾವುಗಳು ನೇರವಾಗಿ ಠಾಣೆಗೆ ತಿಳಿಸಬೇಕು ಹಾಗೂ ವಿಶೇಷವಾಗಿ ನಿಮ್ಮ ಓದುವ ಹಾಗೂ ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಬಗ್ಗೆ ಗಮನಹರಿಸಬೇಕು ಹಾಗೂ ವಿಶೇಷವಾಗಿ ನಿಮ್ಮ ಊರುಗಳ ಬ್ಯಾಂಕಿನ ಹತ್ತಿರ ರೈತರು ಅಥವಾ ತಿಳುವಳಿಕೆ ಇಲ್ಲದವರಿಗೆ ಗುರಿಯಾಗಿಟ್ಟಿಸಿಕೊಂಡು. ಎ.ಟಿ.ಎಂ. ಒಳಗಡೆ ಹೋದಾಗ ಹಿಂಬದಿಯಿಂದ ಬಂದು ಪಿನ್ ಕೋಡ್ ಗಳನ್ನು ತಿಳಿದುಕೊಂಡು. ನಿಮ್ಮ ಪಿನ್ ಕೋಡ್ ಸರಿ ಇಲ್ಲ ಎಂದು ಅಥವಾ ನಿಮ್ಮ ಗಮನವನ್ನು ಬೇರೆ ಒಂದು ಕಡೆ ಸೆಳೆದು ಅವರ ಬಳಿ ಇರುವ ಎ.ಟಿ.ಎಂ. ಅನ್ನು ನಿಮ್ಮ ಕೈಗೆ ಕೊಟ್ಟು ಬದಲಾವಣೆ ಮಾಡಿ ಮತ್ತು ಬೇರೊಂದು ಕಡೆ ಎ.ಟಿ.ಎಂ. ಗೆ ತಕ್ಷಣ ನಿಮ್ಮ ಖಾತೆ ಹಣವನ್ನು ತೆಗೆದುಕೊಳ್ಳುತ್ತಾರೆ.

ನಿಮ್ಮ ಊರುಗಳಿಗೆ ಬಂದು ಅನ್ನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ನೀವು ಪ್ರಶ್ನೆ ಮಾಡಬೇಕು ಅಥವಾ ನಮಗೆ ಹೇಳಬೇಕು. ಇಸ್ಪೀಟ್ ಆಡುವುದು ಗಾಂಜಾ ಸೇರುವುದು ಅನೈತಿಕ ಚಟುವಟಿಕೆ ನಡೆದರೆ ನೇರವಾಗಿ ನಮಗೆ ಹೇಳಬಹುದು ಎಂದು ತಿಳಿಸಿದರು.

ಕೋಳಾಲ ಹೋಬಳಿಯ ಮುಖಂಡರ ಮನವಿ :
ಹಲವಾರು ಹಳ್ಳಿಗಳ ದಲಿತರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿಯ ವೇಳೆಯಲ್ಲಿ ಗುಂಪು ಕಟ್ಟಿಕೊಂಡು ಕೂಗಾಡುವುದು. ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದು ಇದರ ಬಗ್ಗೆ ಗಮನಹರಿಸಬೇಕು ಹಾಗೂ ರಾತ್ರಿಯ ಹೊತ್ತು ನೈಟ್ ಬಿಟ್ ಗಳನ್ನು ಹೆಚ್ಚಿಸುವಂತೆ ಕೋಳಾಲ ಹೋಬಳಿಯ ಮುಖಂಡರ ಮನವಿ ಮಾಡಿದರು.

ಸಂದರ್ಭದಲ್ಲಿ ಚಿನ್ನಹಳ್ಳಿ ಮಂಜುನಾಥ್. ಇರಕಸಂದ್ರ ಮಧುಸೂದನ್. ಮೆಡಿಕಲ್ ಹನುಮಂತು. ತಾಲೂಕಿನ ಬಿ. ಎಸ್. ಪಿ. ಪಕ್ಷದ ಅಧ್ಯಕ್ಷ ಶಿವ ದರ್ಶನ್. ಸುಂಕದಹಳ್ಳಿ ಶಿವರಾಜ್. ಸಿಂಗ್ರಿಹಳ್ಳಿ ರಾಮಸ್ವಾಮಿ. ಪಾತನಹಳ್ಳಿ ಸಿದ್ದಲಿಂಗಯ್ಯ ಗೊಲ್ಲ ಹಳ್ಳಿ ರಮೇಶ್. ಎಎಸ್ಐ ಜಯರಾಮ್. ಪ್ರಕಾಶ್. ಸಿಬ್ಬಂದಿ ವರ್ಗ ಹಲವಾರು ಮುಖಂಡರು ಹಾಜರಿದ್ದರು.
- ನರಸಿಂಹಯ್ಯ ಕೋಳಾಲ