ಚಿಕ್ಕಮಗಳೂರು:- ತಾಲ್ಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ಮಹಾ ರಥೋತ್ಸವವು ಏಪ್ರಿಲ್ 25 ರಿಂದ 29ರವರೆಗೆ ವಿವಿಧ ಪೂಜಾವಿಧಿವಿಧಾನಗಳ ಮೂಲಕ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
ಏ.25 ರಂದು ಪಂಚಾಮೃತ ಅಭಿಷೇಕ, ದೇವತಾಪ್ರಾರ್ಥನೆ, ಯಾಗಶಾಲಾ ಪ್ರವೇಶ, ದೇವತಾಹ್ವಾನ, ಕಾಶಿಯಾತ್ರಾ ಪೂರ್ವಕ ಶ್ರೀ ಲಕ್ಷ್ಮೀ ಕಲ್ಯಾಣೋತ್ಸವ ಹಾಗೂ ಶೇಷ ವಾಹನೋತ್ಸವ, ಏ.26 ರಂದು ಸಹಸ್ರ ನಾಮಪೂಜೆ, ಅಷ್ಟ ಲಕ್ಷ್ಮೀ ಆರಾಧನೆ, ರಥಕಳಸ ಸ್ಥಾಪನೆ, ಚನ್ನಗರುಡೋತ್ಸವ, ಗಜಾರೋಹಣೋತ್ಸವ ನಡೆಯಲಿದೆ.

ಏ.27 ರಂದು ಯಾತ್ರಾ ಧ್ಯಾನೋತ್ಸವ, ಮಧ್ಯಾಹ್ನ 12 ರಿಂದ ಶ್ರೀ ರಂಗನಾಥಸ್ವಾಮಿ ಮಹಾರಥೋ ತ್ಸವ ಜರುಗಲಿದೆ. ಸಂಜೆ 3ಕ್ಕೆ ಕುಂಕುಮೋತ್ಸವ, ಅನ್ನಸಂತರ್ಪಣೆ, ಏ.28 ರಂದು ಹನುಮಂತೋತ್ಸವ, ಶಯನೋತ್ಸವ, ಅನ್ನದಾನ. ಏ.29 ರಂದು ಸುಪ್ರಭಾತ, ಅಶ್ವಾರೋಹಣೋತ್ಸವ, ಮಹಾಭಿಷೇಕ, ಪೂರ್ಣಾ ಹುತಿ ನಡೆಯಲಿದೆ ಎಂದು ಗ್ರಾಮಸ್ಥ ಜಗದೀಶ್ ತಿಳಿಸಿದ್ದಾರೆ.
– ಸುರೇಶ್ ಎನ್.