ಚಿಕ್ಕಮಗಳೂರು: ಕರ್ನಾಟಕ ರತ್ನ ಅಭಿಮಾನಿಗಳ ಆರಾಧ್ಯ ದೈವ ವರನಟ ಡಾ.ರಾಜಕುಮಾರ್ ರವರ 95ನೇ ಜನ್ಮ ದಿನಾಚರಣೆಯನ್ನು ನಗರದ ಶ್ರೀರಾಮ ಗೆಸ್ಟ್ ಹೌಸ್ ನಲ್ಲಿ ಸ್ವಸ್ಥ ಭೂಮಿ ಪ್ರತಿಷ್ಠಾನ, ರಾಜ್ ಅಭಿಮಾನಿ ಬಳಗ, ಭೂಮಿಕ ಟಿವಿ ಹಮ್ಮಿಕೊಂಡಿದ್ದ ರಾಜ್ ಜನ್ಮ ವಿಶೇಷ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೇರವೇರಿಸಿದರು.
ಹಿರಿಯ ವಕೀಲರು ಹಾಗೂ ನೋಟರಿ ವಿ ಕೆ ರಘು ರವರು ಮಾತನಾಡಿ, ಚಿಕ್ಕಂದಿನಿಂದಲೂ ರಾಜ್ ಸಿನಿಮಾ ನೋಡಿಕೊಂಡು ಬೆಳೆದು ಬಂದಿದ್ದು ಅವರ ಹಾಡು, ನಟನೆಯ ಮೂಡಿ ನನ್ನನ್ನು ಕಲಾಕ್ಷೇತ್ರಕ್ಕೆ ಕರೆದುಕೊಂಡು ಬಂದಿದೆ ಅವರ ಕುಟುಂಬದ ಬ್ಯಾನರ್ ನಲ್ಲಿ ನಟಿಸಿದ್ದು ನನ್ನ ಸೌಭಾಗ್ಯ ಅವರ ಜನ್ಮ ದಿನದಂದು ಹಮ್ಮಿಕೊಂಡಿರುವ ಗೀತ ಗಾಯನ ಕಾರ್ಯಕ್ರಮ ಶ್ಲಾಘನೀಯ ಈ ಕಾರ್ಯಕ್ರಮದ ಮೂಲಕ ಚಿಕ್ಕಮಗಳೂರಿನ ಅನೇಕ ಪ್ರತಿಭೆಗಳು ಹೊರ ಹೊಮ್ಮುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂಮಿಕ ಟಿವಿಯ ಸಂಸ್ಥಾಪಕ ಅನಿಲ್ ಆನಂದ್ ಮಾತನಾಡಿ, ರಾಜಕುಮಾರ್ ನಟನೆಯಲ್ಲಿ ಭಾರತದ ಅತಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗಳಿಸಿ ಕೊಟ್ಟ ಮೇರು ನಟ, ಇವರು ನಟನೆಷ್ಟೇ ಅಲ್ಲದೆ ಸಮಾಜಮುಖಿಯಾಗಿ ಕನ್ನಡ ನಾಡು ನುಡಿ ನೀರಿಗಾಗಿ ಅವಿರತವಾಗಿ ಶ್ರಮಿಸಿದವರು ಗೋಕಾಕ್ ಹೋರಾಟದ ರೂವಾರಿಯಾಗಿ ಕನ್ನಡಿಗರ ಕಿಚ್ಚನ್ನು ಹೆಚ್ಚಿಸಿದವರು ತಮ್ಮ ನೇತ್ರದಾನದ ಮೂಲಕ ನೇತ್ರದಾನದ ಮಹತ್ವವನ್ನು ಸಾರಿ ನೂರಾರು ಅಂದರ ಬಾಳಿಗೆ ಬೆಳಕಾದವರು. ಅವರ ಸವಿನೆನಪಲ್ಲಿ ಇಂದು ನಾವು ರಾಗಲಹರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅವರ ನಟನೆಯ ಹಾಡನ್ನು ಹಾಡುವ ಮೂಲಕ ನಮ್ಮ ಮಾಧ್ಯಮ ಚಿಕ್ಕಮಗಳೂರು ಪ್ರತಿಭೆಗಳಿಗೆ ಸಣ್ಣ ವೇದಿಕೆ ನೀಡಿದೆ ಎಂದರು.

ಚಿಕ್ಕಮಗಳೂರಿನ ಹಲವಾರು ಪ್ರತಿಭೆಗಳು ರಾಜ್ ಗಾಯನದ ಮೂಲಕ ರಾಜ ನೆನಪನ್ನು ಮರುಕಳಿಸಿದರು.
ಕಾರ್ಯಕ್ರಮವನ್ನು ಯೋಗಿತ್ ಮಲ್ನಾಡ್, ಸ್ವಸ್ಥಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗುರುಮೂರ್ತಿ ನಾಡಿಗ್, ಹೇಮಂತ್, ಭೂ ಮಿಕ ಟಿವಿಯ ತಿಲಕ್ ದತ್, ರಾಜಶೇಖರ್, ರೋಹಿತ್ ಇಂದಾವರ, ಮನೋಜ್ ಬಿಂಡಿಗ, ಸಚಿನ್, ಭವ್ಯ, ಗಗನ್, ಪ್ರಜ್ವಲ್, ಶ್ರೀ ರಾಮ ಗೆಸ್ಟ್ ಹೌಸ್ ಅವಿನಾಶ್ ಹಾಗೂ ಹಲವು ಗಾಯಕರು ಹಾಜರಿದ್ದರು.
- ಸುರೇಶ್ ಎನ್.