ಬೇಲೂರು-ತಾಲ್ಲೂಕಿನ ಬಹುತೇಕ ಬಾರ್ ಮಾಲೀಕರು ಹಳ್ಳಿ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ.ಇದಕ್ಕೆ ಸ್ವತಃ ಅಬಕಾರಿ ಇಲಾಖೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ.ಗೆಂಡೇಹಳ್ಳಿ ಬಾರ್ ಜೊತೆಗೆ ಇಲ್ಲಿನ ಅಬಕಾರಿ ಅಧಿಕಾರಿ ಪಾತ್ರವಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಈ ಬಗ್ಗೆ ಹತ್ತಾರು ಭಾರಿ ತಿಳಿಸಿದರೂ ಯಾವ ಪ್ರಯೋಜವಾಗಿಲ್ಲ ಶೀಘ್ರವೇ ಅಧಿಕಾರಿಗಳು ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕು ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ಇಲ್ಲಿನ ಅಬಕಾರಿ ಅಧಿಕಾರಿ ಚಂದನ ಇವರೇ ಗೆಂಡೇಹಳ್ಳಿ ಬಾರ್ ನಲ್ಲಿ ಜೂಜು ಮತ್ತು ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಾರೆ ಎಂಬ ಬಗ್ಗೆ ಗೆಂಡೇಹಳ್ಳಿ ಗ್ರಾಮಸ್ಥರೇ ದೂರಿದ್ದಾರೆ.ಅಬಕಾರಿ ಅಧಿಕಾರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದ ಅವರು ಮದ್ಯಂಗಡಿಗಳು ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ ಈ ಬಗ್ಗೆ ಯಾವುದೇ ಮೂಲಾಜು ಇಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.
ಬೇಲೂರು ತಹಸೀಲ್ದಾರ್ ಎಂ.ಮಮತ ಮಾತನಾಡಿ ಕೆಲವು ಅಂಗನವಾಡಿ ಕೇಂದ್ರಕ್ಕೆ ಸೇರಿದ ಖಾಲಿ ಜಾಗವನ್ನು ಖಾಸಗಿಯವರು ಒತ್ತುವರಿ ಸಂಬಂಧ ನಾನು ಪರಿಶೀಲನೆ ನಡೆಸಿ ತೆರವು ಮಾಡಲಾಗಿದೆ.ಈ ಬಗ್ಗೆ ಸಿಡಿಪಿಒ ಹೆಚ್ಚಿನ ಗಮನ ನೀಡಬೇಕು.ರೈತಾಪಿ ವರ್ಗ ಯಾವುದೇ ಮದ್ಯವರ್ತಿಗಳ ಸಹಾಯವಿಲ್ಲದೆ ನೇರ ಅಧಿಕಾರಿಗಳನ್ನು ಭೇಟಿ ನಡೆಸಬೇಕು ಎಂದು ಹೇಳಿದರು.
ತ್ರೈಮಾಸಿಕ ಮಾಸಿಕ ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಸಂತಕುಮಾರ್ ಸೇರಿದಂತೆ ತಾಲ್ಲೂಕಿನ ಇಲಾಖಾವಾರು ಅಧಿಕಾರಿಗಳ ಹಾಜರಿದ್ದ ಸಭೆಯಲ್ಲಿ ಕೆಡಿಪಿ ಸದಸ್ಯರಾದ ಚೇತನ್, ನಂದೀಶ, ನವೀನ್, ಜ್ಯೋತಿ, ಪರಮೇಶ್ ಮತ್ತು ಸರ್ಕಾರ ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ದೇಶಾಣಿ ಅನಂದ್ ಸಭೆಗೆ ಸಲಹೆ ಸೂಚನೆ ನೀಡಿದರು.
—————-ರವಿಕುಮಾರ್
.