ಕೊರಟಗೆರೆ;ಸಮಾಜದ ಜಾತಿ ಧರ್ಮಗಳ ಮದ್ಯೆ ಭಾವೈಕ್ಯತೆಯನ್ನು ಹುಟ್ಟುಹಾಕುವ ಗಣೇಶೋತ್ಸವಗಳು ಈ ದೇಶದ ಅತ್ಯಂತ ಅಗತ್ಯ-ಡಾ.ಶ್ರೀ ಹನುಮಂತನಾಥಸ್ವಾಮೀಜಿ

ಕೊರಟಗೆರೆ;ಸಮಾಜದ ಜಾತಿ ಧರ್ಮಗಳ ಮದ್ಯೆ ಭಾವೈಕ್ಯತೆಯನ್ನು ಹುಟ್ಟುಹಾಕುವ ಗಣೇಶೋತ್ಸವಗಳು ಈ ದೇಶದ ಅತ್ಯಂತ ಅಗತ್ಯ.ವಿಘ್ನನಿವಾರಕ ನಾಡಿನಲ್ಲಿ ಉತ್ತಮ ಮಳೆ -ಬೆಳೆ ಬರುವಂತೆ ಆಶೀರ್ವದಿಸಲಿ.ರೈತ ಸಂಪನ್ನನಾದರೆ ದೇಶ ಅಭಿವೃದ್ಧಿಯಾಗುತ್ತೆ ಎಂದು ಎಲೆರಾಂಪುರ ಕುಂಚಿಟಿರ ಮಹಾಸಂಸ್ಥಾನ ಮಠದ ಡಾ.ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು.

ಕೊರಟಗೆರೆ ಪಟ್ಟಣದ ಜನತೆಯ ಆರಾಧ್ಯ ದೈವ ಹಾಗೂ ಉದ್ಬವ ಮೂರ್ತಿ ಕಟ್ಟೆ ಗಣಪತಿ ದೇವಾಲಯದ ಸಮುದಾಯ ಭವನದಲ್ಲಿ ಶ್ರೀ ಕಟ್ಟೆ ಗಣಪತಿ ದೇವಾಲಯ ಅಭಿವೃದ್ದಿ ಟ್ರಸ್ಟ್,ಶ್ರೀ ಕಟ್ಟೆಗಣಪತಿ ಯುವಕ ಮಂಡಳಿ  ಹಾಗೂ ಮಹಿಳಾ ಮಂಡಳಿಗಳು   ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

16ನೇ ವರ್ಷದ ಗಣಪತಿ ಮಹೋತ್ಸವ ವೇದಿಕೆಯಲ್ಲಿ ಲೋಕಕಲ್ಯಾಣಾರ್ಥ ನಡೆಸುತ್ತಿರುವ ಶ್ರೀ ಮಹಾಗಣಪತಿ ಮೋದಕ ಹೋಮ ಕಾರ್ಯಕ್ರಮ ಶ್ಲ್ಯಾಘನೀಯವಾದದ್ದು.ಕಟ್ಟೆ ಗಣಪತಿ ದೇವಾಲಯದ ಸಮಿತಿಗಳು ಪ್ರತಿವರ್ಷ ನಾಡಿಗೆ ಒಳಿತಿಗಾಗಿ ನೆರವೇರಿಸುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾದರಿಯಾಗುವಂತಹವು ಎಂದು ಸಂತಸ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ದ್ವೇಷ,ಅಸೂಯೆ,ಘರ್ಷಣೆಗಳಿಗೆ ಕಾರಣವಾಗಿ ಪೊಲೀಸರ ಸರ್ಪಗಾವಲಿನಲ್ಲಿ ಹಾಗೂ ಸರ್ಕಾರದಿಂದ ಆದೇಶ ಪಡೆದು ಭಕ್ತರಿಗೆ ಪ್ರಸಾದ ವಿರತಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಿಶಾದನೀಯ ಎಂದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಡೆಯುತ್ತಿರುವ ಘರ್ಷಣೆಗಳು ತಡೆಯಬೇಕಾದರೆ ಹಿರಿಯರಾದ ನಾವುಗಳು  ತಮ್ಮ ಮಕ್ಕಳಿಗೆ  ಸಂಸ್ಕಾರವಂತ ಶಿಕ್ಷಣ ನೀಡಿ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳುವಂತೆ ಹಾಗೂ ತಂದೆ-ತಾಯಿಗಳಿಗೆ,ಹಿರಿಯರಿಗೆ ಗೌರವಿಸುವ ಗುಣಸ್ವಾಭಾವಗಳನ್ನು  ಬೆಳೆಸಬೇಕಿದೆ ಎಂದು ತಿಳಿಸಿದರು.  

ಗಣೇಶೋತ್ಸವ ಕಾರ್ಯಕ್ರಮದಲ್ಲಿ ವೇ.ಬ್ರ. ಶ್ರೀ, ದತ್ತಾತ್ರಿ ದೀಕ್ಷಿತ್, ರಾಜೇಶ್ ದೀಕ್ಷಿತ್, ಶಿವನಂದನ್ ದೀಕ್ಷಿತ್, ಯದುನಂದನ ದೀಕ್ಷಿತ್, ರಘುನಂದನ್ ದೀಕ್ಷಿತ್ ಮತ್ತು ಚಂದ್ರಶೇಖರ್ ಶರ್ಮಾ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಮಹಾಗಣಪತಿ ಮೋದಕ ಹೋಮ ನೆರವೇರಿಸಿದರೆ ದೇವಾಲಯ ಅಭಿವೃಧ್ದಿ ಮಂಡಲಿ ಹಾಗೂ ಯುವಕ ಮಂಡಲಿ , ಮಹಿಳಾ ಮಂಡಲಿ ಸೇರಿದಂತೆ ಭಕ್ತಾಧಿಗಳ ಸಹಕಾರದಿಂದ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಸಿದರು. 

ಕಾರ್ಯಕ್ರಮದಲ್ಲಿ ಡಾ.ಆತ್ಮರಾಮ್, ಡಾ.ಶುಭಾ, ನಿವೃತ್ತ ಪ್ರಾಚಾರ್ಯ ಕೆ.ಪಿ.ರಾಜಣ್ಣ, ಮಂಜುಳಾ ಮಯೂರಗೋವಿಂದರಾಜು, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್ , ಉಪಾಧ್ಯಕ್ಷ ನಾಗರಾಜು, ಹರೀಶ್, ದೇವಾಲಯದ ಅಭಿವೃಧ್ದಿ ಸಮಿತಿ ನಿರ್ದೇಶಕ ಎನ್.ಪದ್ಮನಾಭ್, ಯುವಕ ಸಂಘದ ಅಧ್ಯಕ್ಷ ಬೆನಕಾ ವೆಂಕಟೇಶ್, ಮಹಿಳಾಸಂಘದ ಅಧ್ಯಕ್ಷೆ ಗೀರಿಜಮ್ಮ, ಯುವಕ ಮಂಡಲಿಯ ನಿರ್ದೆಶಕರುಗಳಾದ ಕೆ.ಬಿ.ಲೋಕೇಶ್, ವಿಜಯ್‍ಕುಮಾರ್, ಸಂಜಯ್, ಕೆ.ಪಿ.ಅಭಿಲಾಷ್, ಕೆ.ಪಿ.ಯಶಸ್ಸ್, ಬೆಸ್ಕಾಂ ನಟರಾಜು, ರಜಿಂತ್‍ಕುಮಾರ್, ಗುರುದತ್, ಸಿದ್ದೇಶ್ ಸಚಿನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

—————--ಶ್ರೀನಿವಾಸ ಕೊರಟಗೆರೆ

Leave a Reply

Your email address will not be published. Required fields are marked *

× How can I help you?