ಬಣಕಲ್-ಬಿಜೆಪಿಯ ಹೋಬಳಿಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ-ಕೆ.ಕೆ.ಯತೀಶ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಬಣಕಲ್- ಹೋಬಳಿಯ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಶುಕ್ರವಾರ ಬಣಕಲ್ ಚರ್ಚ್ ಹಾಲ್ ನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮಾತನಾಡಿದ ಕೆ.ಕೆ.ಯತೀಶ್, ‘ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗುರುತಿಸಿದ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಹೋಬಳಿ ಅಧ್ಯಕ್ಷನ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ನನ್ನ ಮೇಲೆ ಇರಿಸಿದ ಭರವಸೆಯನ್ನು ಹುಸಿಗೊಳಿಸದೆ ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿ, ಬಲಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಸಣ್ಣ–ಪುಟ್ಟ ಕಾರ್ಯಕರ್ತರಿಂದ ದೊಡ್ಡ ನಾಯಕರನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ’ ಎಂದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಮಾತನಾಡಿ, ದೇಶದ ಭವಿಷ್ಯಕ್ಕಾಗಿ ಪಕ್ಷ ಕಟ್ಟೋಣ ಪಕ್ಷದಲ್ಲಿ ಇರುವಂತಹ ಒಡಕು–ಬಿರುಕುಗಳನ್ನು ಸರಿಪಡಿಸಿಕೊಂಡು ದೇಶದ ಭವಿಷ್ಯಕ್ಕಾಗಿ ಪಕ್ಷ ಕಟ್ಟೋಣ. ಈ ಹಿಂದೆ ಸದಸ್ಯತ್ವ ಅಭಿಯಾನದಲ್ಲಿ 12 ಕೋಟಿ ಸದಸ್ಯತ್ವ ಮಾಡಲಾಗಿತ್ತು. ಈಗಾಗಲೇ 9 ಕೋಟಿ ಸದಸ್ಯತ್ವ ಮಾಡಲಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತರು ತಲಾ 100 ಸದಸ್ಯರನ್ನು ಸಕ್ರಿಯವಾಗಿ ಪಕ್ಷಕ್ಕೆ ಸೇರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ‘ಸಿದ್ಧಾಂತಕ್ಕೆ ಬದ್ಧವಾಗಿರುವ, ಶಿಸ್ತಿಗೆ ಹೆಸರುವಾಸಿಯಾಗಿರುವ ಪಕ್ಷ ಬಿಜೆಪಿ ಆಗಿದೆ, ‘ದೇಶದ ಭದ್ರತೆ–ಸುರಕ್ಷತೆ ಬಯಸುವ ಪಕ್ಷ ಒಂದಿದ್ದರೆ ಅದು ಬಿಜೆಪಿಮಾತ್ರ ಕುಟುಂಬ ರಾಜಕಾರಣಕ್ಕಾಗಿ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ದೇಶವನ್ನು ವಿಶ್ವಗುರುವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಉತ್ತಮ ಪ್ರಧಾನಿಯನ್ನು ಕೊಟ್ಟಂತಹ ಪಕ್ಷ ಬಿಜೆಪಿ ಎಂದರು. ಮುಂದೆ ಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ನಾವು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಅದಕ್ಕೆ ನೂತನ ಅಧ್ಯಕ್ಷರ ಕೈ ಬಲ ಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ, ಬಿಜೆಪಿ ಎಂ ಎಲ್ ಎ ಅಭ್ಯರ್ಥಿ ದೀಪಕ್ ದೊಡ್ಡಯ್ಯ, ಮುಖಂಡರುಗಳಾದ ವಿಜಯಕುಮಾರ್, ಬಣಕಲ್ ಹೋಬಳಿ ಮಾಜಿ ಅಧ್ಯಕ್ಷರಾದ ಅನುಪ್ ಕುಮಾರ್, ವಿಕ್ರಂ ಗೌಡ, ಪೃಥ್ವಿ ಗೌಡ, ರಮೇಶ್ ಗೌಡ, ಯೋಗೇಶ್ ಪೂಜಾರಿ, ಸುರೇಶ್ ಬಿವಿ, ಬಣಕಲ್ ಮಹಾಶಕ್ತಿ ಕೇಂದ್ರದ ಪ್ರಧಾನಕಾರ್ಯದರ್ಶಿಗಳಾದ ಹುಳ್ಳೆಮನೆ ಸಾಗರ್, ಶರತ್ ಪಲ್ಗುಣಿ, ಕಾರ್ಯದರ್ಶಿಗಳಾದ ಅರುಣ್ ಪೂಜಾರಿ, ನಂದನ್,ರಕ್ಷಿತ್, ಯುವಮೋರ್ಚಾ ಅಧ್ಯಕ್ಷ ಅತಿತ್ ಹೆಸಗೋಡ್, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

-ಸೂರಿ, ಬಣಕಲ್

Leave a Reply

Your email address will not be published. Required fields are marked *

× How can I help you?