ಕೆ.ಆರ್.ಪೇಟೆ: ಜಮ್ಮು-ಕಾಶ್ಮೀರದ ಪ್ರವಾಸ ತಾಣ ಪಹಲ್ಗಾಮ್ ಪ್ರದೇಶದಲ್ಲಿ ಏ.22 ರಂದು ಉಗ್ರರು ಭಾರತೀಯ ಹಿಂದೂ ಪ್ರಜೆಗಳ ಮೇಲೆ ಗುಂಡಿಕ್ಕಿ ಅಮಾನುಷ ನರಮೇಧ ನಡೆಸಿರುವುದನ್ನು ಖಂಡಿಸಿ ಕೆ.ಆರ್.ಪೇಟೆ ತಾಲ್ಲೂಕು ವಕೀಲರ ಸಂಘದ ಸದಸ್ಯರುಗಳು ಪಟ್ಟಣದ ವಕೀಲರ ಭವನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ತಹಸೀಲ್ದಾರ್ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಪಾಕಿಸ್ತಾನದ ದುಕೃತ್ಯವನ್ನು ಖಂಡಿಸಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ಮಾತನಾಡಿ ಜಮ್ಮು-ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಲಾಮ್ನಲ್ಲಿ ಉಗ್ರರು ಅಮಾನುಷವಾಗಿ ನರಮೇಧ ನಡೆಸಿದ ಕೃತ್ಯವನ್ನು ಉಗ್ರವಾಗಿ ಖಂಡಿಸಿದ್ದು, ಈ ಕೃತ್ಯಕ್ಕೆ ಕಾರಣರಾದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸಿದೆ. ಹಾಗೂ ಆ ಉಗ್ರರಿಗೆ ಸಹಕಾರ ನೀಡುತ್ತಿರುವ ಯಾವುದೇ ರಾಷ್ಟ್ರವಾಗಿದ್ದರೂ, ಆ ರಾಷ್ಟ್ರದ ಮೇಲೆ ಕ್ರಮ ಕೈಗೊಳ್ಳಬೇಕೆಂದು. ಅಲ್ಲದೇ ಭಾರತ ರಾಷ್ಟ್ರದ ಭದ್ರತೆಗೆ ದಕ್ಕೆಯನ್ನುಂಟು ಮಾಡಿ, ನಾಗರೀಕರ ಜೀವದ ಜೊತೆ ಆಟವಾಡುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಗಂಭೀರವಾಗಿ ಕ್ರಮ ಕೈಗೊಳ್ಳುವುದಕ್ಕೆ ಹಾಗೂ ಉಗ್ರ ಸಂಘಟನೆಗಳಿ0ದ ಪ್ರಾಣ ಕಳೆದುಕೊಂಡಿರುವ ಭಾರತೀಯ ನಾಗರೀಕರಿಗೆ ಸರ್ಕಾರಗಳು ಸೂಕ್ತ ಪರಿಹಾರವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೃಷ್ಣರಾಜಪೇಟೆಯ ವಕೀಲ ಸಂಘದ ಎಲ್ಲಾ ಸದಸ್ಯರುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದೇವೆ ಎಂದು ನಾಗೇಗೌಡ ತಿಳಿಸಿದರು.

ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಎಸ್.ಜೆ.ಮಂಜೇಗೌಡ ಮಾತನಾಡಿ ಭಾರತದ ಏಕತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ರೀತಿಯ ಕ್ರಮ ಮತ್ತು ಭದ್ರತೆಗಳಿಗೆ ನಮ್ಮ ವಕೀಲರ ಸಂಘವು ಸರ್ಕಾರದ ಜೊತೆ ಇರುತ್ತದೆ. ಉಗ್ರಗಾಮಿಗಳಿಗೆ ಆಶ್ರಯ ನೀಡುವ ಕೆಲವು ಸ್ಥಳೀಯ ಉಗ್ರಗಾಮಿ ಬೆಂಬಲಿಗರಿಗೂ ತಕ್ಕಪಾಠ ಕಲಿಸಬೇಕು. ಉಗ್ರಗಾಮಿಗಳ ಈ ದುಕೃತ್ಯದಿಂದ ಕಾಶ್ಮೀರ ನಿವಾಸಿಗಳು ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡು ಸ್ಥಿತಿ ಬಂದಿದೆ. ಇಂತಹ ಸ್ಥಿತಿಗೆ ಕಾರಣವಾಗಿರುವ ಪಾಕಿಸ್ತಾನದ ಉಗ್ರಗಾಮಿಗಳ ವಿರುದ್ಧ ದೇಶದಲ್ಲಿರುವ ಎಲ್ಲಾ ಮುಸ್ಲಿಮರು ಹೋರಾಟ ನಡೆಸಬೇಕು. ಉಗ್ರಗಾಮಿಗಳನ್ನು ಸದೆ ಬಡಿಯಲು ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಮ್ಮ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ದೊಡ್ಡಯ್ಯ, ಅವಿನಾಶ್, ಜನಾರ್ಧನ್, ಬಿಜೆಪಿ ಪ್ರವೀಣ್, ಶಿವಕುಮಾರ್, ಪ್ರತಾಪ್, ಹಿರಿಯ ವಕೀಲರಾದ ಜಿ.ಆರ್.ಅನಂತರಾಮಯ್ಯ, ಎಂ.ಆರ್.ಪ್ರಸನ್ನಕುಮಾರ್, ಕೆ.ಎನ್.ನಾಗರಾಜು, ಬಿ.ಗಣೇಶ್, ಕೆ.ಆರ್.ಮಹೇಶ್, ಎಸ್.ಆರ್.ನವೀನ್ಕುಮಾರ್, ಕೆ.ಆರ್.ಇಂದ್ರಕುಮಾರ್, ನೋಟರಿ ವಕೀಲರಾದ ಸ್ವರೂಪ, ಎಂ.ರಾಣಿ, ರೇಷ್ಮ, ಭಾವನಾ, ಸುಪ್ರಿತಾ, ಅನುಷ, ಕೇಸರಿ ಶ್ರೀನಿವಾಸ್, ಗಂಜಿಗೆರೆ ಜಿ.ಜೆ.ಲೋಕೇಶ್, ಪಿ.ಬಿ.ಮಂಜುನಾಥ್, ಕೆ.ಬೋರೇಗೌಡ, ಅರುಣ್ಕುಮಾರ್, ಚಲುವರಾಯಿ, ನಿರಂಜನ್, ಮೋಹನ್, ಎನ್.ಮಂಜುನಾಥ್, ಪಾಂಡು, ಬಿ.ಸಿ.ಹರ್ಷ, ಅನ್ವೇಶ್, ಎಂ.ವಿ.ಪ್ರಭಾಕರ್, ಯೋಗೇಶ್, ಸತೀಶ್, ಯೋಗೇಶ್.ಡಿ. ಅನುಷ, ಅಂಜಲಿ, ಸುಪ್ರಿತಾ, ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.