ಕೆ ಆರ್ ಪೇಟೆ- ತಾಲ್ಲೂಕು ಬೂಕನಕೆರೆ ಹೋಬಳಿ ಮಡ ವಿನಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ ಪಿ ಲೋಕೇಶ್ ಹಾಗೂ ನೂತನ ಉಪಾಧ್ಯಕ್ಷರಾಗಿ ದೊಡ್ಡ ಯಾಚೇನಹಳ್ಳಿ ಮಂಗಳಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷದ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು.ಅಧ್ಯಕ್ಷ ಸ್ಥಾನ ಬಯಸಿ ಮಡವಿನಕೋಡಿ ಎಂ ಪಿ ಲೋಕೇಶ್ ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ದೊಡ್ಡಯಾಚೇನಹಳ್ಳಿ ಮಂಗಳಮ್ಮ ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ತಾಲ್ಲೂಕ ಸಹಕಾರ ಅಭಿವೃದ್ದಿ ಅಧಿಕಾರಿ ಎಚ್.ಬಿ.ಭರತ್ ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಅನುರಾಧ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮನ್ಮುಲ್ ನಿರ್ದೇಶಕ ಎಂ ಬಿ ಹರೀಶ್ ಮಾತನಾಡಿ ಸಹಕಾರ ಸಂಘಗಳು ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.ಸಹಕಾರ ಸಂಘಗಳು ವಾಣಿಜ್ಯ ಬ್ಯಾಂಕುಗಳಿಗಿಂತ ಒಂದು ಕೈಮುಂದಾಗಿ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ. ನೂತನ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಶ್ರೇಯೋಭಿದ್ದಿಗೆ ಶ್ರಮಿಸಬೇಕು. ಮತದಾರರು ಚುನಾವಣೆಯಲ್ಲಿ ನಮ್ಮ ತಂಡವು ಅಬೂತಪೂರ್ವ ಗೆಲುವು ಸಾಧಿಸಲು ಸಹಕಾರ ನೀಡಿದ ನಮ್ಮ ಸೊಸೈಟಿ ವ್ಯಾಪ್ತಿಯ ಎಲ್ಲಾ ಮುಖಂಡರು ಹಾಗೂ ಮತದಾರರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಹಾಲು ಉತ್ಪಾದಕರಿಗೆ, ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು.ಸೊಸೈಟಿ ವ್ಯಾಪ್ತಿಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ,ಸಕಾಲಕ್ಕೆ ಸಾಲ ಸೌಲಭ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂ.ಬಿ.ಹರೀಶ್ ಸಲಹೆ ನೀಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಪಿಎಂಸಿ ಮಾಜಿ ಅಧ್ಯಕ್ಷ ಎಂ ಪಿ ಲೋಕೇಶ್ ಮಾತನಾಡಿ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪಕ್ಷದ ವರಿಷ್ಠರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಯಾವುದೇ ರೀತಿಯ ದಕ್ಕೆ ಬಾರದಂತೆ ಕಲ ಪ್ರಾಮಾಣಿಕವಾಗಿ ಕೆಲಸಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಸಮಾಜ ಸೇವಕ ವಿಜಯ್ ರಾಮೇಗೌಡ, ತಾಲ್ಲೂಕು ದರಖಾಸ್ತು ಕಮಿಟಿ ಮಾಜಿ ಸದಸ್ಯ ಮಡುವಿನಕೋಡಿ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಹಾಗೂ ನನ್ನ ಸಹೋದ್ಯೋಗಿಗಳ ವಿಶ್ವಾಸಕ್ಕೆ ಪಾತ್ರನಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯಮಾಲೆ ಹಾಕಿ,ಸಿಹಿ ವಿತರಣೆ ಮಾಡುವ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾಧವಪ್ರಸಾದ್ ಸುದಣ್ಣ, ದರಖಾಸ್ತು ಕಮಿಟಿ ಸದಸ್ಯ ಕಾಂತರಾಜು, ಹೊಸಕೋಟೆ ಸುಭಾಷ್, ಮಹೇಶ್ ಡಿಸ್,ಪ್ರವೀಣ್ ಕುಮಾರ್, ಉಮೇಶ್, ದೀಪು,ಸಂಘದ ನಿರ್ದೇಶಕರಾದ ಸತೀಶ್ ಕುಮಾರ್, ಶ್ರೀನಿವಾಸ್, ಎಂ ಸಿ ರವಿಕುಮಾರ್, ಸಂಜಯ್, ಡಿ ಬಿ ಮಹೇಶ್, ರಾಮಚಂದ್ರ, ವಿಜಯ್ ಕುಮಾರ್, ದಿಲೀಪ್,ಹೇಮ,ಸುನಂದಮ್ಮ, ಬೇಬಿ, ರವಿಕುಮಾರ್, ರಾಜು,ಪ್ರಕಾಶ್, ಸೋಮಣ್ಣ,ಜಯರಾಂ, ಮೆಡಿಕಲ್ ಶಿವಪ್ಪ,ಶಿವಮೂರ್ತಿ, ರಾಜಶೇಖರ, ಒಂಟಿ ಮನೆ ಬಾಬು, ಮೂಲೆಮನೆ ದಿನೇಶ್, ಸುಜೇಂದ್ರ,ದೇವರಾಜು, ಪುಟ್ಟಣ್ಣ, ರಾಮಶೇವು,ರಾಜೇಶ್, ಜವರೇಗೌಡ,ಸಾಮಿಲ್ ಸತೀಶ್, ಸಣ್ಣಶೆಟ್ಟರು ಸೇರಿದಂತೆ ಇತರರು ಹಾಜರಿದ್ದರು.
- ಶ್ರೀನಿವಾಸ್ ಆರ್.