ತುಮಕೂರು: ಕಾಶ್ಮೀರದ ಫಹಲ್ಗಾಮ್ ನಲ್ಲಿ ಮರಣ ಹೊಂದಿದ 27 ಜನರ ಪೈಕಿ 3 ಜನ ಕರ್ನಾಟಕದವರು,ಯಾವುದೇ ತಪ್ಪು ಮಾಡದೆ ಉಗ್ರರ ದಾಳಿಗೆ ತುತ್ತಾಗಿ ಮರಣ ಹೊಂದಿರುವುದು ದುರದೃಷ್ಟಕರ, ಇಡೀ ದೇಶವೇ ಸತ್ತವರ ಕುಟುಂಬದ ಜೊತೆ ನಿಂತಿದೆ,ಉಗ್ರರ ಧಮನವನ್ನು ನಮ್ಮ ಭಾರತ ಸರ್ಕಾರ, ಸೈನಿಕರು ಮಾಡಲಿದ್ದಾರೆ ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಕಾರ್ಯದರ್ಶಿ ಮತ್ತು ನಿರ್ಭಯ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಗೀತಾನಾಗೇಶ್ ಹೇಳಿದರು.
ಅವರು ಇಂದು ನಗರದ ಜಯನಗರ ಸರ್ಕಲ್ ನಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ, ನಿರ್ಭಯ ಮಹಿಳಾ ಜಾಗೃತಿ ವೇದಿಕೆ,ಜಯನಗರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾಶ್ಮೀರದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಉಗ್ರರಿಗೆ ಯಾವುದೇ ದಯೆ ಇಲ್ಲ,ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ದೇಶ ಅಭಿವೃದ್ಧಿ ಆಗುತ್ತದೆ,ಹೊರಗಿನ ಶತೃಗಳಿಂದ ನಮ್ಮ ದೇಶಕ್ಕೆ ಅಪಾಯವಿದೆ,ಈ ನಿಟ್ಟಿನಲ್ಲಿ ಎಲ್ಲರೂ ದೇಶದ ಪರ ಹೋರಾಟ ಮಾಡಬೇಕು,ಪ್ರಧಾನಿ,ಗೃಹ,ರಕ್ಷಣಾ ಸಚಿವರ ಕೈ ಬಲಪಡಿಸಬೇಕು,ಸತ್ತವರ ಕುಟುಂಬ ಸದಸ್ಯರ ಕಥೆ ಏನಾಗಬೇಕು?ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಪ್ರೀತಿ ವಿಶ್ವಾಸದಿಂದ ಇದ್ದರೆ ಹೊರಗಿನ ಶತೃಗಳನ್ನು ಹೊಡೆದು ಎದುರಿಸಬಹುದು ಎಂದು ತಿಳಿಸಿದರು.

ಸಂಕಲ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಿ.ಎಸ್.ರಮೇಶ್ ರವರು ಮಾತನಾಡಿ, ದೇಶ ಇವತ್ತು ದುಃಖದಲ್ಲಿದೆ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ನಾವುಗಳೇ ಚಿಕ್ಕ ಚಿಕ್ಕ ವಿಚಾರಗಳಿಗೆ ಹೊಡೆದಾಡುತ್ತಾ ಮನಸ್ಸುಗಳನ್ನು ಚಿಕ್ಕದಾಗಿ ಮಾಡಿಕೊಂಡರೆ ಶತೃಗಳಿಗೆ ಸಹಾಯವಾಗುತ್ತದೆ,ದೇಶದ ಪ್ರತಿಯೊಬ್ಬರೂ ನಾವು ಮೊದಲು ಭಾರತೀಯರು ಎಂದು ಮನದಟ್ಟುಮಾಡಿಕೊಳ್ಳಬೇಕು,ದೇಶವಿದ್ದರೆ ನಾವು ಎಂದು ಮೊದಲು ತಿಳಿದುಕೊಂಡು ಉಗ್ರರ ನಾಶಕ್ಕಾಗಿ ಸಂಕಲ್ಪ ಮಾಡೋಣ ಸರ್ಕಾರದ ಜೊತೆಗೆ ನಾವು ಕೈಜೋಡಿಸಬೇಕು ನಮ್ಮ ದೇಶ ನಮ್ಮ ಹೆಮ್ಮೆ ಎಂದು ತಿಳಿಸಿದರು.

ಜಯನಗರ ಕ್ಷೇಮಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ಮಾತನಾಡುತ್ತಾ ಹೆಂಡತಿ ಎದುರು ಗಂಡನನ್ನು ಕೊಂದರೆ,ಮಕ್ಕಳ ಮುಂದೆ ತಂದೆಯನ್ನು ಉಗ್ರ ಕೊಲ್ಲುತ್ತಾನೆ ಅಂದರೆ ಅವರ ಕುಟುಂಬದ ಪರಿಸ್ಥಿತಿ ಏನಾಗಬೇಕು,ತಂದೆಗೆ ಮಗ ಅಂತ್ಯಸಂಸ್ಕಾರ ಮಾಡಬೇಕು ಆದರೆ ಮಗನಿಗೆ ತಂದೆ ಅಂತ್ಯಸಂಸ್ಕಾರ ಮಾಡಬೇಕಾದ ಅನಿವಾರ್ಯಗೆ ಇಂದು ಆಗಿದೆ,ಎಲ್ಲರೂ ಉಗ್ರರ ಧಮನಕ್ಕಾಗಿ ಕೈಜೋಡಿಸಿ,ದೇಶದ ಅಸ್ಮಿತೆಗೆ ಹೋರಾಟ ಮಾಡೋಣ ಮುಂದೆ ಈ ರೀತಿ ಆಗದಂತೆ ಜಾಗೃತಿ ವಹಿಸಿ,ಯಾರ ಬಗ್ಗೆಯೇ ಅನುಮಾನ ಬಂದರೆ ತಕ್ಷಣವೇ ಪೋಲೀಸರಿಗೆ ತಿಳಿಸಿ ಎಂದು ನಾಗರೀಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾನವ ಸರಪಳಿ ನಿರ್ಮಿಸಿ ಕ್ಯಾಂಡಲ್ ಹಚ್ಚಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರೀನಿವಾಸಮೂರ್ತಿ,ನಂದಿನಿ, ಜ್ಯೋತಿಆಚಾರ್ಯ,ನವೀನ್,ಪ್ರಕಾಶ್ಭಾರಧ್ವಾಜ್,ಶಿವಣ್ಣ,ಕೆ.ಆರ್.ಮಂಜುಳಾ,ಗೋವಿಂದರಾಜು,ಲತಾನಾರಾಯಣ್,ಚೇತನ್,ಎಸ್.ವೆಂಕಟೇಶ್,ಪುಟ್ಟರುದ್ರಪ್ಪ ಇತರರು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ