ಕೊರಟಗೆರೆ-ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಇಂಜಿನಿಯರ್- ತಹಶೀಲ್ದಾರ್ ಮಂಜುನಾಥ್ ಕೆ.

ಕೊರಟಗೆರೆ:ಕಲಾನೈಪುಣ್ಯದೊಂದಿಗೆ ಸಂಪ್ರದಾಯ ಆಚರಣೆಯ ಕಸುಬುಗಳನ್ನು ಹೊಂದಿ ಆಭರ ಣಗಳನ್ನು,ಆಯುಧಗಳನ್ನು,ಸೌಧಗಳನ್ನು ಮಾಡುತ್ತಾ ಸಮಾಜ ಮತ್ತು ಸಂಸ್ಕೃತಿಗೆ ತನ್ನದೇ ಆದ ಸುಂದರ ಕೊಡುಗೆಗಳನ್ನು ನೀಡುತ್ತಾ ಬಂದಿರುವ ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಇಂಜಿನಿಯರ್ ಎಂದು ತಹಶೀಲ್ದಾರ್ ಮಂಜುನಾಥ್ ಕೆ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದೊಂದಿಗೆ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಸಮಾಜದಲ್ಲಿ ಧಾರ್ಮಿಕ ಮತ್ತು ಭಾಷೆ ಆಧಾರಗಳ ಮೇಲೆ ವಿವಿಧ ಜಾತಿ ಪಂಗಡಗಳು ಅಸಂಖ್ಯ ರೀತಿಯಲ್ಲಿ ಹರಡಿಕೊಂಡಿವೆ.ಪ್ರತಿಯೊಂದು ಪಂಗಡವೂ ತನ್ನದೇ ಆದ ಸಂಪ್ರದಾಯ,ಆಚರಣೆ ಕಸುಬುಗಳನ್ನು ಹೊಂದಿದ್ದು, ಸಾಂಸ್ಕೃತಿಕ ಜೀವನವನ್ನು ಪ್ರತಿನಿಧಿಸುತ್ತಿದ್ದು ಇದರಲ್ಲಿ ವಿಶ್ವಕರ್ಮ ಸಮುದಾಯವು ಒಂದು.ಈ ಸಮುದಾಯ ಕಬ್ಬಿಣ, ಕಟ್ಟಿಗೆ, ಕಂಚು, ತಾಮ್ರ, ಬೆಳ್ಳಿ, ಬಂಗಾರ ಮತ್ತು ಶಿಲ್ಪಗಳನ್ನು ಆಧರಿಸಿ ನೈಪುಣ್ಯಗಾರಿಕೆಯಿಂದ ಆಭರಣಗಳನ್ನು, ಆಯುಧಗಳು ಸೇರಿದಂತೆ ನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ತಯಾರಿಸುತ್ತಾ ರೈತರಿಗೆ ಕೃಷಿಕ ಪೂರಕವಾದ ಸಾಮಗ್ರಿಗಳನ್ನು ಒದಗಿಸುತ್ತಾ ರೈತರ ಬೆನ್ನೆಲುಬಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.ಪುರಾಣಗಳ ಪ್ರಕಾರ ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಇಂಜಿನಿಯರ್ ಎಂದು ತಿಳಿಸಿದರು.

ವಿಶ್ವಕರ್ಮ ಸಮಾಜದ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ನಿಗಮ ಮಂಡಳಿ,ಸಹಾಯಧನದಲ್ಲಿ ಸಾಲ ಸೌಲಭ್ಯ,ಶೈಕ್ಷಣಿಕ ಅಭಿವೃಧ್ದಿಗೆ ವಿಧ್ಯಾರ್ಥಿ ವೇತನ,ಮನೆಗಳನ್ನು ನೀಡುವ ಮುಖಾಂತರ ವಿಶ್ವಕರ್ಮವನ್ನು ಗುರುತಿಸಿದ್ದು ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪುವ ಮೂಲಕ ಯೋಜನೆಗಳು ಸದುಪಯೋಗ ವಾಗಬೇಕು ಎಂದು ತಿಳಿಸಿದರು.

ಸಮುದಾಯದ ಮುಖಂಡರು ಹಾಗೂ ಮಾರಮ್ಮ ದೇವಿ ಆರ್ಚಕ ಶ್ರೀಧರಾಚಾರ್ ಮಾತನಾಡಿ ವಿಶ್ವಕರ್ಮರು ಸತ್ಯಯುಗದ ಸ್ವರ್ಗಲೋಕ,ತ್ರೇತಾಯುಗದ ಲಂಕಾ,ದ್ವಾಪರದ ದ್ವಾರಕ ಮತ್ತು ಕಲಿಯುಗದ ಹಸ್ತಿನಾಪುರದಂತಹ ಎಲ್ಲಾ ಪ್ರಸಿದ್ದ ನಗರಗಳು ಮತ್ತು ರಾಜಧಾನಿಗಳನ್ನು ರಚಿಸಿದ್ದಾರೆ.ವಿಶ್ವಕರ್ಮರು ಮಹಾದೇವನ ತ್ರಿಶೂಲ, ಶ್ರೀಹರಿಯ ಸುದರ್ಶನ ಚಕ್ರ, ಆಂಜನೇಯನ ಗದೆ, ಯಮರಾಜನ ಕಾಲದಂಡ, ಕರ್ಣನ ಕುಂಡಲ ಮತ್ತು ಕುಬೇರನ ಪುಷ್ಪಕ ವಿಮಾನವನ್ನು ನಿರ್ಮಿಸಿ ಕೊಟ್ಟಂತ ಸಮುದಾಯ.ಇಂತಹ ಶ್ರೇಷ್ಠ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ,ರಾಜಕೀಯವಾಗಿ ಹಿಂದುಳಿದಿದ್ದು  ಸರ್ಕಾರ ನೀಡುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ರವೀಂದ್ರನಾಥ್, ಖಜಾಂಚಿ ಆರ್.ಸಿ.ಪ್ರಕಾಶ್‍ಕುಮಾರ್, ತುಂಬಾಡಿ ಕೃಷ್ಣಾಚಾರ್, ನೀಲಕಂಠಚಾರ್, ನಾಗರಾಜು, ಪತ್ರಕರ್ತ ಕೆ.ಎನ್.ಸತೀಶ್. ನರಸಿಂಹಮುರ್ತಿ, ಮಂಜುಳಾ, ರುದ್ರಾಚಾರ್, ತಾ.ಪಂ. ಇಓ ಅಪೂರ್ವ, ಶಿರಸ್ಥೇದಾರ್ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್‍ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ, ಪಶು ಇಲಾಖೆ ಡಾ.ನಾಗಭೂಷಣ್, ಸಮಾಜಿಕ ಅರಣ್ಯಾಧಿಕಾರಿ ಶಿಲ್ಪ, ತೋಟಗಾರಿಕೆ ನಾಗರಾಜು, ಕಂದಾಯ ಇಲಾಖೆಯ ನಕುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

———–-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?