ಚಿಕ್ಕಮಗಳೂರು:– ಕಾಶ್ಮೀರದಲ್ಲಿ ನಡೆದ ಅಮಾಯಕರ ಹಿಂದುಗಳ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಡವಂತಿ ಶಕ್ತಿ ಕೇಂದ್ರದ ಬೊಗಸೆ ಬೂತ್‌ನ ದೇವರಗದ್ದೆ ಬಸ್ ನಿಲ್ದಾಣದ ವೃತ್ತದಲ್ಲಿ ಗುರುವಾರ ರಾತ್ರಿ ದೀಪ ಬೆಳಗಿಸುವ ಮೂಲಕ ಮೌನ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ, ಪಕ್ಷಾತೀತವಾಗಿ, ಜಾತಿ ರಹಿತವಾಗಿ ನಾವೆಲ್ಲರೂ ಒಂದು-ನಾವೆಲ್ಲರೂ ಹಿಂದೂ, ನಮಗೆಲ್ಲರಿಗೂ ಇರುವುದು ಒಂದೇ ದೇಶ ಅದು ಭಾರತ ದೇಶ ಎಂಬ ಭಾವನೆಯಿಂದ ಒಟ್ಟಾಗಿ ಬದುಕಬೇಕು ಎಂದರು.
ಹೀನಾ ಕೃತ್ಯ ಎಸಗಿ, ದೇಶಕ್ಕೆ ಗೌರವ ತೋರಿದವರು, ನಮ್ಮಲ್ಲಿದ್ದು ನಮ್ಮಗಳ ಮೇಲೆ ಸಂಚು ರೂಪಿಸು ವ ಪ್ರತಿಯೊಬ್ಬರನ್ನು ಗುಂಡಿಕ್ಕಬೇಕು. ಹಿಂದುಗಳ ಹತ್ಯೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿ ಬೂತಿ ನಲ್ಲೂ ಪ್ರತಿಭಟನೆ ಮಾಡಿ ಪ್ರತಿಯೊಬ್ಬ ಹಿಂದೂಗಳಿಗೂ ಮನವರಿಕೆ ಮಾಡಿಕೊಡಬೇಕು ಎಂದರು.

ಹಿಂದುಗಳ ಹತ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನಕ್ಕೆ ಭಾರತ ಪ್ರತೀಕಾ ರದ ದಾಳಿಗೆ ತಿರುಗೇಟು ನೀಡಿದೆ, ಆರ್ಥಿಕತೆ ಮೇಲೆ ಐದಂಶದ ರಾಜಾತಾಂತ್ರಿಕ ಸರ್ಜಿಕಲ್ ಸ್ಟ್ರೈಕ್ ಮಾಡಿದೆ, ಸಿಂಧು ನದಿ ಜಲ ಒಪ್ಪಂದಕ್ಕೆ ತಕ್ಷಣ ಬ್ರೇಕ್, ಅಟ್ಟಾರಿ ಗಡಿ ಬಂದ್, ವೀಸಾ ರದ್ದು, ರಾಯಬಾರಿ ಕಚೇರಿ ಸಿಬ್ಬಂದಿ ಕಡಿತ, ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಇಳಿಸಿ ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು.
ಪ್ರತಿಯೊಬ್ಬ ಹಿಂದುಗಳು ಭಾರತೀಯರು ಎಲ್ಲರೂ ಒಟ್ಟಾಗಿ ನಿಲ್ಲಬೇಕು, ನಮ್ಮ ಹಿಂದೂ ರಾಷ್ಟ್ರವನ್ನು ಬಲಿಷ್ಠಗೊಳಿಸಿ, ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭಾಜಪ ಮುಖಂಡ ರುಗಳಾದ ಮುಕುಂದ ಶೆಟ್ಟಿ, ಧಾನಪ್ಪ ಶೆಟ್ಟಿ, ಶಿವಣ್ಣಗೌಡ ದೇವರಾಜ್, ಪೂರ್ಣೇಶ್, ಸಂತೋಷ್, ರಾಮ ಚಂದ್ರ, ಸತೀಶ್, ಗ್ರಾಮಸ್ಥರು ಇದ್ದರು.
– ಸುರೇಶ್ ಎನ್.