ಕೊರಟಗೆರೆ-ಸತ್ಯಗಣಪತಿ ಸೇವಾ ಮಂಡಳಿ-64 ವರ್ಷಗಳಿಂದ-ಅನ್ನಸಂತರ್ಪಣೆ ಕಾರ್ಯಕ್ರಮ-ಎಸ್ ಆರ್ ಎಸ್ ಬಸ್ ಮಾಲೀಕರಿಂದ ನಿರಂತರ ಸೇವೆ

ಕೊರಟಗೆರೆ:-ಪಟ್ಟಣದ ಸತ್ಯಗಣಪತಿ ಸೇವಾ ಮಂಡಳಿವತಿಯಿಂದ ಏರ್ಪಡಿಸಲಾಗಿದ್ದ ಅನ್ನಸಂತರ್ಪಣೆಯಲ್ಲಿ ೨೦೦೦ ಕ್ಕೂ ಅಧಿಕ ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಮಂಡಳಿಯ ಕಾರ್ಯಾದ್ಯಕ್ಷ ಕೆ.ಆರ್.ಓಬಳರಾಜು ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ಬಸ್ಟಾಂಡ್ ವೃತ್ತದ ಶ್ರೀ ಸತ್ಯಗಣಪತಿ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅನ್ನ ಸಂತರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸತ್ಯಗಣಪತಿ ಸೇವಾ ಮಂಡಳಿಯಿಂದ 64 ವರ್ಷಗಳಿಂದ ಸತತವಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ತುಮಕೂರಿನ ಎಸ್‍ಆರ್‍ಎಸ್ ಬಸ್‍ಗಳ ಮಾಲೀಕರಾದ ರೇವಣ್ಣಸಿದಪ್ಪನವರು ಪ್ರಾರಂಭಿಸಿದ್ದ ಮಹತ್ಕಾರ್ಯವನ್ನು ಅವರ ನಂತರ ಅವರ ಕುಟುಂಬದವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇಂದು ಸುಮಾರು 2000 ಭಕ್ತರಿಗೆ ಗಣೇಶ ಪ್ರಸಾದ ಅನ್ನಸಂತರ್ಪಣೆ ಕಾರ್ಯ ನಡೆದಿದ್ದು ಈ ಕಾರ್ಯದಲ್ಲಿ ಮಂಡಳಿಯ ಪದಾಧಿಕಾರಿಗಳು, ಬಸ್ಟಾಂಡ್ ಗೆಳೆಯರು,ಭಕ್ತಾಧಿಗಳು,ಪಟ್ಟಣ ಪಂಚಾಯತಿ ಅರೋಗ್ಯಅಧಿಕಾರಿ ಹುಸೇನ್, ಪೌರಕಾರ್ಮಿಕರು, ಸಿಬ್ಬಂದಿಗಳು ಸೇವೆ ಮಾಡಿದ್ದು ಈ ಸೇವೆಯನ್ನು ಮಂದುವರೆಸಿಕೊಂಡು ಹೋಗಲಾಗುವುದು ಎಂದರು.

ಎಸ್‍ ಆರ್‍ ಎಸ್ ಬಸ್ ಮಾಲೀಕರಾದ ಮಂಜುನಾಥ್ ಮಾತನಾಡಿ ನಮ್ಮ ತಂದೆಯವರಾದ ರೇವಣ್ಣಸಿದ್ದಪ್ಪ ನವರು ಹಲವು ವರ್ಷಗಳಿಂದ ಸತ್ಯಗಣಪತಿಯ ಅನ್ನದಾನ ನಡೆಸಿಕೊಂಡು ಬರುತ್ತಿದ್ದು ಈಗ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.ಈ ಅನ್ನಸಂತರ್ಪಣೆ ಕಾಯಕ್ರಮ ಸತ್ಯಗಣಪತಿ ಮಂಡಳಿಯ ಹಿರಿಯರು,ಪದಾಧಿಕಾರಿಗಳ ಸಹಕಾರದಿಂದ ನಡೆದುಕೊಂಡು ಹೋಗುತ್ತಿದ್ದು ಈ ಪುಣ್ಯದ ಕಾರ್ಯಕ್ರಮಕ್ಕೆ ಎಲ್ಲರೂ ಜಾತ್ಯಾತೀತವಾಗಿ ಧರ್ಮಾತೀತವಾಗಿ ಭೆದಭಾವ ಇಲ್ಲದೆ ಸೇರುವುದು ವಿಶೇಷವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೊರಟಗೆರೆ ಸಿ.ಪಿ.ಐ.ಅನಿಲ್, ಪ.ಪಂ.ಸದಸ್ಯರಾದ ನಟರಾಜು, ನಂದೀಶ್, ಮಂಡಳಿಯ ಲಾರಿಮಲ್ಲಣ, ಅರಾದ್ಯ, ಕೆ.ವಿ.ಮಂಜುನಾಥ್, ಕೆ.ಆರ್.ನಾಗೆಂದ್ರ, ಟೀಅಂಗಡಿ ರಾಜಣ್ಣ, ಕೆ.ವಿ.ಪುರುಷೋತ್ತಮ, ವಿನಯ್‍ಕುಮಾರ್, ಕಾರ್ ಮಹೇಶ್, ದೀಪಕ್, ಜಯಸಿಂಹ, ಹಯಾತ್‍ಖಾನ್, ಅಣಪ್ಪ, ಚೆನ್ನಕೇಶವ, ಶ್ರೀನಿವಾಸ್, ಸಾಗರ್, ಕಾರ್ ಸಿದ್ಧರಾಜು, ಹರೀಶ್, ಸೇರಿದಂತೆ ಹಲವರು ಹಾಜರಿದ್ದರು.

—————-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?