ಕೆ.ಆರ್.ಪೇಟೆ-ರೈತರು ಬೆಳೆದ ಕಬ್ಬು ರಸ್ತೆ ಪಾಲು-ನಿಗದಿತ ತೂಕಕ್ಕಿಂತ ಹೆಚ್ಚು ಸಾಗಣೆ ನಡೆಸುವ ವಾಹನಗಳ ವಿರುದ್ಧ ಸೂಕ್ತ ಕ್ರಮಕ್ಕೆ-ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಒತ್ತಾಯ

ಕೆ.ಆರ್.ಪೇಟೆ:ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಗೆ ಜಿಲ್ಲೆ ಹಾಗು ಹೊರ ಜಿಲ್ಲೆಯಿಂದ ಕಬ್ಬನ್ನ ನಿಯಮಿತ ತೂಕಕ್ಕಿಂತ ಅಧಿಕವಾಗಿ ತುಂಬಿಕೊಂಡು ಬರುವ ಕೆಲ ಲಾರಿ ಮತ್ತು ಟ್ರಾಕ್ಟರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ರವರ ನೇತೃತ್ವದಲ್ಲಿ ತಹಶೀಲ್ದಾರ್ ಎಸ್.ಯು ಅಶೋಕ್ ರವರಿಗೆ ಮನವಿ ಸಲ್ಲಿಸಲಾಯಿತು.

ವಾಹನಗಳ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಕಬ್ಬನ್ನು ಬಾಡಿಗೆಯ ದುರಾಸೆಗೆ ಬಿದ್ದ ವಾಹನಗಳ ಮಾಲೀಕರು ತುಂಬಿಕೊಂಡು ಬರುತ್ತಿದ್ದು ರಸ್ತೆ ಗುಂಡಿಬಿದ್ದಿರುವ ಕಾರಣಕ್ಕೆ ಅಪಘಾತಗಳು ಘಟಿಸಿ ಆ ಕಬ್ಬು ರಸ್ತೆ ಪಾಲಾಗುತ್ತಿದೆ.ಜೊತೆಗೆ ರಸ್ತೆಯುದ್ದಕ್ಕೂ ಕಬ್ಬು ಬೀಳುವುದರಿಂದ ದ್ವಿಚಕ್ರವಾಹನಗಳ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ವರ್ಷಾನುಗಟ್ಟಲೆ ಶ್ರಮವಹಿಸಿ ಬೆಳೆದ ಕಬ್ಬು ಕಾರ್ಖಾನೆಗೆ ಹೋಗದೆ ಹೀಗೆ ಪೋಲಾಗಿ ಹೋಗುತ್ತಿದ್ದು ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ.ನಿಯಮಿತ ತೂಕಕ್ಕಿಂತ ಅಧಿಕ ಪಸಲು ಕೊಂಡೊಯ್ಯುವ ಕೆಲ ವಾಹನಗಳ ವಿರುದ್ಧ ಕಾರ್ಖಾನೆ ಆಡಳಿತ ಮಂಡಳಿ ಸೂಕ್ತ ಕಠಿಣ ಕ್ರಮ ಕೈಗೊಳ್ಳದೆ ಇರುವುದೇಕ್ಕೆ ರೈತರ ಫಸಲು ರಸ್ತೆ ಪಾಲಾಗುತ್ತಿದೆ.ಇದಕ್ಕೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೊಸದಾಗಿ ತಹಶೀಲ್ದಾರರಾಗಿ ಆಗಮಿಸಿರುವ ಎಸ್ ಯು ಅಶೋಕ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಎಸ್.ಯು ಅಶೋಕ್, ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಕಾರ್ಯಾಧ್ಯಕ್ಷ ಕೆರೆಕೋಡಿ ಆನಂದ್ ಯೂತ್ ಅಧ್ಯಕ್ಷ ಮಹೇಶ್,ಉಪಾಧ್ಯಕ್ಷ ಯೋಗೇಶ್,ಸಂಘಟನೆ ಕಾರ್ಯದರ್ಶಿ ಶಂಕರ್,ರಾಘವೇಂದ್ರ.ಹರೀಶ್. ಮೋಹನ್.ಸೇರಿದಂತೆ ಪದಾಧಿಕಾರಿಗಳು ಇದ್ದರು.

————–ಮನು ಮಾಕವಳ್ಳಿ

Leave a Reply

Your email address will not be published. Required fields are marked *

× How can I help you?