ಚಿಕ್ಕಮಗಳೂರು-ಅನಧಿಕೃತ ಶಾಲೆಗೆ ಕಡಿವಾಣ ಹಾಕಲು ಕಟಾರೀಯಾಗೆ ಮನವಿ

ಚಿಕ್ಕಮಗಳೂರು:– ನಗರದಲ್ಲಿ ಅನಧಿಕೃತವಾಗಿ ತೆರೆದಿರುವ ಶಾಲೆಗಳ ವಿರುದ್ಧ ಕ್ರಮ ಕೈ ಗೊಳ್ಳಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ರಾಜೇಂದ್ರ ಕುಮಾರ್ ಕಟಾರೀಯಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ವೇದಿಕೆ ಅಧ್ಯಕ್ಷ ವಿನೋದ್ ಬೊಗಸೆ ನಗರದ ಹೃದಯಭಾಗದ ದೀಪಾ ನರ್ಸಿಂಗ್ ಮುಂಭಾಗದ ಬೈಪಾಸ್ ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿ ಕಳೆದ ಎರಡು ತಿಂಗಳಿನಿಂದ ದಿಡೀ ರನೇ ನರ್ಸರಿಯಿಂದ 8ನೇ ತರಗತಿವರೆಗೆ ಅನಧಿಕೃತ ಶಾಲೆಯನ್ನು ತೆರೆಯಲಾಗಿದೆ ಎಂದು ಹೇಳಿದರು.

ದಾಖಲಾತಿ ಕೋರಿ ಸಾರ್ವಜನಿಕ, ಬಹಿರಂಗ ಹಾಗೂ ಕಾನೂನು ಬಾಹಿರವಾಗಿ ಶಾಲೆಯನ್ನು ಅನೇಕ ತಿಂಗಳಿಂದ ನಡೆಸಲಾಗುತ್ತಿದೆ. ಅಲ್ಲದೇ ಈ ಹೆಸರಿನಲ್ಲೇ ನೂತನ ನ್ಯಾಯಾಲಯದ ಕಟ್ಟಡದ ಬಳಿ ಮತ್ತೊಂ ದು ಶಾಲೆಯನ್ನು ತೆರೆಯಲಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಬೈಪಾಸ್‌ನ ವಾಣಿಜ್ಯ ಸಂಕೀರ್ಣದಲ್ಲಿ ಅನಧಿಕೃತ ಶಾಲೆಗೆ ದಾಖಲಾಗಿರುವ ಮಕ್ಕಳ ಭವಿಷ್ಯವನ್ನು ಹಾಳು ಮಾಡುವ ಹುನ್ನಾರದಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಪಟ್ಟಿದ್ದನ್ನು ಗಮನಿಸಿ ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಸ್ಥಳಕ್ಕೆ ತೆರಳಿ ಪರೀಕ್ಷಿಸಿದ್ದು ಕೂಡಲೇ ಅನಧಿಕೃತ ಶಾಲೆಗೆ ಕಡಿ ವಾಣಕ್ಕೆ ಉಸ್ತುವಾರಿ ಕಾರ್ಯದರ್ಶಿಗಳು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆ ಉಪಾಧ್ಯಕ್ಷ ಕೋಟೆ ಸೋಮಣ್ಣ, ಕಾರ್ಯದರ್ಶಿ ಎಸ್‌ಡಿಎಂ ಮಂಜು, ಸದಸ್ಯರಾದ ಸಿ.ಹೆಚ್.ಶ್ರೀನಿವಾಸ್, ರಾಜೇಶ್, ರಿಜ್ವಾನ್, ಶ್ರೀಧರ್, ಪಾಪಣ್ಣ, ಶರತ್ ಮತ್ತಿತರರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?