ಕೊರಟಗೆರೆ-ದೇವರ ಕಾರ್ಯಮಾಡುವ ಮೂಲಕ ನಾಡಿನಲ್ಲಿ ಸಂಸ್ಕೃತಿ,ಸಂಪ್ರದಾಯಗಳನ್ನ ಉಳಿಸಬೇಕು-ಟಿ.ಬಿ.ಜಯಚಂದ್ರ

ಕೊರಟಗೆರೆ ;- ನಾಡಿನಲ್ಲಿ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ದೇವಾಲಯಗಳು ದೇವರ ಕೆಲಸಗಳನ್ನು ಭಕ್ತಾಧಿಗಳು ಮಾಡಿತ್ತಿರಬೇಕು ಎಂದು ದೇಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

        ಅವರು ಕೊರಟಗೆರೆ ಪಟ್ಟಣದಲ್ಲಿ ಗ್ರಾಮ ದೇವತೆ ಕೋಟೆ ಮಾರಮ್ಮದೇವಿ ಹಾಗೂ ಕೊಲ್ಲಾಪುರದಮ್ಮನವರ ನೂತನ ದೇವಾಲಯ ಮತ್ತು ಮೂಲ ದೇವರುಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ದೇವತಾ ಕಾರ್ಯಗಳ ಮೂಲಕ ನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನು ಬೆಳೆಸುವಂತಾಗಬೇಕು ಎಂದರು. 

       ಕೊರಟಗೆರೆ, ಮದುಗಿರಿ ಹಾಗೂ ಶಿರಾ ತಾಲೂಕುಗಳಲ್ಲಿ ಪುರಾತನ ಕಾಲದ ಐತಿಹಾಸಿಕ ದೇವಸ್ಥಾನಗಳು, ಕೋಟೆಗಳು ಇವೆ ಎಲ್ಲಾ ಕಡೇಗಳಲ್ಲಿ  ಅವುಗಳನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಹೊಣೆಯಾಗಿದೆ ಎಂದ ಅವರು, ದೇವರನ್ನು ಮನುಷ್ಯನ ರೂಪದಲ್ಲಿ ಕಾಣಬೇಕಾಗಿದೆ. ಮನುಷ್ಯ ಮನುಷುನಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡಬೇಕು ಈಗಿನ ಯುವ ಪೀಳಿಗೆ ಪ್ರತಿಯೊಬ್ಬರಲ್ಲೂ ಆಚಾರ ವಿಚಾರಗಳು ತಿಳಿಯಬೇಕು ಹಾಗೂ ಐತಿಹಾಸಿಕ ಇತಿಹಾಸಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ನೂತನ ದೇವಸ್ಥಾನವನ್ನು ವೀಕ್ಷಿಸಿ ಶುಭ ಹಾರೈಸಿದರು.

         ಈ ವೇಳೆ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿ ದೇವಾಲಯ ಸಮಿತಿಯ ವತಿಯಿಂದ ಶಾಸಕ ಟಿ.ಬಿ.ಜಯಚಂದ್ರ ರವರಿಗೆ ಕೊರಟಗೆರೆ ಇತಿಹಾಸ ದೇವಸ್ಥಾನ ಹಾಗೂ ಗಂಗಾಧರೇಶ್ವರ ಬೆಟ್ಟದ ಭಾವಚಿತ್ರವಿರುವ ಪೋಟೊವನ್ನು ಉಡುಗೊರೆಯಾಗಿ ನೀಡಿ ಸಮಿತಿಯ ಪಧಾದಿಕಾರಿಗಳು ಗೌರವಿಸಿದರು. 

         ಈ ಸಂದರ್ಭಧಲ್ಲಿ ದೇವಾಲಯ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಎಸ್.ಪಿ.ಲಕ್ಷ್ಮಿನಾರಾಯಣ್ ರಾವ್, ಮಧುಗಿರಿ ಶ್ರೀನಿವಾಸಮೂರ್ತಿ, ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಎಲ್,ಆನಂದ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಸುನಿಲ್ ಕುಮಾರ್, ಅಶ್ವತ್ಥನಾರಾಯಣರಾಜು, ಪತ್ರಕರ್ತ ಕೆ.ಬಿ.ಲೋಕೇಶ್, ಮುರಳಿಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

– ಶ್ರೀನಿವಾಸ್‌

Leave a Reply

Your email address will not be published. Required fields are marked *

× How can I help you?