ಮಂಡ್ಯ-ವಿಶ್ವಗುರು ಬಸವಣ್ಣನವರು ನವರು ತಮ್ಮ ತತ್ವ, ವಕ್ತಿತ್ವ, ಚಿಂತನೆ ಹಾಗೂ ಆದರ್ಶಗಳ ಮೂಲಕ ಜಗತ್ತಿಗೆ ಬೆಳಕಾದವರು- ಏನ್. ಚಲುವರಾಯಸ್ವಾಮಿ

ಮಂಡ್ಯ-ವಿಶ್ವಗುರು ಬಸವಣ್ಣನವರು ನವರು ತಮ್ಮ ತತ್ವ, ವಕ್ತಿತ್ವ, ಚಿಂತನೆ ಹಾಗೂ ಆದರ್ಶಗಳ ಮೂಲಕ ಜಗತ್ತಿಗೆ ಬೆಳಕಾದವರು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಏನ್. ಚಲುವರಾಯಸ್ವಾಮಿಯವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಗುರು ಬಸವಣ್ಣ ನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಹಣ, ಆಡಳಿತದಿಂದ ಪ್ರಸಿದ್ದಿಯೊಂದಿದವರಲ್ಲ ತಮ್ಮ ವ್ಯಕ್ತಿತ್ವದಿಂದ ಜಗತ್ಪ್ರಸಿದ್ಧಿ ಹೊಂದಿದವರು ಅವರಂತ ಮತ್ತೊಬ್ಬ ವ್ಯಕ್ತಿ ಜನಿಸಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಧರ್ಮದವರು ಒಪ್ಪುವ ಸಾಧಕ ಬಸವಣ್ಣನವರು ಎಂದರೆ ತಪ್ಪಾಗುವುದಿಲ್ಲ ಸಮಾಜದ ಒಗ್ಗಟ್ಟಿಗಾಗಿ 12 ನೇ ಶತಮಾನದಲ್ಲಿ ಅವರು ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಸಮಾಜದ ಒಳಿತಿಗಾಗಿ, ಸಮಾನತೆಗಾಗಿ ಮುಂದಿನ ಪೀಳಿಗೆಗಳಿಗೆ ಬಸವಣ್ಣನವರ ತತ್ವ ಮತ್ತು ಆದರ್ಶಗಳ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಮಾತನಾಡಿ, 12 ನೇ ಶತಮಾನದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆಯನ್ನು ಕಲ್ಪಿಸಬೇಕೆಂಬ ಅವರ ಚಿಂತನೆ ಇಂದು ಕಾನೂನಿನ ಸಮಾನತೆ ಹಕ್ಕಾಗಿ ಪರಿವರ್ತನೆಗೊಂಡಿದೆ. ದ್ವೇಷದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ, ಎಲ್ಲರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎನ್ನುವಂತಹದ್ದು ಅವರ ಆಶಾಯವಾಗಿತ್ತು. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ತಿಳುವಳಿಕೆ ಹೇಳಿದರು.

ವಿಶ್ವಗುರು ಬಸವೇಶ್ವರರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಡಾ. ಎಸ್. ಶಿವರಾಜಪ್ಪ ಅವರು 12 ನೇ ಶತಮಾನದಲ್ಲಿಯೇ ಸಮಾನತೆಗಾಗಿ ತನ್ನ ಜಾತಿಯನ್ನು ತೊರೆದು ವಿಶ್ವ ಧರ್ಮವನ್ನು ಅನುಸರಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು. ಅವರ ಚಿಂತನೆ, ತತ್ವ ಆದರ್ಶಗಳನ್ನು ಇಂದಿಗೂ ಪ್ರತಿಯೊಬ್ಬರು ಪಾಲಿಸಬೇಕು. ವಚನವನ್ನು ದೇವರ ಭಾಷೆಯನ್ನಾಗಿಸಿದ ಕೀರ್ತಿ ಬಸವಣ್ಣರಿಗೆ ಸಲ್ಲಬೇಕು. ತಮ್ಮ ವಚನಗಳ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಿರುವ ಅವರು ಜೀವನದ ಕಲೆಶಿಲ್ಪಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ. ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಮತ್ತು ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?