ಕೆ.ಆರ್.ಪೇಟೆ-ಜಾತಿ ವಿನಾಶದ ಹರಿಕಾರ, ಸಮ ಸಮಾಜದ ಮೇರು ಪುರುಷ ಜಗಜ್ಯೋತಿ ಬಸವಣ್ಣನವರ ಆದರ್ಶ ಗುಣಗಳು ಉತ್ತಮ ಸಮಾಜ ನಿರ್ಮಾಣ ಸಾಧ್ಯ-ಶಾಸಕ ಹೆಚ್.ಟಿ ಮಂಜು

ಕೆ.ಆರ್.ಪೇಟೆ: ಜಾತಿ ವಿನಾಶದ ಹರಿಕಾರ, ಸಮ ಸಮಾಜದ ಮೇರು ಪುರುಷ ಜಗಜ್ಯೋತಿ ಬಸವಣ್ಣನವರ ಆದರ್ಶ ಗುಣಗಳು ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.

ಅವರು ಪಟ್ಟಣದ ಶತಮಾನದ ಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶ ವ್ಯಕತಿಯಾಗಿದ್ದಾರೆ. ಜಾತಿ ವ್ಯವಸ್ಥೆ, ಲಿಂಗ-ತಾರತಮ್ಯ ವ್ಯವಸ್ಥೆ ತೀಕ್ಷವಾಗಿದ್ದ 12ನೇ ಶತಮಾನದಲ್ಲಿ ಎಲ್ಲಾ ಜಾತಿ ಪ್ರತಿನಿಧಿಗಳನ್ನು ಒಳಗೊಂಡ ಅನುಭವ ಮಂಟಪ ಸಚಿವ ಸಂಪುಟವನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಜಾತಿ ಪದ್ದತಿ, ಗಂಡು-ಹೆಣ್ಣು ಬೇದಭಾವ, ಬಡವ-ಶ್ರೀಮಂತ, ಸ್ಪೃಷ್ಯ, ಅಸ್ಪೃಷ್ಯ ಆಚರಣೆಗಳ ವಿರುದ್ದ, ಮೂಡ ನಂಬಿಕೆಗಳ ವಿರುದ್ದ ಅಪಾರ ಹೋರಾಟ ಮಾಡಿದರು. ಅಂತರ್ಜಾತಿ ವಿವಾಹವನ್ನು ಮಾಡಿಸುವ ಮೂಲಕ ಮೂಲಕ ಜಾತಿ ಪದ್ದತಿ ನಿರ್ಮೂಲನೆಗೆ ಶ್ರಮಿಸಿದರು. ‌



ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಸಮಾಜ ಅವಕಾಶ ಕಲ್ಪಿಸುವ ಮೂಲಕ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತರಲ್ಲ ಎಂದು ಸಮಾಜಕ್ಕೆ ತಿಳಿಸಿಕೊಟ್ಟರು. ಪ್ರತಿಯೊಂದು ಕಾಯಕ ಮಾಡುವ ವ್ಯಕ್ತಿಗಳಿಗೆ ಲಿಂಗಧಾರಣೆ ಮಾಡಿ ಲಿಂಗಾಯಿತ ಧರ್ಮವನ್ನು ಸ್ಥಾಪನೆ ಮಾಡಿದರು. ಆದರೆ ಇಂದು ವೀರಶೈವ ಲಿಂಗಾಯಿತ ಎಂಬುದು ಈಗ ಒಂದು ಜಾತಿಯಾಗಿ ಉಳಿದಿದೆ. ವೀರಶೈವ-ಲಿಂಗಾಯಿತ ಒಂದು ಧರ್ಮವಾಗಿ ಬೆಳೆಯಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಇನ್ನಾದರೂ ವೀರಶೈವ-ಲಿಂಗಾಯಿತ ಒಂದು ಧರ್ಮವಾಗಿ ರೂಪುಗೊಂಡರೆ ಬಸವಣ್ಣನವರ ಆಶಯವನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಕಾಪನಹಳ್ಳಿ ಗವಿಮಠ ಪೀಠಧ್ಯಕ್ಷ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಅವರು ಮಾತನಾಡಿ ಬಸವಣ್ಣನವರ ಮೌಲ್ಯಗಳು, ಚಿಂತನೆಗಳು ಸೂರ್ಯ ಚಂದ್ರ ಇರುವವರೆಗೂ ಸಮಾಜ ಸುಧಾರಣೆಗೆ ಅವಶ್ಯಕವಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಬಸವಣ್ಣನ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು.

ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸುಜೇಂದ್ರಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವಣ್ಣನವರು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಬಸವಣ್ಣ ಪ್ರತಿಪಾದಿಸಿದ್ದರಲ್ಲದೆ, ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸಿದರು. ಬಸವಣ್ಣನವರ ಅನುಭವ ಮಂಟಪದ ರೀತಿಯಲ್ಲಿ ಸರ್ವ ಜನರಿಗೆ ಸಮಪಾಲು-ಸಮಬಾಳು ನೀಡುವ ಆಶಯದೊಂದಿಗೆ ನಮ್ಮ ಸಂವಿಧಾನ ರೂಪುಗೊಂಡಿದೆ ಎಂದರು.

ಉಪನ್ಯಾಸಕ ಡಿಂಕಾ ಮಹೇಶ್ ಬಸವ ಜಯಂತಿ ಕುರಿತು ಪ್ರಧಾನ ಉಪನ್ಯಾಸ ನೀಡಿದರು.



ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲೋಕೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಮಹಾಸಭಾ ಮಾಜಿ ಅಧ್ಯಕ್ಷರಾದ ತೊಟ್ಟಪ್ಪಶೆಟ್ಟಿ, ಬ್ಯಾಂಕ್ ಪರಮೇಶ್, ಸಾಸಲು ಈರಪ್ಪ, ವಿ.ಎಸ್.ಧನಂಜಯ್‌ಕುಮಾರ್, ತಾಲ್ಲೂಕು ವೀರಶೈವ-ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಮಹಾದೇವಪ್ಪ, ವೀರಶೈವ ಮಹಾಸಭಾ ತಾಲ್ಲೂಕು ಉಪಾಧ್ಯಕ್ಷ ಪ್ರಕಾಶ್, ಚೋಕನಹಳ್ಳಿ ಅಪ್ಪಾಜಿ, ಕಾರ್ಯದರ್ಶಿ ಜಗದಂಬ, ನಿರ್ದೇಶಕರಾದ ಸಾಸಲು ಗುರುಮೂರ್ತಿ, ಅಪ್ಪಾಜಿ, ಶಿವಕುಮಾರ್, ಪ್ರಭುಕುಮಾರ್, ಸೋಮನಾಥಪುರ ಮಂಜುಳಾಮಹಾದೇವಪ್ಪ, ವಡ್ಡರಹಳ್ಳಿ ಮಧು, ಲಿಂಗಾಪುರ ಯಶವಂತ್, ಮಡುವಿನಕೋಡಿ ಗಂಗಾಧರ್, ಬಸವನಹಳ್ಳಿ ಮುರುಳಿ, ಕೆಂಪಣ್ಣ, ಶಿಕ್ಷಕ ಹಳೆಯೂರು ಯೋಗೇಶ್, ತಾಲ್ಲೂಕು ಹಿಂದುಳಿದ ವರ್ಗಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ಶಿವಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಶ್ರೀ ಬಸವೇಶ್ವರರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀಗಳ ಭಾವಚಿತ್ರವನ್ನು ಕಾರ್ಯಕ್ರಮದ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?