ಚಿಕ್ಕಮಗಳೂರು- ಮನುಷ್ಯನ ಸ್ವಾರ್ಥತನದಿಂದ ಭೂತಾಯಿ ಕಲುಷಿತ -ಲೈಫ್ ಲೈನ್ಸ್ ಫೀಡ್ಸ್ ಮ್ಯಾನೇಜರ್ ಡೈರೆಕ್ಟರ್ ಕಿಶೋರ್‌ಕುಮಾರ್

ಚಿಕ್ಕಮಗಳೂರು- ಮನುಷ್ಯನ ಸ್ವಾರ್ಥತನ ಮತ್ತು ಆಧುನಿಕತೆ ಜೀವನಾನುಸಾರಕ್ಕೆ ಪ್ರಕೃತಿ ಯನ್ನು ಹಾಳುಗೆಡುವಿ ಪ್ರತಿದಿನವು ಭೂತಾಯಿ ಮಡಿಲನ್ನು ಕಲುಷಿತಗೊಳಿಸಿ ವಿಷವನ್ನು ಉಣಬಡಿಸುತ್ತಿದ್ದಾನೆ ಎಂದು ಲೈಫ್ ಲೈನ್ಸ್ ಫೀಡ್ಸ್ ಮ್ಯಾನೇಜರ್ ಡೈರೆಕ್ಟರ್ ಕೆ.ಕಿಶೋರ್‌ಕುಮಾರ್ ಹೆಗ್ಡೆ ಹೇಳಿದರು.

ನಗರದ ಕಲ್ಯಾಣನಗರದಲ್ಲಿ ಲೈಫ್‌ಲೇನ್ಸ್ ಫೀಡ್ಸ್ ಮತ್ತು ಕಲ್ಯಾಣನಗರದ ವೆಲ್‌ಫೇರ್ ಸೊಸೈಟಿ ಗುರುವಾರ ಆಯೋಜಿಸಿದ್ಧ ಸಂಪೂರ್ಣ ಸ್ವಚ್ಚತಾ ಅಭಿಯಾನ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ಸಂಪತ್ತಿನಿಂದ ಜೀವನ ರೂಪಿಸಿಕೊಂಡಿರುವ ಮನುಜನಿಗೆ ಎಂದಿಗೂ ಪರಿಸರ ತೆರಿಗೆ ಕೇಳುತ್ತಿಲ್ಲ. ಬದಲಾಗಿ ನಾವುಗಳು ಫಲವತ್ತತೆ ಮಣ್ಣು, ಸ್ವಚ್ಚಂದ ವಾತಾವರಣ ನಿರ್ಮಿಸಲು ಪೂರಕವಾಗಿ ನಡೆದು ಕೊಂಡರೆ ಸಕಲ ಜೀವರಾಶಿಗಳಿಗೂ ಒಳಿತು. ಆದರೆ ಎಲ್ಲೆಂದರಲ್ಲಿ ಕಸಬಿಸಾಡಿ ಮಲೀನಗೊಳಿಸುವ ಹಕ್ಕು ಮನುಷ್ಯರಿಗಿಲ್ಲ ಎಂದರು.

ಸಾಮಾನ್ಯವಾಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ತಿಂಡಿಪದಾರ್ಥಗಳ ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನು ರಸ್ತೆಗಳಲ್ಲಿ ಬೀಸಾಡುವುದು ನೋಡಿದರೆ ಸಿಡಿಮಿಡಿಗೊಳ್ಳುತ್ತವೆ. ವಾಗ್ವಾದಕ್ಕೀಳಿದರೆ ಬೇರೆಯಾಗಿ ಮಾತನಾಡುತ್ತಾರೆ. ಹೀಗಾಗಿ ಪರಿಸರ ಕಾಳಜಿ ತಾನಾಗಿಯೇ ಹುದುಗಿ ಸುರಕ್ಷಿತೆಯಿಂದ ಕಾಪಾಡುವ ಜವಾ ಬ್ದಾರಿ ಮೈಗೂಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯ ಕೆಲವರು ವಿದೇಶಗಳಿಗೆ ಪ್ರವಾಸಕ್ಕೆಂದು ತೆರಳಿ ಅಲ್ಲಿನ ಸ್ವಚತಾ ನಿಯಮಕ್ಕೆ ತಲೆಬಾಗುತ್ತಾರೆ. ವಾಪಸ್ ತಾಯ್ನಾಡಿನಲ್ಲ್ಲಿ ಆ ಶಿಸ್ತನ್ನು ಪಾಲಿಸುತ್ತಿಲ್ಲ. ಇಷ್ಟೆಲ್ಲಾ ಗಮನಿಸಿದರೆ ನಮ್ಮ ಪ್ರಜಾಪ್ರಭುತ್ವ ಸಮಸ್ಯೆ ಎಂಬ ಪ್ರಶ್ನೆ ಕಾಡಲಿದ್ದು ಇದಕ್ಕೆ ದಂಡಂ ದಶಗುಣಂನಿಂದಲೇ ತಿದ್ದುವ ಕೆಲಸವಾಗಬೇಕು ಎಂದರು.

ವಿಶ್ವದ ಮುಂದುವರೆದ ಜಪಾನ್ ದೇಶದಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಶೌಚಾಲಯ ಶುಚಿಸುವ ಹಾ ಗೂ ತರಕಾರಿ ಕತ್ತರಿಸುವ ತರಬೇತಿ ನೀಡಿ ಶಿಸ್ತನ್ನು ರೂಢಿಸುವರು. ನಮ್ಮ ಶಾಲಾಮಕ್ಕಳಲ್ಲಿ ಶೌಚಾಲಯ ಶುಚಿಗೊಳಿಸಿದರೆ ದೊಡ್ಡ ತಪ್ಪಂತೆ ಬಿಂಬಿಸಲಾಗುತ್ತಿದೆ. ಹಿಂದೆ ತಾವು ಸೇರಿದಂತೆ ಅನೇಕ ಗಣ್ಯರು ಪರಿಶ್ರ ಮದಿಂದಲೇ ದೊಡ್ಡವ್ಯಕ್ತಿಯಾಗಿದ್ದಾರೆ ಎಂಬುದು ಮರೆಯಬಾರದು ಎಂದರು.

ಆ ನಿಟ್ಟಿನಲ್ಲಿ ಕಲ್ಯಾಣನಗರ ಬಡಾವಣೆಗಳಲ್ಲಿ ನಿವಾಸಿಗಳೆಲ್ಲಾ ಒಟ್ಟಾಗಿ ವೇಲ್‌ಫೇರ್ ಸೊಸೈಟಿ ನಿರ್ಮಿ ಸಿ ಸ್ವಚ್ಚತೆಯ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಸೊಸೈಟಿ ನಿಯಮಗಳನ್ನು ಗಮನಿಸಿದ ಅನೇಕ ಬಡಾವಣೆಗಳಲ್ಲಿ ರೀತಿ ಟ್ರಸ್ಟ್ ನಿರ್ಮಿಸಿಕೊಂಡು ವಾರ್ಡಿನ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

ಸಿವಿಲ್ ಇಂಜಿನಿಯರ್ ಎಂ.ಎ.ನಾಗೇಂದ್ರ ಉಪನ್ಯಾಸ ನೀಡಿ ಮಾತನಾಡಿ, ಮಾನವನ ಪಂಚೇಂದ್ರಿಗಳ ತೃಪ್ತಿಗಾಗಿ, ಪ್ರಕೃತಿಯ ಪಂಚಭೂತಗಳನ್ನು ಹಾಳು ಮಾಡುವುದು ಸರಿಯಲ್ಲ. ಜೊತೆಗೆ ಆಮ್ಮಜನಕಕ್ಕೂ ಕಲುಷಿತಗೊಂಡು ಆಸ್ಪತ್ರೆಗಳಲ್ಲಿ ದಿನೇ ದಿನೇ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿವೆ ಎಂದು ಹೇಳಿದರು.

ಕಸ ನಿರ್ಮೂಲನೆ ಕೇವಲ ಒಂದು ದಿನ ಅಥವಾ ತಿಂಗಳಲ್ಲಿ ಬಗೆಹರಿಯುವುದಲ್ಲ. ನಿರಂತರ ಪ್ರಕ್ರಿಯೆ ಲ್ಲಿ ಸಾಗಬೇಕು. ಎಲ್ಲವನ್ನೂ ಮೀರಿ ಮನುಷ್ಯನ ಸ್ವಾರ್ಥದಿಂದ ಪರಿಸರವನ್ನು ನಾಶಗೊಳಿಸಿದರೆ, ಪ್ರಕೃತಿ ಬಡ್ಡಿ ಸಮೇತ ತಿರುಗಿಸಿ, ನುಂಗಲಾರದಂಥ ತುತ್ತನ್ನು ಉಣಿಸಲಿದೆ ಎಂದು ಎಚ್ಚರಿಸಿದರು.

ಭಾರತದ ಸಮಾಜಮುಖಿ ಕಾರ್ಯದ ಟಾಟಾ ಗುರುತಿಸಿಕೊಂಡಿದ್ದು, ಆ ಸಾಲಿನಲ್ಲಿ ಜಿಲ್ಲೆಯ ಕಿಶೋ ರ್ ಕುಮಾರ್‌ಹೆಗ್ಡೆ ತಮ್ಮದೇ ಸೇವೆಯಲ್ಲಿ ಎಲೆಮರೆಕಾಯಿಯಂತೆ ಮುಖವಾಣಿಗೆ ಬರದೇ ಸೇವೆ ಸಲ್ಲಿಸಿ ಜಿಲ್ಲೆಯ ಟಾಟಾವಾಗಿ ಹೊರಹೊಮ್ಮಿದ್ದಾರೆ ಎಂದರು.

ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಪ್ರತಿದಿನವು ಸ್ವಾಸ್ಥ್ಯ ನಗರ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ನಗರಸಭೆ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಸ್ಥಳಿಯ ನಿವಾಸಿಗಳ ಸಹಕಾರ ದೊರೆತಲ್ಲಿ ಪ್ರತಿಯೊಂದು ಬಡಾವಣೆಯನ್ನು ಸ್ವಚ್ಚತೆ ಕಾಪಾಡುವಲ್ಲಿ ಸುಲಭವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಬಿ.ಎಸ್.ಹರೀಶ್, ಬಡಾವಣೆಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಪೌರಾಯುಕ್ತರು, ಶಾಸಕರು ಹೆಚ್ಚು ಒತ್ತನ್ನು ನೀಡಬೇಕು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮೊಟ್ಟಮೊದಲು ಅರ್ಧ, ಒಂದು ಲೀ ಟರ್ ಪ್ಲಾಸ್ಟಿಕ್ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಪಡೆದ ವಿದ್ಯಾರ್ಥಿಗಳು, ನಿವೃತ್ತ ಗೌರವಿಸಲಾಯಿತು. ಬಳಿಕ ಲಕ್ಕಿಡಿಪ್‌ನ ಅದೃಷ್ಟಶಾಲಿಗಳಿಗೆ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಮಂಗಳ ತಮ್ಮಯ್ಯ, ಸೊಸೈಟಿ ಉಪಾಧ್ಯಕ್ಷ ಉಮಾನಾಗೇಶ್, ಕಾರ್ಯದರ್ಶಿ ಎನ್.ಟಿ.ವೇಣುಗೋಪಾಲ್, ಸಹ ಕಾರ್ಯದರ್ಶಿ ಸುಧೀರ್‌ಕುಮಾರ್, ಖಜಾಂಚಿ ಎ.ಟಿ.ನಿಂಗರಾಜ್, ಸ್ಥಳೀಯರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?