ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿ ಮಧ್ಯಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಅಪಘಾತಗಳ ನಿಯಂತ್ರಣಕ್ಕೆ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಪಾವಗಡ, ಬೆಂಗಳೂರು ಹಾಗೂ ಆಂಧ್ರಪ್ರದೇಶ ಸೇರಿ ಐದು ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಈ ಪ್ರದೇಶದಲ್ಲಿ, ವಾಹನ ದಟ್ಟಣೆ ಹಾಗೂ ವೇಗದ ಚಾಲನೆಯಿಂದ ಅಪಘಾತ ಸಂಭವಿಸುತ್ತಿದ್ದು, ವಿಶೇಷವಾಗಿ ಹಬ್ಬದ ದಿನಗಳು ಹಾಗೂ ಶಾಲಾ-ಕಾಲೇಜು ಸಮಯದಲ್ಲಿ ಹೆಚ್ಚಿನ ಆತಂಕದ ಪರಿಸ್ಥಿತಿ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೇಡಿಕೆ ಇಟ್ಟಿದ್ದ ಸಿಸಿಟಿವಿ ನಿರ್ಮಾಣ ಕಾರ್ಯ ಈಗ ನಿಜವಾಗಿದ್ದು, ಸಾರ್ವಜನಿಕರು ಹಾಗೂ ಆಡಳಿತ ಇಲಾಖೆಗೆ ಇದು ಅನುಕೂಲವಾಗಲಿದೆ.

ಈ ವೇಳೆ ಕೋಳಾಲ ಪೊಲೀಸ್ ಠಾಣೆಯ ಪಿಎಸ್‌ಐ ಅಭಿಷೇಕ್ ಹಾಗೂ ಸಿಬ್ಬಂದಿ ಮಧುಸೂದನ್, ಪ್ರಕಾಶ್, ನಾಗರಾಜ್; ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ; ಮಾಜಿ ಗಾ.ಪಂ. ಅಧ್ಯಕ್ಷ ಸೀಗೆಪಾಳ್ಯ ನಾಗರಾಜು; ಎಲೆರಾಂಪುರದ ಚಂದ್ರಶೇಖರ್; ಮೆಡಿಕಲ್ ಹನುಮಂತು, ಆಟೋ ಶಿವಪ್ಪ ಸೇರಿದಂತೆ ಹಲವಾರು ಜನರು ಹಾಜರಿದ್ದರು.
✍️ ನರಸಿಂಹಯ್ಯ ಕೋಳಾಲ