ಚಿಕ್ಕಮಗಳೂರು- ಎಸ್.ಎಸ್.ಎಲ್.ಸಿ.- ಜ್ಞಾನರಶ್ಮಿ ಶಾಲೆಗೆ ಶೇ.100 ಫಲಿತಾಂಶ


ಚಿಕ್ಕಮಗಳೂರು:- ನಗರದ ಹಳೇ ಉಪ್ಪಳ್ಳಿಯ ಜ್ಞಾನರಶ್ಮಿ ಆಂಗಮಾಧ್ಯಮ ಶಾಲೆಯು ಈ ಬಾರಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದೆ.

ಶಾಲೆಯಲ್ಲಿ ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 24 ಪ್ರಥಮ, ಓರ್ವ ವಿದ್ಯಾರ್ಥಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ.

ಹೆಚ್.ಎಸ್.ಸಾನಿಕ 612ಕ್ಕೆ ಶೇ.97.92 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ, ಮೊಹಮ್ಮದ್ ಸುಫಿಯಾ ನ್ 603ಕ್ಕೆ ಶೇ.96.48 ಅಂಕಗಳಿಸಿ ದ್ವಿತೀಯ ಹಾಗೂ ಪಿ.ವೈಷ್ಣವಿ ಮತ್ತು ಸಮರ್ಥ್ 598ಕ್ಕೆ ಶೇ.95.68 ಫಲಿತಾಂಶ ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡ ವಿಷಯದಲ್ಲಿ ಹೆಚ್.ಎಸ್.ಸಾನಿಕ ಮತ್ತು ಸಮರ್ಥ್ಯ 125ಕ್ಕೆ 125 ಅಂಕ ಹಾಗೂ ಹಿಂದಿ ವಿಷಯ ದಲ್ಲಿ ಮೊಹಮ್ಮದ್ ಸುಫಿಯಾನ್, ರಾನಿಯಾ ಬಸ್ರಿ, ಪಿ.ವೈಷ್ಣವಿ 100ಕ್ಕೆ 100 ಅಂಕ, ವಿಜ್ಞಾನ ವಿಷಯದ ದಲ್ಲಿ ಪಿ.ವೈಷ್ಣವಿ 100ಕ್ಕೆ 100 ಅಂಕ, ಸಮಾಜ ವಿಜ್ಞಾನದಲ್ಲಿ ಹೆಚ್.ಎಸ್.ಸಾನಿಕ 100ಕ್ಕೆ 100 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.‌

ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ನಂದಕುಮಾರ್, ಆಡಳಿತಾಧಿಕಾರಿ ಲಿಖಿತ್‌ಕುಮಾರ್, ಪ್ರಾಂಶುಪಾಲೆ ಪಾಲಾಕ್ಷಮ್ಮ, ಮುಖ್ಯೋ ಧ್ಯಾಯೆ ಮುಬೀನಾ ತಾಜ್, ಶಿಕ್ಷಕಿಯರಾದ ಸಹೇರಾಬಾನು, ಕು. ಸಂಗೀತ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?