ಕೆ.ಆರ್.ಪೇಟೆ,ಮೇ.02: ತಾಲೂಕಿನ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಶಾಲೆ 10ನೇ ತರಗತಿ ಐಸಿಎಸ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ.
ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ 17 ವಿದ್ಯಾರ್ಥಿಗಳು ಐಸಿಎಸ್ಸಿ ಪರೀಕ್ಷೆ ಬರೆದಿದ್ದು ಇದರಲ್ಲಿ 05 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ 12 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕೆ.ಎಂ.ಸುಹಾನ್ ಶೇ 94, ಎಂ.ಸೋಹನ್ ಶೇ 92, ಬಿ.ಬಿ.ದೀಕ್ಷಿತಾ ಶೇ.90, ಬಿ.ಡಿ.ಅಂಕಿತ ಶೇ.88 ಮತ್ತು ಹಿತನ್ ಪಿ.ಗೌಡ ಶೇ 85 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ತಾವು ಕಲಿತ ಶಾಲೆಗೆ ಕೀರ್ತಿ ತಂದಿದ್ದಾರೆ.

ಕಳೆದ 05 ವರ್ಷಗಳ ಹಿಂದಿನಿಂದಲೂ ಹೇಮಗಿರಿ ಬಿಜಿಎಸ್ ಸಂಸ್ಥೆಯ ವಿದ್ಯಾರ್ಥಿಗಳು 10ನೇ ತರಗತಿ ಐಸಿಎಸ್ಸಿ ಪರೀಕ್ಷೆಯಲ್ಲಿ ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿದ್ದು ಪ್ರಸ್ತಕ್ತ ಸಾಲಿನಲ್ಲಿಯೂ ಅದನ್ನು ಮುಂದುವರಿಸಿದ್ದಾರೆ.
ಉತ್ತಮ ಫಲಿತಾಂಶದ ಮೂಲಕ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ಮತ್ತು ಅದಕ್ಕೆ ಶ್ರಮಿಸಿದ ಶಿಕ್ಷಕ ವೃಂದವನ್ನು ಆದಿ ಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿನಂಧಿಸಿದ್ದಾರೆ.
-ಶ್ರೀನಿವಾಸ್ ಆರ್.