ಮೈಸೂರು-ನಾರಾಯಣ ಹೃದಯಾಲಯ ಆಸ್ಪತ್ರೆಯ ವಿರುದ್ಧ ನಾಳೆ ಪ್ರತಿಭಟನಾ ಸಭೆ-ಕನ್ನಡಾಂಬೆ ರಕ್ಷಣಾ ವೇಧಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್ ಮಾಹಿತಿ

ಮೈಸೂರು– ಪ್ರತಿಷ್ಠಿತ ನಾರಾಯಣ ಹೃದಯಾಲಯ ಆಸ್ಪತ್ರೆಯ ಅಕ್ರಮಗಳ ವಿರುದ್ಧ ನಾಳೆ ಸಾಂಕೇತಿಕ ಪ್ರತಿಭಟನಾ ಸಭೆ-ಕನ್ನಡಾಂಬೆ ರಕ್ಷಣಾ ವೇಧಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಜಶೇಖರ್ ಮಾಹಿತಿ

ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು,ಇತ್ತೀಚಿನ ದಿನಗಳಲ್ಲಿ ನಾರಾಯಣ ಹೃದಯಾಲಯದಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಹಲವಾರು ದೂರುಗಳು ಸಂಘಟನೆಗೆ ಬಂದಿವೆ.ಕೇವಲ ಹಣಕ್ಕಾಗಿ ಅಲ್ಲಿನ ವೈದ್ಯರಾದಿಯಾಗಿ ಎಲ್ಲರು ಹಪಹಪಿಸುತ್ತಾರೆಂಬ ಮಾತುಗಳಿದ್ದು ಇದರ ವಿರುದ್ಧ ನಾಳೆ ಬೆಳಗ್ಗೆ 10.30 ಕ್ಕೆ ಸರಿಯಾಗಿ ಆಸ್ಪತ್ರೆಯ ಮುಂಭಾಗ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ನಾವು ನಡೆಸುವ ಸಾಂಕೇತಿಕ ಪ್ರತಿಭಟನೆಯಿಂದ ಆಸ್ಪತ್ರೆಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಆಗಿರುವ ತಪ್ಪುಗಳ ಸರಿಪಡಿಸಿಕೊಂಡರೆ ಉತ್ತಮ.ಒಂದು ವೇಳೆ ಹಳೆಯ ಚಾಳಿಯನ್ನೇ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ರಾಜಶೇಖರ್ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಗೆ ಎಲ್ಲಾ ಸಂಘಸಂಸ್ಥೆಯವರು ಬೆಂಬಲಿಸಬೇಕು.ಬಡ ಜನರ ಉಸಿರಾಗಿರುವ ನಾರಾಯಣ ಹೃದಯಾಲಯಕ್ಕೆ ಅಂಟಿರುವ ಕಳಂಕವನ್ನು ಹೋಗಲಾಡಿಸಲು ನಮ್ಮೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದು ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.

———————–-ಮಧುಕುಮಾರ್

Leave a Reply

Your email address will not be published. Required fields are marked *

× How can I help you?