ಕೊರಟಗೆರೆ ;- ಜಗತ್ತಿಗೆ ಅದ್ವೈತ ತತ್ವಜ್ಞಾನ ಕೊಟ್ಟ ಭಾರತದಲ್ಲಿ ಧರ್ಮದ ಪುನರ್ಜ್ಜೀವನ ಸ್ಥಾಪನೆಮಾಡಿದ ಮಹಾನ್ ಗುರು ಶಂಕರಾಚಾರ್ಯರು ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ ತಿಳಿಸಿದರು.
ಅವರು ಕೊರಟಗೆರೆ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಪ್ರವ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಆದಿ ಶಾಂಕರಾಚಾರ್ಯರ 1236ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಶಂಕರಾಚಾರ್ಯರನ್ನು ಕಲಿಯುಗದ ಯುಗಪುರುಷ ಎಂದು ಕರೆಯುಲಾಗುತ್ತದೆ. ಹಿಂದೂ ಧರ್ಮದ ಪುನರುಜ್ಜೀವನದ ಶ್ರೇಯಸ್ಸುನ್ನು ಇವರಿಗೆ ಸಲ್ಲುತ್ತದೆ ಹಾಗೂ ವಿವಿಧ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನರಳುತ್ತಿದ್ದ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಅತಿ ಚಿಕ್ಕವಯಸ್ಸಿನಲ್ಲಿಯೇ ಭಾರತದಾದ್ಯಂತ ಸಂಚರಿಸಿ ಅನೇಕ ಮಹತ್ತರವಾದ ಕೆಲಸಗಳನ್ನು ಮಾಡಿದರು, ಸನಾತನ ಧರ್ಮದ ಏಳ್ಗೆಗಾಗಿ ಶ್ರಮಿಸಿ ಜಗದ್ಗುರುವಿನ ಸ್ಥಾನಕ್ಕೇರಿದವರು ಶಂಕರಾಚಾರ್ಯರು ಸನಾತನ ಸಂಪ್ರದಾಯವನ್ನು ಪ್ರಚಾರ ಮಾಡುವ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು ಆ ನಾಲ್ಕು ಮಠಗಳು ಇಂದಿಗೂ ಸನಾತನ ಧರ್ಮವನ್ನು ಪ್ರಚಾರ ಮಾಡುತ್ತಿವೆ ಎಂದು ತಿಳಿಸಿದರು.

ಕೊರಟಗೆರೆ ತಾಲೂಕು ವಿಪ್ರವ ಸಂಘದ ಅಧ್ಯಕ್ಷ ಗೊರವನಹಳ್ಳಿ ಶ್ರೀಪ್ರಸಾದ್ ಮಾತನಾಡಿ ಶಂಕರಾಚಾರ್ಯರು ಹಿಂದೂ ಧರ್ಮಧ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿಗಳು, ಅವರು ಹಿಂದೂ ಧರ್ಮವನ್ನು ವ್ಯವಸ್ಥಿತ ರೂಪದಲ್ಲಿ ಆಚರಣೆಗೆ ತರುವ ವಿಧಗಳ ಬಗ್ಗೆ ಚಿಂತಿಸಿದರು, ಜೀವನಕ್ರಮಕ್ಕೆ ಒಂದು ರೂಪ ಕೊಡಲು ಪ್ರಯತ್ನಿಸಸಿದರು, ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು.
ಆದಿ ಶಂಕರಾಚಾರ್ಯರು ತಮ್ಮ 12ನೇ ವಯಸ್ಸಿನಿಂದ 32 ನೇ ವಯಸ್ಸಿನವರೆಗೆ ಅಂದರೆ ಕೇವಲ 20 ವರ್ಷಗಳಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಭಾರತದ ಎಲ್ಲಾ ನಾಲ್ಕು ಮೂಲೆಗಳಿಗೆ ಹಲವಾರು ಬಾರಿ ಪ್ರವಾಸ ಕೈಗೊಂಡು ತಮ್ಮ ಆದ್ವೈತ ಸಿದ್ದಾಂತವನ್ನು ಸಾರಿದರು ಎಂದು ತಿಳಿಸಿದರು.

ವಿಪ್ರವ ಮಹಿಳಾ ಸಂಘದ ಶ್ರೀಲಕ್ಷ್ಮೀಪ್ರಸಾದ್ ಮಾತನಾಡಿ ಆದಿ ಶಂಕರಾಚಾರ್ಯರು ಅವರ 32 ವರ್ಷಗಳ ಅಲ್ಪಾವದಿಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು, ಸದರಿ ಕೃತಿಗಳು ಬಹುಪಾಲು ಅದ್ವೈತ ಸಿದ್ದಾಂತದ ಮೇಲೆ ಕೇಂದ್ರೀಕೃತವಾಗಿದ್ದರೂ ಚಿತ್ತ ಶುದ್ದಿಗಾಗಿ ಭಕ್ತಿಯ ಬೀಜವನ್ನು ಬಿತ್ತಿದವರು, ಬ್ರಹ್ಮದುತ್ರ ಭಾಷ್ಯ, ಉಪನಿಷತ್ ಭಾಷ್ಯ, ಶಿವಾನಂದ ಲಹರಿ, ಸೌಂದರ್ಯ ಲಹರಿ, ಅನಂದ ಲಹರಿ, ಅಷ್ಟಕರಗಳು, ಭಜ ಗೋವಿಂದಂ ಸೇರಿದಂತೆ ಇನ್ನು ಅನೇಕ ರಚನೆಗಳು ಜನಪ್ರಿಯವಾಗಿವೆ ಎಂದು ತಿಳಿಸಿದರು.
ಕೊರಟಗೆರೆ ತಾಲೂಕು ವಿಪ್ರವ ಸಂಘದ ಮಾಜಿ ಆಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ ಮಾಹನ್ ದಾರ್ಶನಿಕ ಆದಿ ಶಂಕರಾಚಾರ್ಯರ ಜಯಂತಿ ಆಚರಣೆಯಲ್ಲಿ ತಾಲೂಕು ಆಡಳಿತ ನಿರ್ಲಕ್ಷಿಸುತ್ತಿದೆ, ಜಯಂತಿ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆಯ ಕರೆಯದೆ ಕೇವಲ ನಾಲ್ಕು ಗೊಡೆಗಳ ಕೊಠಡಿಗಳಲ್ಲಿ ಆಚರಣೆ ತಾಲೂಕಿನ ವಿಪ್ರವ ಸಮುದಾಯದ ನಿರ್ಲಕ್ಷತಗೆ ಕಾಣುತ್ತಿದೆ ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಲಕ್ಷತನಕ್ಕೆ ಪ್ರತಿಭಟನೆ ಮಾಡಲಾಗುವುದು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಗ್ರೇಡ್2 ತಾಹಶೀಲ್ದ್ರ್ ರಾಮಪ್ರಸಾದ್. ಶಿರಸ್ದೇದಾರ್ ವೆಂಕಟರಂಗನ್, ವೆಂಕಟೇಶ್, ಆರ್.ಐ.ಬಸವರಾಜು, ನಕುಲ್, ವಿಪ್ರವ ಸಂಘದ ಕಾರ್ಯದರ್ಶಿ ರಾಧಾಕೃಷ್ಣಮೂರ್ತಿ, ಮುಖಂಡರುಗಳಾದ ಜಯಸಿಂಹ, ಶ್ರೀನಿಧಿ, ಹನುಮಂತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- ಶ್ರೀನಿವಾಸ್