ಚಿಕ್ಕಮಗಳೂರು-ರಾಜ್ಯಾಧ್ಯಕ್ಷ ಶಂಭುಲಿಂಗ ನೇತೃತ್ವದಲ್ಲಿ ಪೂರ್ವಾಭಾವಿ ಸಭೆ-ಆ.28 ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ ಆಗಸ್ಟ್ 28ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬೆಂಗಳೂರಿನ ಕೆ.ಶಂಭುಲಿಂಗ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಪತ್ರಿಕಾ ವಿತರಕರೊಂದಿಗೆ ಸಮ್ಮೇಳನದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಸುವರ್ಣಮಾಧ್ಯಮ ಭವನದಲ್ಲಿ ನಿನ್ನೆ ಸಂಜೆ ನಡೆಸಿದ ಅವರು, ಜಿಲ್ಲೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಪತ್ರಿಕಾ ವಿತರಕ ಹಂಚಿಕೆದಾರರಿದ್ದು ಎಲ್ಲರೂ ಸಮ್ಮೇಳನದಲ್ಲಿ ಕುಟುಂಬ ಸಹಿತ ಭಾಗವಹಿಸಬೇಕೆಂದು ಮನವಿ ಮಾಡಿದರು.

ದಿನಪತ್ರಿಕೆಗಳ ವಿತರಕರ ರಾಜ್ಯಮಟ್ಟದ ಒಕ್ಕೂಟ ಈಗಾಗಲೇ ನಾಲ್ಕು ರಾಜ್ಯಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ವಿತರಕರ ಸಮಸ್ಯೆಗಳ ಬಗ್ಗೆ ಸರ್ಕಾರ, ಸಮಾಜ ಹಾಗೂ ಪತ್ರಿಕಾ ಮಾಲೀಕರ ಗಮನಸೆಳೆಯಲಾಗಿದೆ. ಇದರ ಪರಿಣಾಮವಾಗಿ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಜಾರಿಗೊಂಡಿದ್ದು ಪತ್ರಿಕಾ ವಿತರಕರಿಗೆ 10,000ರೂ. ದಿಂದ 50,000ರೂ.ಗಳವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತಿದೆ. 2ಲಕ್ಷರೂ.ವರೆಗೂ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.‌

ದಿನಪತ್ರಿಕೆಗಳ ವಿತರಕರು ಮತ್ತು ಹಂಚಿಕೆದಾರರ ಕ್ಷೇಮಾಭಿವೃದ್ಧಿ ಕುರಿತಂತೆ ಸಮಾಲೋಚನೆ ನಡೆಸಿ, ಪತ್ರಿಕಾ ವಿತರಕರಿಗೆ ರಾಜ್ಯಒಕ್ಕೂಟದಿಂದ ಗುರುತಿನಚೀಟಿ ವಿತರಿಸುತ್ತಿದ್ದು ಎಲ್ಲರೂ ಅದನ್ನು ಪಡೆದು ಇತರೆ ಸೌಲಭ್ಯಗಳನ್ನು ಹೊಂದಬಹುದೆಂದ ಶಂಭುಲಿಂಗ ಕಾರ್ಮಿಕ ಇಲಾಖೆಯಲ್ಲಿ ನೋಂ ದಾವಣೆ ಮಾಡಿಸಬೇಕೆಂದು ಮನವಿ ಮಾಡಿದರು.

ರಾಜ್ಯಮಟ್ಟದ ಸಮ್ಮೇಳನ ಆಯೋಜನೆಗೊಂಡ ಜಿಲ್ಲೆಯ ಹಿರಿಯ ವಿತರಕರಾದ ಲಕ್ಷ್ಮೀನರಸಪ್ಪ ಮತ್ತು ಜವರಪ್ಪ ಅವರಿಗೆ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ-ಸುವರ್ಣಕನ್ನಡಿಗ ಪ್ರಶಸ್ತಿಯನ್ನು ಕೊಡಿಸಲಾಗಿದೆ. ಚಿನ್ನದಪದಕ, ಲಕ್ಷರೂ. ಜೊತೆಗೆ ಬೆಂಗಳೂರಿನಲ್ಲಿ ನಿವೇಶನ ಪುರಸ್ಕೃತರಿಗೆ ಸಿಗುತ್ತದೆ. ನಮ್ಮೆಲ್ಲರಿಗೂ ಇದೊಂದು ಹೆಮ್ಮೆಯ ಸಂಗತಿ ಎಂದರು.

ಪತ್ರಿಕೆಗಳ ಅವಿಭಾಜ್ಯ ಅಂಗವಾಗಿರುವ ವಿತರಕರ ಸ್ಥಿತಿಗತಿಗಳು ಸುಧಾರಣೆಯಾಗಬೇಕು. ಜಿಲ್ಲಾಮಟ್ಟದಲ್ಲಿ ಸಂಘಟಿತರಾಗಿ ತಿಂಗಳ ಕೊನೆಯ ಭಾನುವಾರ ಸಭೆಸೇರಿ ಪರಸ್ಪರ ಚರ್ಚಿಸುವುದು ಒಳಿತು. ತಿಂಗಳಿಗೆ 100ರೂ.ಗಳನ್ನು ಸಂಘಕ್ಕೆ ಪಾವತಿಸಿದರೆ ಸ್ವತಂತ್ರವಾಗಿ ಸಂಘಟನೆಯನ್ನು ಮುನ್ನಡೆಸಬಹುದೆಂದ ಶಂಭುಲಿಂಗ ಜಿಲ್ಲಾಮಟ್ಟದಲ್ಲಿ ಶಾಸಕರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಆಶ್ರಯಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಬಹುದೆಂದರು.

ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಶ್ರೀಧರಮೋಹನ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ರಾಜ್ಯದ ಪ್ರಮುಖ ಮರ‍್ನಾಲ್ಕು ಪತ್ರಿಕಾ ಮಾಲೀಕರೊಂದಿಗೆ ಚರ್ಚಿಸಿ ರಜೆ-ಕಮೀಷನ್ ಬೇಡಿಕೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದೆಂದರು.

ಚಿಕ್ಕಮಗಳೂರಿನಲ್ಲಿ ಪತ್ರಿಕಾ ವಿತರಕರೆ ಆಗಿದ್ದವರು ನಗರಸಭಾ ಅಧ್ಯಕ್ಷರಾದಾಗ ಹನುಮಂತಪ್ಪವೃತ್ತದಲ್ಲಿ ಪತ್ರಿಕಾ ವಿತರಕರಿಗೆ ನಗರಸಭೆಯಿಂದ ಸ್ಥಳಾವಕಾಶ ಕಲ್ಪಿಸುವ ಭರವಸೆಯಿತ್ತಿದ್ದರು. ಇದಕ್ಕಾಗಿ ಗುರುತಿಸಲ್ಪಟ್ಟ ಹೆಚ್ಚಿನ ಸ್ಥಳಾವಕಾಶ ಹೂ ಮಾರಾಟಗಾರರಿಗೆ ನೀಡಲಾಗಿದೆ. ಅದರ ಮೇಲ್ಭಾಗದಲ್ಲಿ ಆರ್‌ಸಿಸಿ ಹಾಕಿಸಿ ವಿತರಕರಿಗೆ ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುವುದು. ಮಳೆ, ಗಾಳಿ, ಚಳಿಯ ಸಂದರ್ಭದಲ್ಲಿ ಹೊರಭಾಗದಲ್ಲಿ ಪತ್ರಿಕೆಗಳ ರಾಶಿ ಇಟ್ಟು ಪುರವಣಿಗಳನ್ನು ಜೋಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಪರಿಣಿತ ಇಂಜಿನಿಯರ್‌ಗಳಿಂದ ಯೋಜನೆ ರೂಪಿಸಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆವಿಜಯ್ ಪ್ರಾಸ್ತಾವಿಸಿ ವಿತರಕರು ಹಾಗೂ ಹಂಚಿಕೆದಾರರು ಸಂಘಟಿತರಾದರೆ ಸೌಲಭ್ಯಗಳನ್ನು ಪಡೆಯಬಹುದು. ಪಿ.ಎಂ.ಸ್ವಾನಿಧಿ ಯೋಜನೆ ಅಡಿ 32ಜನರಿಗೆ ಬಡ್ಡಿ ಸಹಾಯಧನದ ಸಾಲಸೌಲಭ್ಯ ಕೊಡಿಸಲಾಗಿದೆ. ಅವರೂ ಸಹ ಸಂಘಟನೆಗೆ ಆಸಕ್ತಿ ತೋರುತ್ತಿಲ್ಲ. ಒಕ್ಕೂಟದ ಗುರುತಿನಚೀಟಿ ಪಡೆಯುತ್ತಿಲ್ಲ ಎಂದು ವಿಷಾದಿಸಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತಿç ಮುಖ್ಯಅತಿಥಿಗಳಾಗಿ ಮಾತನಾಡಿ ವಿತರಕರು ಪತ್ರಿಕೆಯ ಅನಿವರ‍್ಯ ಅಂಗ. ಹಂಚಿಕೆದಾರರ ಪರಿಶ್ರಮದ ಮೇಲೆ ಪತ್ರಿಕೆಯ ಜನಪ್ರಿಯತೆ, ಜಾಹಿರಾತು ನಿರ್ಣಯಿಸಲ್ಪಡುತ್ತದೆ. ಮಾಧ್ಯಮರಂಗದ ಪ್ರಮುಖ ಭಾಗವಾಗಿರುವ ಸಂಪಾದಕರು, ಪತ್ರಕರ್ತರು, ಮುದ್ರಕರು, ಜಾಹಿರಾತು ವಿಭಾಗ, ಪ್ರಸರಣ ವಿಭಾಗ ಎಲ್ಲವೂ ಒಟ್ಟಾಗಿ ಕರ‍್ಯನಿರ್ವಹಿಸಿದರೆ ಪರಸ್ಪರ ಎಲ್ಲರಿಗೂ ಅನುಕೂಲ ಎಂದ ಅವರು, ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಓರ್ವ ಹಿರಿಯವಿತರಕರನ್ನು ವಿಶೇಷವಾಗಿ ಗುರುತಿಸಿ ಗೌರವಿಸುವುದಾಗಿ ಘೋಷಿಸಿದರು.

ಸಂಘದ ಖಜಾಂಚಿ ನಂಜುಂಡ, ಉಪಾಧ್ಯಕ್ಷ ವಿ.ಕೆ.ಬಸವರಾಜು ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ಶಂಭುಲಿAಗ ಮತ್ತು ಮಾ.ಸಂ.ಪ್ರ.ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಅವರನ್ನು ಗೌರವಿಸಲಾಯಿತು.

ಜಿಲ್ಲೆಯ ಹಿರಿಯ ಪತ್ರಿಕಾ ವಿತರಕ ಹಾಗೂ ಪತ್ರಕರ್ತ ಅಜ್ಜಂಪುರದ ರಾಜೇಂದ್ರ, ಕೆ.ಟಿ.ವೆಂಕಟೇಶ್, ಪ್ರಭುಕುಮಾರ ಅವರನ್ನು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಸಂಘದ ರಂಜಿತ್, ಮೋಹನ್ ಮತ್ತು ಕರುಣಾಕರ ಸನ್ಮಾನಿಸಿದರು.

Leave a Reply

Your email address will not be published. Required fields are marked *

× How can I help you?