ಕೊರಟಗೆರೆ:-ಲೋಕಕಲ್ಯಾಣಕ್ಕಾಗಿ ಗಂಗೆಯನ್ನೇ ದರೆಗೆ ಇಳಿಸಿದಂತ ಮಹಾನ್ ತಪಸ್ವಿ ಭಗೀರಥ ಮಹರ್ಷಿ ಜನ್ಮದಿನೋತ್ಸವ ಆಚರಣೆ ಮಾಡುವುದೇ ನಮ್ಮೆಲ್ಲರ ಭಾಗ್ಯ ಎಂದು ತಹಶಿಲ್ದಾರ್ ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ತಾಲೂಕ್ ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಲೋಕಕಲ್ಯಾಣಕ್ಕೆ ಗಂಗೆಯನ್ನೇ ಧರೆಗೆ ತಂದಂತಹ ಮಹಾನ್ ತಪಸ್ವಿಯ ಜನ್ಮದಿನಾಚರಣೆಯಲ್ಲಿ ನಾವೆಲ್ಲ ಭಾಗಿಯಾಗಿರುವುದೇ ನಮ್ಮ ಪೂರ್ವಜನ್ಮದ ಪುಣ್ಯ.

ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವನ್ನು ಗಂಗಾ ಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಿಂದಲೇ ಭಗೀರಥ ಜಯಂತಿಯನ್ನು ಸತತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ, ತನ್ನ ಘೋರ ತಪಸ್ಸಿನಿಂದ ಲೋಕ ಕಲ್ಯಾಣಕ್ಕಾಗಿ ಮಹರ್ಷಿ ಭಗೀರಥ ಮಹರ್ಷಿಗಳು ಶಿವಗಂಗೆಯನ್ನು ದರೆಗೆ ಇಳಿಸಿದಂತ ಪುಣ್ಯಾತ್ಮರನ್ನ ಸ್ಮರಿಸುವಂತಹ ಈ ಪುಣ್ಯ ದಿನವನ್ನ ಜಾತ್ಯತೀತವಾಗಿ ಆಚರಿಸಬೇಕು ಎಂದು.
ಭಗೀರಥ ವಂಶಸ್ಥರು ಭರತ ಖಂಡವನ್ನ ಆಳ್ವಿಕೆ ನಡೆಸಿದಂತಹ ಏಗ್ಗಳಿಕೆ ಹೊಂದಿದವರು , ಇಂತಹ ವಂಶಸ್ಥರಲ್ಲಿರುವಂತಹ ನೀವು ಸಮಾಜದಲ್ಲಿ ಶೈಕ್ಷಣಿಕವಾಗಿ ಮುಂದೆ ಬರುವಂತಾಗಬೇಕು, ಮಹಿಳೆಯರು ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಮಹಿಳೆಯರೇ ಕುಟುಂಬದ ಆಧಾರಸ್ತಂಭ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕುವಂತಹ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿರುವುದು ದುರಾದೃಷ್ಟಕರ , ನೀವು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಒಂದೇ ಮಾರ್ಗ ಎಂದು ಮಾರ್ಗದರ್ಶನ ನೀಡಿದರು.

ಭಗೀರಥ ಉಪ್ಪಾರ ಸಮಾಜದ ತಾಲೂಕ ಅಧ್ಯಕ್ಷ ಸಿದ್ದರಾಜು ಮಾತನಾಡಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ , ಸರ್ಕಾರ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು, ಉಪ್ಪರ ಸಮಾಜ ಮೊದಲಿನಿಂದಲೂ ರಾಜಕೀಯವಾಗಿ ಹಿಂದುಳಿದಿದೆ , ನಮ್ಮ ಸಮಾಜ ಸಂಘಟಿತರಾಧರೆ ಮಾತ್ರ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಆದ್ದರಿಂದ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ತಾಲೂಕು ಉಪ್ಪಾರ ಸಮಾಜದ ಕಾರ್ಯದರ್ಶಿ ಸೋಮಶೇಖರಯ್ಯ ಮಾತನಾಡಿ ಉಪ್ಪರ ಸಮಾಜ ಬಹಳ ಹಿಂದುಳಿದ ಸಮಾಜ ವಾಗಿದ್ದು, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬಹಳ ಹಿಂದುಳಿದ ಸಮಾಜದಲ್ಲಿ ಬಹಳ ಕೆಳಮಟ್ಟದಲ್ಲಿರುವ ಸಮಾಜವಾಗಿದ್ದು, ನಮ್ಮ ಸಮಾಜ ಸಂಘಟಿತ ಹೋರಾಟ ಮಾಡದಿದ್ದರೆ ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರಲ್ಲದೆ ತಹಸಿಲ್ದಾರ್ ಮಂಜುನಾಥ್ ಅವರಿಗೆ ನಮ್ಮ ಜನಾಂಗಕ್ಕೆ ಮುಂದಿನ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ಎಕರೆ ಜಮೀನು ಮಂಜೂರು ಮಾಡಿಕೊಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಉಪ ತಾಸಿಲ್ದಾರ್ ರಾಮಪ್ರಸಾದ್ , ಶಿರರ್ಸ್ತಿದಾರ್ ವೆಂಕಟೇಶ್, ಆರ್ ಐ .ಬಸವರಾಜು ಸಿಬ್ಬಂದಿ ವರ್ಗ ದವರಾದ ನಕುಲ್, ವೆಂಕಟೇಶ್,
ಉಪ್ಪಾರ ಸಂಘದ ಮುಖಂಡರಾದ ಹನುಮಂತ ರಾಯಪ್ಪ, ದಯಾನಂದ , ಕಾಂತರಾಜು, ನಾಗರಾಜು, ತೋಂಟರಾಧ್ಯ, ಮಂಜುನಾಥ್, ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ – ಶ್ರೀನಿವಾಸ್ ಕೊರಟಗೆರೆ