ಹೊಳೆನರಸೀಪುರ-ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 8 ಹಾಸಿಗೆಗಳ ಅತ್ಯಾಧುನಿಕ ಐಸಿಯೂ ಘಟಕ ಹಾಗೂ ಆಸ್ಪತ್ರೆಯ ನೂತನ 2 ನೇ ಶಸ್ತ್ರ ಚಿಕಿತ್ಸಾ ಕೊಠಡಿ ಉದ್ಘಾಟಿಸಿದ ಶಾಸಕ ಎಚ್.ಡಿ. ರೇವಣ್ಣ

ಹೊಳೆನರಸೀಪುರ– ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 8 ಹಾಸಿಗೆಗಳ ಅತ್ಯಾಧುನಿಕ ಐಸಿಯೂ ಘಟಕ ಹಾಗೂ ಆಸ್ಪತ್ರೆಯ ನೂತನ 2 ನೇ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಶಾಸಕ ಎಚ್.ಡಿ. ರೇವಣ್ಣ ಸೋಮವಾರ ಉದ್ಘಾಟಿಸಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನ್ಶೇಖರ್, ಡಾ ಕುಸುಮಾ, ಡಾ ನಾಗೇಂದ್ರ, ಡಾ. ರೇಖಾ, ಡಾ. ಲೋಕೇಶ್, ಡಾ. ಸೆಲ್ವಕುಮಾರ್, ಡಾ. ಅಶ್ವತಿ, ಡಾ. ಅಜಯ್, ಇದ್ದಾರೆ.

ಹೊಳೆನರಸೀಪುರ: ತಾಲ್ಲೂಕುಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತೀರ‍್ಷ ಸಕರ್ಾರ 18 ಲಕ್ಷ ಹಣ ಬಿಡುಗಡೆ ಮಾಡುತ್ತದೆ. ಆದರೆ ಆ ಹಣ ಎಲ್ಲಿಗೆ ಹೋಗುತ್ತಿದೆ ಗೊತ್ತಿಲ್ಲ. ಗ್ರಾಮೀಣ ಜನರಿಗೆ ಇದು ಬಳಕೆ ಆಗುತ್ತಿಲ್ಲ. ಹೊಳೆನರಸೀಪುರ ತಾಲ್ಲೂಕಿನ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಹಾಗೂ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ. ಅನಿಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನೆಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಣ ಎಲ್ಲಿಹೋಗುತ್ತಿದೆ ಎಂದು ಪತ್ತೆಹಚ್ಚು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಶಾಸಕ ಎಚ್.ಡಿ ರೇವಣ್ಣ ಆಗ್ರಹಿಸಿದರು.

ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಐಸಿಯು ಘಟಕ ಹಾಗೂ 2ನೇ ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿ ನಮ್ಮ ಪಡವಲಹಿಪ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಅತ್ಯತ್ತಮ ಸೇವೆ ಸಿಗುತ್ತಿತ್ತು. ಆದರೆ ಈ ಆಸ್ಪತ್ರೆ ಮುಚ್ಚುವ ಹಂತ ತಲುಪಿದೆ ಆದರೂ ಯಾರ ವಿರುದ್ದವೂ ಕ್ರಮ ತೆಗೆದುಕೊಂಡಿಲ್ಲ. ಈ ಆಸ್ಪತ್ರೆಯನ್ನು ಇಬ್ಬರು ಡಿ.ಗ್ರೂಪ್ ನೌಕರರು ನಿಯಂತ್ರಿಸುತ್ತಿದ್ದಾರಂತೆ. ಇಲ್ಲಿನ ಸಕರ್ಾರಿ ಆಸ್ಪತ್ರೆಯಲ್ಲೂ ಡಿ ಗ್ರೂಪ್ ಮತ್ತು ದಿನಗೂಲಿ ನೌಕರರು ವೈದ್ಯರನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿದೆ.

ನೀವು ವೈದ್ಯರು ತಲೆ ಕೆಡಿಸಿಕೊಳ್ಳಬೇಡಿ. ಸರಿಯಾಗಿ ಕೆಲಸ ಮಾಡದವರನ್ನು ಮುಲಾಜಿಲ್ಲದೆ ತೆಗೆದುಹಾಕಿ ಎಂದು ಸಲಹೆ ನೀಡಿದರು. ತಾಲ್ಲೂಕಿನಲ್ಲಿ 7 ಸಮುದಾಯ ಆಸ್ಪತ್ರೆಗಳ ಕಾಮಗಾರಿ ನಡೆಯುತ್ತಿದೆ. ಈ ಆಸ್ಪತ್ರೆಗಳ ಕಾಮಗಾರಿ ಪರ‍್ಣಗೊಂಡರೆ ಪ್ರತೀ ಕೇಂದ್ರದಲ್ಲಿ 7 ಜನ ವೈದ್ಯರು, 7 ಜನ ದಾದಿಯರು, 5 ಜನ ತಾಂತ್ರಿಕ ಸಿಬ್ಬಂದಿ ಗೆ ಅವಕಾಶ ಸಿಗಲಿದೆ. ಈ ಸಕರ್ಾರಿ ಆಸ್ಪತ್ರೆ ಹಾಗೂ ತಾಯಿಮತ್ತು ಮಕ್ಕಳ ಆಸ್ಪತ್ರೆಯ ಆಧುನಿಕರಣಕ್ಕೆ 50 ಕೊಟಿ ಹಣ ಕೊಡಿಸಿದ್ದೇನೆ. ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್, ಸಿ.ಟಿ. ಸ್ಕ್ಯಾನ್ ಸೌಲಭ್ಯ, ಆಧುನಿಕ ಸೌಲಭ್ಯದ ಐಸಿಯುಗಳು, 25 ಜನ ತಜ್ಞ ವೈದ್ಯರು, 70 ಕ್ಕೂ ಹೆಚ್ಚುದಾದಿಯರು, 100ಕ್ಕೂ ಹೆಚ್ಚು ಸಿಬ್ಬಂದಿ ಅತ್ಯುತ್ತಮವಾದ ಪ್ರಯೋಗಾಲಯ ಎಲ್ಲವೂ ಇದ್ದು ರಾಜ್ಯದ ಯಾವುದೇ ತಾಲ್ಲೂಕಿನಲ್ಲಿ ಇಂತಹ ಸರ್ಕಾರಿ ಆಸ್ಪತ್ರೆ ಇಲ್ಲ ಎಂದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಧನ್ಶೇಖರ್ ಮಾತನಾಡಿ, ಶಾಸಕರು ಮುಂದಿನ 20 ರ‍್ಷಗಳಿಗೆ ಆಗುವಂತಹ 5 ಅಂತಸ್ಥಿನ ಆಧುನಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಈ ಆಸ್ಪತ್ರೆಗೆ ಬಂಜೆತನ ನಿವಾರಣಾ ಕೇಂದ್ರ ಹಾಗೂ ಎಂ.ಆರ್.ಐ. ಸ್ಕ್ಯಾನಿಂಗ್ ಮತ್ತು ಹೃದ್ರೋಗ ಚಿಕಿತ್ಸಾ ಸೌಲಭ್ಯ ದೊರಕುವಂತಾದರೆ ಇದೊಂದು ಪರಿಪರ‍್ಣ ಆಸ್ಪತ್ರೆ ಆಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ಧನ್ಶೇಖರ್, ಡಾ. ಸೆಲ್ವಕುಮಾರ್, ಡಾ ನಾಗೇಂದ್ರ, ಡಾ ಕುಸುಮಾ, ಡಾ ರೇಖಾ, ಡಾ. ಅಶ್ವಥಿ, ಡಾ. ಸತ್ಯಪ್ರಕಾಶ್, ಡಾ. ಲೋಕೇಶ್, ಡಾ. ಅಜಯ್, ಅವರನ್ನು ಸನ್ಮಾನಿಸಿದರು. ತಹಶೀಲ್ದಾರ್ ರೇಣುಕುಮಾರ್, ಬಿ.ಇ.ಓ ಸೋಮಲಿಂಗೇಗೌಡ, ಸಮಾಜಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಇದ್ದರು.

Leave a Reply

Your email address will not be published. Required fields are marked *

× How can I help you?