ಚಿಕ್ಕಮಗಳೂರು-ಶ್ರೀ ತೋಳೂರಮ್ಮ, ಶ್ರೀ ಬಿಲೇಶ್ವರಸ್ವಾಮಿಯ ಸುಗ್ಗಿ ಉತ್ಸವ ಸಂಪನ್ನ


ಚಿಕ್ಕಮಗಳೂರು, ಮೇ.05:- ತಾಲ್ಲೂಕಿನ ವಸ್ತಾರೆ ಹೋಬಳಿಯ ಮೈಲಿಮನೆ ಗ್ರಾಮದ ಶ್ರೀ ತೋಳೂ ರಮ್ಮ ಮತ್ತು ಶ್ರೀ ಬಿಲ್ಲೇಶ್ವರಸ್ವಾಮಿಯ ಸುಗ್ಗಿ ಮಹೋತ್ಸವವು ಮರ‍್ನಾಲ್ಕು ದಿನಗಳಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು ಪೂರೈಸಿ ಸೋಮವಾರದಂದು ದೇವರುಗಳ ಅಡ್ಡೆ ಹೊತ್ತುಕೊಂಡು ಗ್ರಾಮಸ್ಥರು ಸುಗ್ಗಿ ಕು ಣಿತದಲ್ಲಿ ಭಾಗಿಯಾಗಿ ಸಂಪನ್ನಗೊಳಿಸಿದರು.

ನಿನ್ನೆಯಿAದಲೇ ಶ್ರೀ ತೋಳರಮ್ಮ, ಶ್ರೀ ಬಿಲ್ಲೇಶ್ವರಸ್ವಾಮಿ, ಐದಳ್ಳಿ ಭೂತಪ್ಪ, ಹಿರೇಖಾನ್ ಭೂತ ಮತ್ತು ಶ್ರೀ ಜಾಕೀರಮ್ಮರನ್ನು ಗ್ರಾಮದ ದೇವಾಲಯದ ಆವರಣದಲ್ಲಿ ಕುಳ್ಳಿರಿಸಿ ಅಲಂಕರಿಸಲಾಗಿತ್ತು. ಶ್ರೀ ಯವರ ನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಉಯ್ಯಾಲೆ ಸೇವೆ ನಡೆಸಲಾಯಿತು. ಇಂದು ಬೆಳಿಗ್ಗೆ ಗ್ರಾಮದ ಪ್ರಮುಖರು ಗುರಿ ಒಡೆದರು.

????????????????????????????????????

ಸೋಮವಾರ ಮೈಲಿಮನೆ ಹಾಗೂ ಭುವನಹಳ್ಳಿ ಗ್ರಾಮಸ್ಥರು ಸಂಪ್ರದಾಯಿಕ ಉಡುಗೆತೊಟ್ಟು ದೇ ವಾಲಯದ ಪೂಜಾಕೈಂಕಾರ್ಯಗಳಲ್ಲಿ ಭಾಗಿಯಾದರು. ಬೆಳಿಗ್ಗೆ 9.30ರ ವೇಳೆಗೆ ನಾಲ್ಕೂರು ದೇವರುಗಳ ಅಡ್ಡೆಯನ್ನು ಶ್ರೀ ತೋಳೂರಮ್ಮ, ಶ್ರೀ ಬಿಲೇಶ್ವರಸ್ವಾಮಿ ದೇಗುಲದ ಐದು ಸುತ್ತು ಹಳ್ಳಿವಾದ್ಯದೊಂದಿಗೆ ಪ್ರದಕ್ಷಿ ಣಿ ಹಾಕಿ ಉತ್ಸವವನ್ನು ಪೂರ್ಣಗೊಳಿಸಿದರು.

ಮೆರವಣಿಗೆ ಯುದ್ದಕ್ಕೂ ಅಕ್ಕಪಕ್ಕದ ನೂರಾರು ಭಕ್ತರು ಶ್ರೀದೇವಿಯ ಅಲಂಕೃತ ಅಡ್ಡೆಗೆ ಭಕ್ತಿಯಿಂದ ನಮಸ್ಕರಿಸಿದರು. ವಿಶೇಷವಾಗಿ ಸುಗ್ಗಿ ಉತ್ಸವದಲ್ಲಿ ಸರ್ವಜನಾಂಗದವರು ಒಟ್ಟಾಗಿ ಜಾತ್ರೆ ಆಚರಿಸುತ್ತಿದ್ದು ಮಹಿಳೆಯರು, ಮಕ್ಕಳು, ವೃದ್ದರ ಮುಖದಲ್ಲಿ ಸುಗ್ಗಿ ಉತ್ಸವ ಕಳೆಕಟ್ಟಿತು.
ಬಳಿಕ ಶ್ರೀ ತೋಳೂರಮ್ಮ, ಶ್ರೀ ಬಿಲೇಶ್ವರಸ್ವಾಮಿಯನ್ನು ದೇವಾಲಯ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸ ಲಾಯಿತು. ಉಳಿದಂತೆ ಐದಳ್ಳಿ ಭೂತಪ್ಪ, ಹಿರೇಖಾನ್ ಭೂತ ಮತ್ತು ಶ್ರೀ ಜಾಕೀರಮ್ಮ ದೇವರ ಅಡ್ಡೆಗಳನ್ನು ಭಕ್ತಾಧಿಗಳು ಆಯಾಯ ಗ್ರಾಮಗಳ ದೇವಾಲಯಕ್ಕೆ ಕರೆದೊಯ್ದರು.

ಈ ಸಂದರ್ಭದಲ್ಲಿ ದೇವಾಲಯ ಸಮಿ ತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?