ಚಿಕ್ಕಮಗಳೂರು;ಮೌಂಟನ್ ವ್ಯೂ ಶಾಲೆಯ ಬಳಿ ಹಾಗು ಅಲ್ಲಂಪುರ ಕೆರೆ ಏರಿ ಸೇರಿದಂತೆ ಹಲವೆಡೆ ಜನರು ರಸ್ತೆಗೆ ಕಸದ ರಾಶಿ ತಂದು ಸುರಿಯುತ್ತಿದ್ದಾರೆ.ಜೊತೆಗೆ ರೆಸಾರ್ಟ್ ಹಾಗು ಹೋಮ್ ಸ್ಟೇ ಗಳವರು ತ್ಯಾಜ್ಯ ಹಾಗು ಮದ್ಯದ ಬಾಟಲಿಗಳನ್ನು ತಂದು ಸುರಿಯುತ್ತಿದ್ದು ಅದಕ್ಕೆ ತಡೆ ಒಡ್ಡುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ನಗರದಿಂದ ಕೈಮರಕ್ಕೆ ತೆರಳುವ ರಸ್ತೆಯಲ್ಲಿ ಹಲವಾರು ಸಮಸ್ಯೆಗಳು ಇದ್ದು ಇದನ್ನು ಅಧಿಕಾರಿಗಳು
ಸರಿಪಡಿಸದೆ ಇರುವುದರಿಂದ ಮುಂದೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.
ಈ ರಸ್ತೆಯ ಸಿರಿ ಕಾಫಿ ರೆಸಾರ್ಟ್ ನಿಂದ ಕೈಮರ ಗ್ರಾಮದ ಕಡೆಗೆ ಹೋಗುವಾಗ ರಸ್ತೆಯ ಒಂದೆಡೆ ಕುಸಿತಗೊಂಡು ಸಣ್ಣ ಗುಂಡಿ ಉಂಟಾಗಿದೆ.ಮಳಯ ನೀರು ಇಲ್ಲಿ ಹರಿದು ಮಣ್ಣು ಕೂಡ ಕುಸಿದಿದೆ.ಒಂದೆಡೆ ತಗ್ಗು ಉಂಟಾಗಿದೆ.3 ತಿಂಗಳು ಕಳೆದರು ಸಂಬಂದಪಟ್ಟವರು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ನಿತ್ಯ ನೂರಾರು ವಾಹನಗಳು ಇಲ್ಲಿ ಸಂಚಾರ ಮಾಡುತ್ತವೆ.ಪ್ರಯಾಣಿಕರ ಬಸ್ಸು ಮತ್ತು ಶಾಲಾವಾಹನಗಳು ಕೂಡ ಸಂಚಾರ ಮಾಡುವುದರಿಂದ ಕೂಡಲೆ ಈ ಗುಂಡಿ ಮುಚ್ಚಿ ಸರಿಪಡಿಸಬೇಕೆಂದು ಆಗ್ರಹ ಮಾಡಿದ್ದಾರೆ.
ಇಲ್ಲಿ ಎರಡು ಕಡೆ ವಾಹನಗಳು ಒಮ್ಮೆಲೆ ಬಂದು ದಾರಿ ಬಿಡುವ ಸಮಯದಲ್ಲಿ ಕೊಂಚ ರಸ್ತೆ ಬದಿಗೆ ಹೊದರು ಸಮಸ್ಯೆ ಉಂಟಾಗುತ್ತದೆ.ಅಧಿಕಾರಿಗಳು ಕೆಲ ದಿನಗಳ ಹಿಂದೆ ಎರಡು ಗೂಟ ನೆಟ್ಟು ಹಗ್ಗ ಕಟ್ಟಿ ಹೋಗಿದ್ದಾರೆ.ಇನ್ನು ಅಲ್ಲಿಂದ ಮುಂದೆ ತಿರುವಿನಲ್ಲಿ ದೊಡ್ಡ ಕಬ್ಬಿಣದ ಪೈಪ್ ಹಾದುಹೋಗಿರುವ ಟ್ಯಾಂಕ್ ಒಂದರ ಗೋಡೆ ಬಿದ್ದು ಹೋಗಿದ್ದು ಇದು ಕೂಡ ಅಪಾಯದ ಸ್ಥಳವಾಗಿದೆ. ಈ ಟ್ಯಾಂಕಿನ ಒಂದು ಕಡೆ ತೆರೆಡಿದ್ದು ಕಬ್ಬಿಣದ ಸರಳುಗಳು ಹೊರಬಂದಿವೆ.ಬೈಕ್ ಸವಾರರು ಹಾಗು ಕಾರುಗಳು ಅದಕ್ಕೆ ಡಿಕ್ಕಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು ಕೂಡಲೇ ಅದನ್ನು ದುರಸ್ತಿ ಗೊಳಿಸುವುದೋ ಅಥವಾ ತೆರವುಗೊಳಿಸುವುದೋ ಯಾವುದಾದರು ಒಂದನ್ನು ಮಾಡಬೇಕಿದೆ.
ಇದರ ಜೊತೆಗೆ ಈ ರಸ್ತೆಯ ಹಲವೆಡೆ ದೊಡ್ಡ ಗಾತ್ರದ ಒಣ ಮರಗಳು ಬೀಳುವ ಹಂತದಲ್ಲಿ ಇವೆ.ಕೂಡಲೆ ಇವುಗಳನ್ನು ತೆರವು ಮಾಡಬೇಕಿದೆ ಎಂದು ಮನವಿ ಮಾಡಿಕೊಳ್ಳಲಾಗಿದೆ.