ಕೊರಟಗೆರೆ, ಮೇ 8, 2025: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶದಂತೆ, 2024 ರ ಡಿಸೆಂಬರ್ 7ರಂದು ಜಾರಿ ಮಾಡಲಾದ ತೀರ್ಮಾನದ ಪ್ರಕಾರ, ಕಡಿಮೆ ದಾಖಲೆ ಹೊಂದಿರುವ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳನ್ನು ಉನ್ನತೀಕರಣಗೊಳಿಸಲು, ಸ್ಥಳಾಂತರಗೊಳಿಸಲು ಅಥವಾ ವಿಲೀನ ಮಾಡುವ ಪ್ರಕ್ರಿಯೆ ಸರ್ಕಾರದಿಂದ ತೀರ್ಮಾನಿಸಲಾಯಿತು.
ಈ ಹಿನ್ನಲೆಯಲ್ಲಿ, ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಮತ್ತು ಗೋಡ್ರಹಳ್ಳಿ ಗ್ರಾಮದಲ್ಲಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಾಗಿ ಪರಿವರ್ತಿಸಲಾಗಿದೆ. ಇದರಿಂದ, ಕೊರಟಗೆರೆ ಪಟ್ಟಣದಲ್ಲಿ ಮತ್ತು ದೊಡ್ಡಸಾಗ್ಗೆರೆ ಗ್ರಾಮದಲ್ಲಿ ನೂತನ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ಬಾಡಿಗೆ ಕಟ್ಟಡಗಳ ಅಗತ್ಯವಿದೆ.

ಹಿಂದಿನ ಆದೇಶದಲ್ಲಿ ತಿಳಿಸಲಾಗಿದೆ, ಕೊರಟಗೆರೆ ಪಟ್ಟಣ ಮತ್ತು ದೊಡ್ಡಸಾಗ್ಗೆರೆ ಗ್ರಾಮಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ಆರಂಭಿಸಲು ಅಗತ್ಯವಿರುವ ಬಾಡಿಗೆ ಕಟ್ಟಡಗಳನ್ನು ನೀಡಲು ಮಾಲೀಕರು, ತಾಲ್ಲೂಕು ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊರಟಗೆರೆ ಇವರನ್ನು ಖುದ್ದು ಭೇಟಿ ನೀಡಲು ಅಥವಾ ದೂರವಾಣಿ ಸಂಖ್ಯೆ 9986823701 ಗೆ ಸಂಪರ್ಕಿಸಬೇಕೆಂದು ಸರ್ಕಾರ ಕೋರಿದೆ.
- ಶ್ರೀನಿವಾಸ್, ಕೊರಟಗೆರೆ