ಚಿಕ್ಕಮಗಳೂರು, ಮೇ.07:- ತಾಲ್ಲೂಕಿನ ಲಕ್ಕುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ಥಳೀ ಯ ಯುವಕ-ಯುವತಿಯರಿಗೆ ಅನುಕೂಲವಾಗಲು ಗ್ರಂಥಾಲಯ, ಕಂಪ್ಯೂಟರ್, ಇಂಟರ್ ವ್ಯವಸ್ಥೆಯ ನ್ನು ಕಲ್ಪಿಸಲಾಗಿದೆ ಎಂದು ಪಿಡಿಓ ಮಂಜೇಗೌಡ ತಿಳಿಸಿದರು.
ಪಂಚಾಯಿತಿ ಕಟ್ಟಡದ ಎರಡು ಕೊಠಡಿಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್, ಇಂಟರ್ ವ್ಯವಸ್ಥೆ ಕಲ್ಪಿಸ ಲಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕರು ಡೌನ್‌ಲೋಡ್ ಮಾಡಿಕೊಂಡು ಅಭ್ಯಾಸಿಕೊಳ್ಳಬಹುದು. ಅಲ್ಲದೇ ಜ್ಞಾನಾರ್ಜನೆ ವೃದ್ದಿಗೊಳ್ಳಲು ಎರಡನೇ ಕೊಠಡಿಯಲ್ಲಿ ಗ್ರಂಥಾಲಯವನ್ನು ತೆರೆಯಲಾಗಿದ್ದು ಸದು ಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಸ್ತುತ ಆರು ಗ್ರಾಮಗಳನ್ನು ಒಳಗೊಂಡಿರುವ ಪಂಚಾಯಿತಿ ಇದಾಗಿದೆ. ಇತ್ತೀಚೆಗೆ ಕೆಲವು ತಾಂತ್ರಿಕ ದೋಷದಿಂದ ಕೆಲವು ತೊಂದರೆಯಾಗಿತ್ತು. ಇದೀಗ ಸಕಲ ಸವಲತ್ತನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ರುದ್ರೇಶ್ ಹಾಗೂ ಸ್ಥಳೀಯ ಗ್ರಾಮ ಸ್ಥರು ಹಾಜರಿದ್ದರು.
– ಸುರೇಶ್ ಎನ್.