ಕೆ ಆರ್ ಪೇಟೆ – ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ,ಸತ್ಯಕ್ಕೆ ಎಂದಿಗೂ ಸಾವಿಲ್ಲ,ನ್ಯಾಯಕ್ಕೆ ಜಯ ಎಂಬ ಸಂದೇಶವನ್ನು ಸಾರುತ್ತಿವೆ ಎಂದು ಮನ್ಮುಲ್ ನಿರ್ದೇಶಕರಾದ ಡಾಲುರವಿ ಅಭಿಪ್ರಾಯಪಟ್ಟರು.
ತಾಲ್ಲೋಕಿನ ಸಂತೇಬಾಚಹಳ್ಳಿ ಹೋಬಳಿಯ ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆತ್ತಗೋನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸರ್ಪಲಾಂಛನ ದಿಗ್ವಿಜಯ ಅಥವಾ ಬೀಮ ದುರ್ಯೋದನನ ಗದಾಯುದ್ದ ಎಂಬ ಸುಂದರ ಪೌರಾಣಿಕ ನಾಟಕವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾನಾಡಿದ ಅವರು, ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ.

ನಮ್ಮ ಸುತ್ತ ಮುತ್ತಲಿನಲ್ಲಿ ವಾಸಿಸುವ ಜನರ ಜೀವನದ ಮೌಲ್ಯಗಳನ್ನು ಪಾತ್ರಧಾರಿಗಳ ಮೂಲಕ ಕಾಣುತ್ತಿರುವ ನಾವು ಸತ್ಯಕ್ಕೆ ಎಂದಿಗೂ ಸಾವಿಲ್ಲ,ಅನ್ಯಾಯ ಅಕ್ರಮಗಳು ಹೆಚ್ಚು ದಿನಗಳು ಉಳಿಯುವುದಿಲ್ಲ ಎಂಬ ಅಂಶಗಳನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದ ಅವರು ನಾವು ಸಾಧನೆ ಮಾಡಲು ಕಷ್ಟವಾದರೂ ನ್ಯಾಯ,ನೀತಿ,ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗುವ ಮೂಲಕ ಗುರಿ ಮುಟ್ಟೋಣ ಎಂದು ಕರೆ ನೀಡಿದರು.

ಸಾರಂಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ ಮುಂದುವರೆದ ವಿಜ್ಞಾದಲ್ಲಿ ಎಲ್ಲವೂ ಅಂಗೈನಲ್ಲಿ ಇದ್ದರೂ ಇತಿಹಾಸವನ್ನು ಸಾರುವ ಪೌರಾಣಿಕ ನಾಟಕಗಳು ಪಾರಂಪರಿಕ ಉಳಿಯಬೇಕಿದೆ ಇಂದು ಹೆತ್ತಗೋನಹಳ್ಳಿ ಗ್ರಾಮಸ್ಥರಿಗೆ ಅಭಿನಯಿಸುತ್ತಿರುವ ನಾಟಕಕ್ಕೆ ಶುಭಹಾರೈಸಿದರು.

ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ತಾಲ್ಲೋಕು ಬಿಜೆಪಿ ಘಟಕದ ಅಧ್ಯಕ್ಷ ಸಾರಂಗಿ ನಾಗರಾಜು ಮಾತನಾಡಿ ಯಾವಾಗಲೂ ಸತ್ಯಕ್ಕೆ ಜಯ, ಅಸತ್ಯಕ್ಕೆ ಅಪಜಯ ಎಂಬುದನ್ನು ನಾವು ಕುರುಕ್ಷೇತ್ರ ನಾಟಕದ ಮೂಲಕವೆ ತಿಳಿಯಬೇಕಾಗಿದೆ ಯಾರು ಯಾರಿಗೆ ಮೋಸ ಮಾಡಿದರೂ ಕೊನೆಗೆ ಸತ್ಯಕ್ಕೆ ಜಯ ನಿಶ್ಚಿತ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಸಾರಂಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್, ಕೃಷಿಕ ಸಮಾಜದ ನಿರ್ದೇಶಕ ಹೆಚ್ ಜೆ ನಾರಾಯಣಗೌಡ,ಮಾಜಿ ಗ್ರಾ,ಪಂ ಅಧ್ಯಕ್ಷ ಸುರೇಶ್,ಹಿರಿಯ ಮುತ್ಸದಿ ನಿವೃತ್ತ ಶಿಕ್ಷಕ ರಂಗೇಗೌಡ,ಗ್ರಾ,ಪಂ ಸದಸ್ಯ ಮಹೇಶ್,ಮಾಜಿ ಸದಸ್ಯ ಶಿವಕುಮಾರ್,ಜಾಗಿನಕೆರೆ ಡೈರಿ ಅಶೋಕ್,ಅಂಬರೀಶ್ ಕೈಗೋನಹಳ್ಳಿ ವೀರಾಜೇಗೌಡ,ಮಾಜಿ ಗ್ರಾ,ಪಂ ಸದಸ್ಯ ಜೆಎನ್ ಧರ್ಮ,ಶಿವಣ್ಣಸ್ವಾಮಿ,ವೆಂಕಟೇಶ್, ಚಲುವೇಗೌಡ,ಸೇರಿದಂತೆ ಹಲವಾರು ಗ್ರಾಮಸ್ಥರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.