ತುಮಕೂರು: ನಗರದ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ,ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಮತ್ತು ನಾಗರೀಕ ಸಮಿತಿಗಳ ಸದಸ್ಯರುಗಳು ಇಂದು ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನಲೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಭಾರತೀಯ ಸೈನಿಕರಿಗೆ ಆಯಸ್ಸು,ಆರೋಗ್ಯ ಹೆಚ್ಚಾಗಲಿ,ಭಾರತ ಪಾಕಿಸ್ತಾನ ಯುದ್ಧದಲ್ಲಿ ಗೆದ್ದು ಬರಲಿ ಎಂದು ಕೋರಿ ವಿಶೇಷ ಪೂಜೆ ಸಲ್ಲಿಸಿ ಮಾಜಿ ಯೋಧರಿಗೆ ಸನ್ಮಾನಿಸಿ ಗೌರವಿಸಿದರು.

ಕಾರ್ಗಿಲ್ ನಲ್ಲಿ ಯುದ್ಧ ಮಾಡಿದ್ದ ಮಾಜಿ ಸೈನಿಕರಾದ ಉಮಾಮಹೇಶ್ವರರವರು ಮಾತನಾಡುತ್ತಾ ನಾವು ದೇಶಕ್ಕಾಗಿ ಸೇವೆ ಸಲ್ಲಿಸಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ,ಭಾರತೀಯರು ಪ್ರತಿ ಕುಟುಂಬದಲ್ಲಿ ಒಬ್ಬರು ಸೈನ್ಯದಲ್ಲಿದ್ದು ದೇಶ ಸೇವೆ ಮಾಡಬೇಕು ಅದು ಭಗವಂತನ ಸೇವೆ, ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಕ್ಷಣಗಳನ್ನು ನಾಗರೀಕರಿಗೆ ತಿಳಿಸಿದರು.

ಮತ್ತೊಬ್ಬರು ನಿವೃತ್ತ ಯೋಧರಾದ ಮೋಹನ್ ಮಾತನಾಡುತ್ತಾ ದೇಶಕ್ಕಾಗಿ ದುಡಿಯೋಣ ದೇಶ ಸಂಕಷ್ಟದಲ್ಲಿದ್ದಾಗ ಎಲ್ಲರೂ ಕೈಜೋಡಿಸೋಣ ಸೈನಿಕರು ಪಡುವ ಕಷ್ಟಗಳನ್ನು ವಿವರಿಸುತ್ತಾ ಯಾರೂ ಸಹ ಸೈನಿಕರ ವಿರುದ್ಧ ಮಾತನಾಡಬಾರದು ಚೈನಾ ಬಾರ್ಡರ್,ಕಾಶ್ಮೀರ ಬಾರ್ಡರ್ ಗಳಲ್ಲಿ ಒಂದು ದಿನ ಸೇವೆ ಸಲ್ಲಿಸಿದರೆ ಸೈನಿಕರ ಕಷ್ಟ ಗೊತ್ತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್,ಕಾರ್ಯದರ್ಶಿ ಗೀತಾ ನಾಗೇಶ್,ನಂದಿನಿ, ಲತಾನಾರಾಯಣ್, ಶೈಲಜಾ, ಮಂಜಣ್ಣ, ಗೋವಿಂದರಾಜು, ನವೀನ್, ಚೇತನ್, ರೂಪ, ಅಂಬಿಕಾಮಹೇಶ್, ಶಾರದಮ್ಮ, ನಂಜುಂಡರಾವ್, ಜ್ಯೋತಿಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ