ತುಮಕೂರು: ಕಣ್ಣು ದೇಹದ ಪ್ರಮುಖ ಅಂಗ ಮತ್ತು ಸೂಕ್ಷ್ಮ ಅಂಗ,ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಿ,ಗೃಹರಕ್ಷಕರು ನಮ್ಮ ದೇಶದ ಆಸ್ತಿ,ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ,ಹಗಲು ರಾತ್ರಿ ಪೋಲೀಸರೊಂದಿಗಿದ್ದು ಸಮಾಜವನ್ನು ಕಾಪಾಡುವ ಜೀವಗಳು ಆದ್ದರಿಂದ ಅವರ ಕಣ್ಣನ್ನು ನಾವು ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ದ ಅಧ್ಯಕ್ಷ ರಮೇಶ್ ರವರು ತಿಳಿಸಿದರು.
ಅವರು ಇಂದು ಕ್ಯಾತ್ಸಂದ್ರದ ಗೃಹರಕ್ಷಕದಳದ ಘಟಕಾಧಿಕಾರಿಗಳ ಕಚೇರಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು,ಅವರ ಕುಟುಂಬ ಸದಸ್ಯರಿಗೆ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ಮತ್ತು ವಾಸನ್ ಐ ಕೇರ್ ಸಂಸ್ಥೆ ಸಹಯೋಗದೊಂದಿಗೆ ಉಚಿತ ಕಣ್ಣು ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಗೃಹರಕ್ಷಕರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಪ್ರತಿ ವರ್ಷಕ್ಕೊಮ್ಮೆ ಎಲ್ಲರೂ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು, ರೋಗ ಇರಲಿ ಇಲ್ಲದಿರಲಿ ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಪ್ರತಿ ವರ್ಷಕ್ಕೊಮ್ಮೆ ದೇಹ,ಕಣ್ಣು,ಇತರೆ ಎಲ್ಲ ಅಂಗಾಂಗಗಳ ತಪಾಸಣೆ ಮುಖ್ಯ, ವೈದ್ಯರ ಸಲಹೆಯಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ದ ಕಾರ್ಯದರ್ಶಿ ಗೀತಾನಾಗೇಶ್ ರವರು ಮಾತನಾಡಿ, ಪೋಲೀಸರು ನಮ್ಮ ಸಮಾಜಕ್ಕೆ ಎಷ್ಟು ಮುಖ್ಯವೋ ಗೃಹರಕ್ಷಕರು ಸಹ ಅಷ್ಟೇ ಮುಖ್ಯ,ಗೃಹರಕ್ಷಕರು ಸದಾ ಒತ್ತಡದಲ್ಲಿರುತ್ತಾರೆ ಕಾನೂನು ಸುವ್ಯವಸ್ಥೆ ಕಾಪಾಡಲು ಅವರ ಕೊಡುಗೆ ಸಮಾಜಕ್ಕೆ ಅತ್ಯಂತ ಅವಶ್ಯ ಮತ್ತು ದೊಡ್ಡದು. ಈ ನಿಟ್ಟಿನಲ್ಲಿ ಅವರು ಆಸ್ಪತ್ರೆಗೆ ತೆರಳಿ ಹಣ ನೀಡಿ ಕಣ್ಣು ತೋರಿಸುವುದು ಕಷ್ಟ ಜೊತೆಗೆ ಹಣ ಮತ್ತು ಸಮಯದ ಅಭಾವದಿಂದ ನಾವು ನಮ್ಮ ಟ್ರಸ್ಟ್ ನಿಂದ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಟಕಾಧಿಕಾರಿ ನವ್ಯ,ಶ್ರೀಮತಿಜ್ಯೋತಿಆಚಾರ್ಯ,ನವೀನ್,ಶ್ರೀನಿವಾಸಮೂರ್ತಿ,ನಂಜುಂಡಪ್ಪ ಮತ್ತು ವಾಸನ್ ಐ ಕೇರ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ