ಕೆ ಆರ್ ಪೇಟೆ -ಸಾರಂಗಿ ನಾಗರಾಜು ನೇತೃತ್ವದಲ್ಲಿ ಭಾರತದ ಹೆಮ್ಮೆಯ ಸೈನಿಕರಿಗೆ ಗೆಲುವಾಗಲೆಂದು ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ

ಕೆ ಆರ್ ಪೇಟೆ – ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧದಲ್ಲಿ,ನಮ್ಮ ದೇಶದ ಸೈನಿಕರಿಗೆ, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ,ಅವರ ತಂಡಕ್ಕೆ ಹಾಗೂ ಭಾರತದ ಎಲ್ಲಾ ಪ್ರಜೆಗಳಿಗೂ ಭಗವಂತನ ರಕ್ಷಾಕವಚ ದೊರಕಲಿ ಎಂಬ ಸಂಕಲ್ಪದೊಡನೆ ಇಂದು‌ ಪಟ್ಟಣದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ಸಾರಂಗಿ ನಾಗರಾಜು ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಸಾರಂಗಿ ನಾಗರಾಜು ಮಾತನಾಡಿ ಪ್ರಸ್ತುತವಾಗಿ ನೆಡೆಯುತ್ತಿರುವ ಭಾರತ ಪಾಕಿಸ್ತಾನ ಯುದ್ದದಲ್ಲಿ ನಮ್ಮಹೆಮ್ಮೆಯ ಭಾರತೀಯ ಸೈನಿಕರಿಗೆ ಯಾವೂದೇ ತೊಂದರೆಯಾಗದಂತೆ ಗೆದ್ದು ಬರಲಿ ಪಾಕಿಸ್ತಾನದವರು ಬಾಲ ಬಿಚ್ಚಿದರೆ ಭಾರತೀಯರಾದ ನಾವೆಲ್ಲರೂ ಪಾಕಿಸ್ತಾನದ ಒಳನುಗ್ಗಿ ಹೊಡೆಯಲು‌ ಸಿದ್ದರಾಗಿದ್ದೇವೆ ಪಾಕಿಸ್ತಾನವು ಭಾರತದಿಂದಲೇ ಸರ್ವನಾಶವಾಗಲಿದೆ ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪರಮೇಶ್ ಅರವಿಂದ್,ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್,ಶಿಲ್ಪ,ನಾಗಮಣಿ,ಜಿಪಿ ರಾಜು,ಗೋವಿಂದಣ್ಣ,ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?