ಕೆ.ಆರ್.ಪೇಟೆ, ಮೇ 9: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಬಳ್ಳೇಕೆರೆ ಮಂಜುನಾಥ್ ಅವರು ಶೈಕ್ಷಣಿಕ ವಲಯದಲ್ಲಿ 37 ವರ್ಷಗಳ ವಿಶೇಷ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ, ಅವರಿಗೆ ಮೇ 10 ರಂದು ಹೃದಯಸ್ಪರ್ಶಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಆಡಳಿತ ಮಂಡಳಿ ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ಆಯೋಜಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಬದ್ಧತೆ, ಕಠಿಣ ಪರಿಶ್ರಮ, ನಿಷ್ಠುರವಾಗಿ ವಿದ್ಯಾರ್ಥಿ ಕಲ್ಯಾಣಕ್ಕಾಗಿ ನಿಂತ ಬಳ್ಳೇಕೆರೆ ಮಂಜುನಾಥ್ ಅವರು ಶಿಕ್ಷಕ ಮಾತ್ರವಲ್ಲ, ಹಿರಿಯ ಪತ್ರಕರ್ತರೂ ಆಗಿದ್ದರು ಎಂಬುದು ಅವರ ಸೇವೆಯ ವಿಶಿಷ್ಟತೆಯಾಗಿದೆ.
ಅವರ ಸೇವೆಯನ್ನು ಸ್ಮರಿಸಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ, ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಈ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸಿ.ಬಿ. ಚೇತನ್ ಕುಮಾರ್ ಅವರು ಮಾತನಾಡಿ, “ನಮ್ಮ ಹಿರಿಯಣ್ಣ ಮಂಜುನಾಥ್ ರವರಿಗೆ ಸಮರ್ಪಕ ಗೌರವ ಸೂಚಿಸಲು, ಎಲ್ಲ ಹಿತೈಷಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು,” ಎಂಬ ಮನವಿ ಮಾಡಿಕೊಂಡಿದ್ದಾರೆ.
- ಶ್ರೀನಿವಾಸ್ ಆರ್.