ಹುಬ್ಬಳ್ಳಿ: ಭಾರತದ ಮುಂಚೂಣಿ ವ್ಯಾಪಾರ ಆಟೋಮೇಶನ್ ಸಾಫ್ಟ್ವೇರ್ ಪ್ರೊವೈಡರ್ ಸಂಸ್ಥೆಯಾದ ಟ್ಯಾಲಿ ಸಲ್ಯೂಶನ್ಸ್ ಪ್ರೈ ಲಿ., ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗಾಗಿ ಹಣಕಾಸು ಕಾರ್ಯಾಚರಣೆಗಳನ್ನು ಸರಳೀಕರಿಸಿ, ಅದನ್ನು ಕನೆಕ್ಟೆಡ್ ಬ್ಯಾಂಕಿಂಗ್ ಅನುಭವದ ಮೂಲಕ ಅಡಚಣೆರಹಿತಗೊಳಿಸುವುದಕ್ಕಾಗಿಯೇ ವಿನ್ಯಾಸಗೊಳಿಸಿದ ತನ್ನ ಇತ್ತೀಚಿನ ಬಿಡುಗಡೆ ಟ್ಯಾಲಿ ಪ್ರೈಮ್ 6.0ಅನ್ನು ಪರಿಚಯಿಸಿದೆ.
ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರ ಬ್ಯಾಂಕ್ ಮುಂತಾದ ಮುಂಚೂಣಿ ಬ್ಯಾಂಕ್‌ಗಳೊಂದಿಗೆ ಸಹಯೋಗ ಮತ್ತು ಸರಳೀಕೃತ ಹಣಕಾಸು ನಿರ್ವಹಣೆಗಾಗಿ ಅನೇಕ ಟೂಲ್‌ಗಳು ಸಹಾಯ ಮಾಡಲಿವೆ,ಈ ಅತ್ಯಾಧುನಿಕ ನವೀಕರಣವು ವ್ಯಾಪಾರ ಸಂಸ್ಥೆಗಳು ಹಾಗೂ ಲೆಕ್ಕಾಧಿಕಾರಿಗಳಿಗಾಗಿ ಬ್ಯಾಂಕ್ ರಿಕನ್ಸಿಲಿಯೇಶನ್, ಬ್ಯಾಂಕಿಂಗ್ ಆಟೋಮೇಶನ್ ಮತ್ತು ಹಣಕಾಸು ನಿರ್ವಹಣೆಯನ್ನು ಕ್ರಾಂತಿಗೊಳಿಸಿದೆ.

ಟ್ಯಾಲಿ ಸಲ್ಯೂಶನ್ಸ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ತೇಜಸ್ ಗೋಯೆಂಕ ಮಾತನಾಡುತ್ತಾ ಇ-ಇನ್ವಾಯ್ಸಿಂಗ್, ಇ-ವೇ ಬಿಲ್ ಉತ್ಪತ್ತಿ ಹಾಗೂ ಜಿಎಸ್‌ಟಿ ಅನುಸರಣೆಯಂತಹ ಸಂಪರ್ಕಗೊಂಡ ಸೇವೆಗಳನ್ನು ಒದಗಿಸುವಲ್ಲಿ ತನ್ನ ನೈಪುಣ್ಯತೆಯ ಮೇಲೆ ನಿರ್ಮಾಣ ಮಾಡಿಕೊಳ್ಳುತ್ತಾ, ಟ್ಯಾಲಿ, ಸಂಯೋಜಿತ ಬ್ಯಾಂಕಿಂಗ್ ಸಾಮರ್ಥ್ಯಗಳೊಂದಿಗೆ ಎಸ್‌ಎಮ್‌ಇಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆ ಇರಿಸಿದೆ. ಈ ಹೊಸ ಬಿಡುಗಡೆಯು, ವ್ಯಾಪಾರ ಸಂಸ್ಥೆಗಳು, ತಮ್ಮ ಪರಿಸರವ್ಯವಸ್ಥೆಗಳೊಡನೆ ಸಂಪರ್ಕಗೊಂಡು ಅವರು ಸರಿಸಾಟಿಯಿಲ್ಲದ ಸರಳತೆಯೊಂದಿಗೆ ಕಾರ್ಯಾಚರಣೆ ನಡೆಸುವುದಕ್ಕೆ ಅನುಕೂಲತೆ ಒದಗಿಸುವ ಟ್ಯಾಲಿಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಈ ಬಿಡುಗಡೆಯು, ವರ್ಧಿತ ಬ್ಯಾಂಕ್ ರಿಕನ್ಸಿಲಿಯೇಶನ್, ಹಣಕಾಸು ಸಂಸ್ಥೆಗಳ ಸಂಪರ್ಕಗಳ ಮೂಲಕ ಕಾರ್ಯಾಚರಣೆ ಬಂಡವಾಳ ಗರಿಷ್ಟೀಕರಣ ಮುಂತಾದ ಇತರ ಅನೇಕ ಅಂಶಗಳೊಂದಿಗೆ ಬರುತ್ತದೆ ಮತ್ತುಸಂಪರ್ಕಗೊಂಡ ಇ-ಇನ್ವಾಯ್ಸಿಂಗ್ ಮತ್ತು ಇ-ವೇ ಬಿಲ್ ಉತ್ಪತ್ತಿಯೊಂದಿಗೆ ಜಿಎಸ್‌ಟಿ ಅನುಸರಣೆಯ ಪ್ರಸ್ತುತದ ಸಾಮರ್ಥ್ಯಗಳನ್ನು ಇನ್ನಷ್ಟು ವರ್ಧಿಸುತ್ತದೆ.” ಎಂದು ಹೇಳಿದರು.
- ಕೆ.ಬಿ.ಚಂದ್ರಚೂಡ