ಚಿಕ್ಕಮಗಳೂರು, ಮೇ 12: “ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಮೇ 13ರಂದು ಸಂಜೆ 4ಕ್ಕೆ ರೇಣುಕಾಚಾರ್ಯ ಕಲ್ಯಾಣ ಮಂಟಪದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ನಡೆಯಲಿರುವ ಸರ್ವ ಶರಣರ ಜಾಥಾದಲ್ಲಿ ಸಮಾಜ ಬಾಂಧವರು ಬಹುಸಂಖ್ಯೆಯಲ್ಲಿ ಭಾಗವಹಿಸಬೇಕು,” ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ರುದ್ರಮುನಿ ಮನವಿ ಮಾಡಿದರು.

ಜಾಥಾದಲ್ಲಿ ಶರಣರ ಸ್ಥಬ್ಧಚಿತ್ರ, ವೀರಗಾಸೆ, ಡೊಳ್ಳುಕುಣಿತ, ಜಾನಪದ ಕಲಾತಂಡಗಳು ಹಾಗೂ ಹೆಸರಾಂತ ಡಿಜೆ ಕಲಾಪ್ರಸ್ತುತಿ ಕೂಡ ನಡೆಯಲಿದೆ. ಸಂಜೆ 7ಕ್ಕೆ ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ವಿವಿಧ ಸ್ವಾಮೀಜಿಗಳು ಭಾಗವಹಿಸಲಿದ್ದು, ಸಮಾಜವನ್ನು ಒಂದುಗೂಡಿಸಲು ಕೈಬಲ ನೀಡಬೇಕು ಎಂದು ಅವರು ಹೇಳಿದರು.
- ಸುರೇಶ್ ಎನ್.