ಚಿಕ್ಕಮಗಳೂರು :- ಮೆಕ್ಯಾನಿಕಲ್ ಇಂಜಿನಿಯರಿಂಗ್ ರೋಬೋಟ್‌ಗಳ ಯಾಂತ್ರಿಕ ಭಾಗಗಳ ನ್ನು ವಿನ್ಯಾಸಿಸಲು ಹಾಗೂ ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ಧಿವಂತಿಕೆ ನೀಡಲು ಪೂರಕವಾಗಿದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ರೊಬೊಟಿಕ್ ಮತ್ತು ಎಐ ಇಂಜಿನಿಯರಿಂಗ್ ಯಾಂತ್ರಿಕ-2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ದಿಮತ್ತೆ, ಯಂತ್ರಕಲಿಕೆ ಮತ್ತು ಸಂವೇಧಕ ತಂತ್ರಜ್ಞಾನಗಳಲ್ಲಿನ ಪ್ರಗತಿಗಳು ರೋಬೊಟಿಕ್ಸ್ ನೊಳಗಿನ ಸಾಧ್ಯತೆಗಳು ಮತ್ತು ಅನ್ವಯಿಕೆಗಳನ್ನು ನಿರಂತರವಾಗಿ ವಿಸ್ತರಿಸುತ್ತದೆ. ಅಲ್ಲದೇ ಮುಂದುವರಿಸಲು ಒಂದು ರೋಮಾಂಚಕಾರಿ ಹಾಗೂ ಕ್ರಿಯಾತ್ಮಕ ಕ್ಷೇತ್ರವಾಗಿದೆ ಎಂದು ತಿಳಿಸಿದರು.

ರೋಬೋಟಿಕ್ ವ್ಯವಸ್ಥೆಗಳ ಪರಿಕಲ್ಪನೆ, ಅಭಿವೃದ್ದಿ ಮತ್ತು ಅನುಷ್ಟಾನದಲ್ಲಿ ಪರಿಣತಿ, ವ್ಯಾಪಕ ಕೌಶಲ್ಯ ಹೊಂದಿರುವ ವೃತ್ತಿಪರ, ಸ್ವತಂತ್ರö್ಯವಾಗಿ ಅಥವಾ ಕನಿಷ್ಟ ಮಾನವ ಹಸ್ತಕ್ಷೇಪದೊಂದಿಗೆ ವ್ಯಾಪಕ ಶ್ರೇಣಿಯ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಬುದ್ದಿವಂತ ಯಂತ್ರಗಳನ್ನು ರಚಿಸುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದರು.
ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗ ಅತ್ಯಂತ ಹಳೆಯ ಮತ್ತು ಬಹುಮುಖ ವಿಭಾಗಗಳಲ್ಲಿ ಒಂದಾಗಿದೆ. ಭವಿಷ್ಯದ ವಾಹನಗಳನ್ನು ವಿನ್ಯಾಸಗೊಳಿಸುವುದು, ಇಂಧನ ವ್ಯವಸ್ಥೆಗಳನ್ನು ಸುಧಾರಿಸುವುದು, ರೋಬೋಟಿಕ್ ಯಾಂತ್ರೀಕರಣವನ್ನು ಅಭಿವೃದ್ಧಿಪಡಿಸುವುದು, ಮೆಕ್ಯಾನಿಕಲ್ ಎಂಜಿನಿಯರಿAಗ್ ವ್ಯಾಪ್ತಿ ಯು ಊಹಿಸಬಹುದಾದ ಉದ್ಯಮವಾಗಿದೆ ಎಂದು ತಿಳಿಸಿದರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ.ಸತ್ಯನಾರಾಯಣ್ ಮಾತನಾಡಿ ಮೆಕ್ಯಾನಿಕಲ್ ಇಂಜಿನಿಯರಿAಗ್ ರೊಬೊಟಿಕ್ ಕೋರ್ಸ್ ರೊಬೊಟಿಕ್ಸ್ ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಅನುಷ್ಠಾನದ ಸಮಗ್ರ ತಿಳುವಳಿಕೆಯನ್ನು ನೀಡುತ್ತದೆ. ವೈವಿಧ್ಯಮಯ ತಾಂತ್ರಿಕ ಪಾತ್ರಗಳಿಗೆ ಕೌಶಲ್ಯ ಅಭಿ ವೃದ್ಧಿಯನ್ನು ಬೆಳೆಸುತ್ತದೆ ಎಂದರು.
ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಡಾ|| ಎಸ್.ಸಂಪತ್ ಮಾತನಾಡಿ ಇಂದಿನ ಆಧುನಿಕತೆ ಯುಗದಲ್ಲಿ ಪ್ರಪಂಚವು ಹೊಸ ಹೊಸ ತಂತ್ರಜ್ಞಾನಗಳಿಂದ ಪ್ರತಿ ಕ್ಷೇತ್ರದಲ್ಲೂ ಪ್ರಗತಿಯನ್ನು ಕಾಣುತ್ತಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನಗಳೆಡೆ ಹೆಚ್ಚು ಆಸಕ್ತಿ ವಹಿಸುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಅತ್ಯುತ್ತಮವಾಗಿ ತೇರ್ಗಡೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಬಳಿಕ ವಿದ್ಯಾ ರ್ಥಿಗಳಿದ ಸ್ವಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ|| ವೀರೇಂದ್ರ, ಆಟಿಫಿಶಿಯ ಲ್ ಇಂಟಲಿಜೆಂಟ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥೆ ಡಾ|| ಎಂ.ಆರ್.ಸುನೀತಾ, ಸಿವಿಲ್ ಇಂಜಿನಿಯರ್ ಮುಖ್ಯಸ್ಥ ಡಾ|| ಕಿರಣ್, ಡಾಟಾ ಸೈನ್ಸ್ ಮುಖ್ಯಸ್ಥ ಡಾ|| ಎಂ.ಜಿ.ಆದರ್ಶ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರೇಷ್ಮಾ ನಿರೂಪಿಸಿದರು. ವಿನುತ ಸಂಗಡಿಗರು ಪ್ರಾರ್ಥಿಸಿದರು. ಡಾ|| ಜಿ.ಎಂ.ಸತ್ಯನಾರಾಯಣ್ ಸ್ವಾಗತಿಸಿದರು.
– ಸುರೇಶ್ ಎನ್.